Balekai mosaru kootu recipe in Kannada | ಬಾಳೆಕಾಯಿ ಮೊಸರು ಕೂಟು ಮಾಡುವ ವಿಧಾನ
ಬಾಳೆಕಾಯಿ ಮೊಸರು ಕೂಟು ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 2 ಬಾಳೆಕಾಯಿ
- 1/2 ಕಪ್ ಮೊಸರು ಅಥವಾ ದಪ್ಪ ಮಜ್ಜಿಗೆ
- ಉಪ್ಪು ರುಚಿಗೆ ತಕ್ಕಷ್ಟು
ಅರೆಯಲು ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಕಪ್ ತೆಂಗಿನತುರಿ
- 2 - 4 ಹಸಿಮೆಣಸಿನಕಾಯಿ
- 1 ಟೀಸ್ಪೂನ್ ಜೀರಿಗೆ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1/2 ಚಮಚ ಸಾಸಿವೆ
- 1 ಕೆಂಪು ಮೆಣಸಿನಕಾಯಿ
- ಒಂದು ಚಿಟಿಕೆ ಇಂಗು
- 5 - 6 ಕರಿಬೇವಿನ ಎಲೆ
- 2 ಟೀಸ್ಪೂನ್ ಎಣ್ಣೆ
ಬಾಳೆಕಾಯಿ ಮೊಸರು ಕೂಟು ಮಾಡುವ ವಿಧಾನ:
- ಬಾಳೆಕಾಯಿ ಸಿಪ್ಪೆ ತೆಗೆದು ಕತ್ತರಿಸಿ.
- ಕತ್ತರಿಸಿದ ಬಾಳೆಕಾಯಿಯನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಒಂದು ಚಮಚ ಉಪ್ಪು ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ
- ಮೆತ್ತಗಾಗುವವರೆಗೆ ಬೇಯಲು ಇಡಿ.
- ಆ ಸಮಯದಲ್ಲಿ ಮಿಕ್ಸಿ ಜಾರಿನಲ್ಲಿ ತೆಂಗಿನತುರಿ, ಜೀರಿಗೆ ಮತ್ತು ಹಸಿಮೆಣಸಿನಕಾಯಿಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ರುಬ್ಬಿ ಕೊಳ್ಳಿ.
- ರುಬ್ಬಿದ ಮಸಾಲೆಯನ್ನು ಬೇಯಿಸಿದ ಬಾಳೆಕಾಯಿಗೆ ಸೇರಿಸಿ.
- ನಿಮ್ಮ ರುಚಿ ಪ್ರಕಾರ ಉಪ್ಪು ಸೇರಿಸಿ.
- ಒಮ್ಮೆ ಕಲಸಿ. ಒಂದೆರಡು ನಿಮಿಷ ಕುದಿಸಿ ಸ್ಟವ್ ಆಫ್ ಮಾಡಿ.
- ಮಜ್ಜಿಗೆ ಅಥವಾ ಮೊಸರು ಸೇರಿಸಿ. ಮೊಸರು ಅಥವಾ ಮಜ್ಜಿಗೆ ಜಾಸ್ತಿ ಹುಳಿ ಇರುವುದು ಬೇಡ.
- ಎಣ್ಣೆ, ಸಾಸಿವೆ, ಕೆಂಪು ಮೆಣಸಿನಕಾಯಿ, ಇಂಗು ಮತ್ತು ಕರಿಬೇವಿನ ಒಗ್ಗರಣೆ ಹಾಕಿ. ಬಿಸಿ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ