Sambar butti recipe in Kannada | ಸಾಂಬಾರ್ ಬುತ್ತಿ ಮಾಡುವ ವಿಧಾನ
ಸಾಂಬಾರ್ ಬುತ್ತಿ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)
- 1/2 ಕಪ್ ಸೋನಾ ಮಸೂರಿ ಅಕ್ಕಿ
- 1 ಸಣ್ಣ ನಿಂಬೆ ಗಾತ್ರದ ಹುಣಸೆ ಹಣ್ಣು
- 1 ನೆಲ್ಲಿಕಾಯಿ ಗಾತ್ರದ ಬೆಲ್ಲ
- ರುಚಿಗೆ ತಕ್ಕಷ್ಟು ಉಪ್ಪು
- 1 ಟೇಬಲ್ ಚಮಚ ಸಾಂಬಾರ್ ಪುಡಿ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1/2 ಚಮಚ ಸಾಸಿವೆ
- 1/2 ಚಮಚ ಜೀರಿಗೆ
- 1 ಕೆಂಪು ಮೆಣಸಿನಕಾಯಿ
- 1 - 2 ಹಸಿರು ಮೆಣಸಿನಕಾಯಿ
- 7 - 8 ಕರಿಬೇವಿನ ಎಲೆ
- 4 - 5 ಬೇಳೆ ಬೆಳ್ಳುಳ್ಳಿ
- 1 ಈರುಳ್ಳಿ ಸಣ್ಣಗೆ ಹೆಚ್ಚಿದ್ದು
- 2 ಟೇಬಲ್ ಸ್ಪೂನ್ ಅಡುಗೆ ಎಣ್ಣೆ
ಸಾಂಬಾರ್ ಬುತ್ತಿ ಮಾಡುವ ವಿಧಾನ:
- ಮೊದಲಿಗೆ ಮೆತ್ತಗೆ ಅನ್ನ ಮಾಡಿಟ್ಟು ಕೊಳ್ಳಿ.
- ಒಂದು ಬಾಣಲೆಯಲ್ಲಿ ಸಾಸಿವೆ ಮತ್ತು ಜೀರಿಗೆ ಹಾಕಿ ಒಗ್ಗರಣೆ ಮಾಡಿ.
- ಸಾಸಿವೆ ಸಿಡಿದ ಮೇಲೆ, ಒಣ ಮೆಣಸಿನಕಾಯಿ, ಹಸಿರುಮೆಣಸಿನಕಾಯಿ ಮತ್ತು ಕರಿಬೇವು ಹಾಕಿ.
- ನಂತರ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ ಹಾಕಿ ಹುರಿಯಿರಿ.
- ಕೊನೆಯಲ್ಲಿ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಹುರಿಯಿರಿ.
- ಅದಕ್ಕೆ ಹುಣಿಸೆರಸ, ಉಪ್ಪು ಮತ್ತು ಬೆಲ್ಲವನ್ನು ಹಾಕಿ ಕುದಿಸಿ.
- ಕುದಿದು ಸ್ವಲ್ಪ ಗಟ್ಟಿಯಾದ ಮೇಲೆ ಸಾಂಬಾರ್ ಪುಡಿ ಹಾಕಿ.
- ಸ್ವಲ್ಪ ಗಟ್ಟಿಯಾಗುವವರೆಗೆ ಕುದಿಸಿ ಸ್ಟವ್ ಆಫ್ ಮಾಡಿ.
- ನಂತರ ಬೇಯಿಸಿಟ್ಟ ಅನ್ನವನ್ನು ಸ್ವಲ್ಪ ನುರಿದು ಹಾಕಿ, ಚೆನ್ನಾಗಿ ಕಲಸಿ. ಕಿತ್ತಳೆ ಹಣ್ಣಿನ ಗಾತ್ರದ ಉಂಡೆಕಟ್ಟಿ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ