French fries recipe in Kannada | ಫ್ರೆಂಚ್ ಫ್ರೈಸ್ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 2 ದೊಡ್ಡ ತಾಜಾ ಆಲೂಗಡ್ಡೆ
- ಉಪ್ಪು ನಿಮ್ಮ ರುಚಿ ಪ್ರಕಾರ
- ಎಣ್ಣೆ ಕಾಯಿಸಲು
ಫ್ರೆಂಚ್ ಫ್ರೈಸ್ ಮಾಡುವ ವಿಧಾನ:
- ಆಲೂಗಡ್ಡೆಯನ್ನು ಸಿಪ್ಪೆ ತೆಗೆದು ಚೆನ್ನಾಗಿ ತೊಳೆಯಿರಿ.
- ನಂತರ ಉದ್ದುದ್ದನಾಗಿ ಒಂದೇ ಅಳತೆಗೆ ಕತ್ತರಿಸಿ.
- ಕತ್ತರಿಸಿದ ನಂತ್ರ ತಾಜಾ ಆಲೂಗಡ್ಡೆ ಅಲ್ಲವಾದಲ್ಲಿ, ಸ್ವಲ್ಪ ಸಮಯ ನೀರಿನಲ್ಲಿ ನೆನೆಸಿಡಿ. ಅಥವಾ ಎರಡರಿಂದ ಮೂರು ಬಾರಿ ನೀರು ಬದಲಾಯಿಸಿ ತೊಳೆಯಿರಿ.
- ಆಮೇಲೆ ಒಂದು ಪಾತ್ರೆಯಲ್ಲಿ ನೀರು ಮತ್ತು ಸ್ವಲ್ಪ ಉಪ್ಪು (ಎರಡು ಆಲೂಗಡ್ಡೆಗೆ ಸುಮಾರು ಒಂದು ಚಮಚ ಉಪ್ಪು) ಹಾಕಿ ಕುದಿಯಲು ಇಡಿ.
- ಕುದಿಯುವ ನೀರಿಗೆ, ಕತ್ತರಿಸಿದ ಆಲೂಗಡ್ಡೆ ಹಾಕಿ ಎರಡು ನಿಮಿಷ ಕುದಿಸಿ.
- ಸ್ಟವ್ ಆಫ್ ಮಾಡಿ, ನೀರನ್ನು ಬಸಿಯಿರಿ.
- ನಂತ್ರ ಬಟ್ಟೆಯ ಮೇಲೆ ಹರಡಿ.
- ನೀರಾರಿದ ಮೇಲೆ (ಸುಮಾರು ೧೫ ನಿಮಿಷ) ಎಣ್ಣೆಯಲ್ಲಿ ಖಾಯಿಸಬಹುದು. ಹೆಚ್ಚು ಗರಿಗರಿಯಾಗಲು, ಒಂದು ಜಿಪ್ ಲಾಕ್ ಕವರ್ ಗೆ ಹಾಕಿ ಫ್ರೀಜರ್ ನಲ್ಲಿ ಇಪ್ಪತ್ತು ನಿಮಿಷ ಇಟ್ಟು ನಂತರ ಖಾಯಿಸಿ. ಫ್ರೀಜರ್ ನಲ್ಲಿ ಕೆಲವು ದಿನಗಳ ಕಾಲ ಇಟ್ಟು ಯಾವಾಗ ಬೇಕೋ ಅವಾಗ ಖಾಯಿಸಬಹುದು.
- ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಬಿಸಿ ಎಣ್ಣೆಗೆ ಫ್ರೀಜರ್ ನಲ್ಲಿ ಇಟ್ಟ ಆಲೂಗಡ್ಡೆ ಹಾಕಿ ಕಾಯಿಸಿ.
- ಗುಳ್ಳೆಗಳು ಕಡಿಮೆ ಆದಮೇಲೆ, ಸಣ್ಣ ಉರಿಯಲ್ಲಿ ಸ್ವಲ್ಪ ಹೊತ್ತು ಕಾಯಿಸಿ, ತೆಗೆಯಿರಿ.
- ಟೊಮೇಟೊ ಸಾಸ್ ನೊಂದಿಗೆ ಬಡಿಸಿ. ಅಥವಾ ಒಂದು ಸಣ್ಣ ಬಟ್ಟಲಿನಲ್ಲಿ ಅಚ್ಚಖಾರದ ಪುಡಿ, ಉಪ್ಪು ಮತ್ತು ಇಂಗು ಹಾಕಿ ಕಲಸಿ ಮಸಾಲೆ ಪುಡಿ ಸಿದ್ಧ ಮಾಡಿ, ಕಾಯಿಸಿದ ಫ್ರೆಂಚ್ ಫ್ರೈಸ್ ಗೆ, ಮೇಲಿನಿಂದ ಮಸಾಲೆ ಹುಡಿ ಉದುರಿಸಿ. ಚಹಾ ಅಥವಾ ಕಾಫಿಯೊಂದಿಗೆ ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ