Balekai snacks recipe in Kannada | ಬಾಳೆಕಾಯಿ ಸ್ನಾಕ್ಸ್ ಮಾಡುವ ವಿಧಾನ
ಬಾಳೆಕಾಯಿ ಸ್ನಾಕ್ಸ್ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 2 ಬಾಳೆಕಾಯಿ
- 1 ದೊಡ್ಡ ಈರುಳ್ಳಿ ಸಣ್ಣಗೆ ಹೆಚ್ಚಿದ್ದು
- 1/2 ಟೀಸ್ಪೂನ್ ಸಾಸಿವೆ
- 1/2 ಟೀಸ್ಪೂನ್ ಜೀರಿಗೆ
- 1 ಟೀಸ್ಪೂನ್ ಸಣ್ಣದಾಗಿ ಕೊಚ್ಚಿದ ಶುಂಠಿ
- 1 - 2 ಹಸಿರುಮೆಣಸಿನಕಾಯಿ
- ದೊಡ್ಡ ಚಿಟಿಕೆ ಅರಿಶಿನ
- ದೊಡ್ಡ ಚಿಟಿಕೆ ಇಂಗು
- 7 - 8 ಸಣ್ಣದಾಗಿ ಕೊಚ್ಚಿದ ಕರಿಬೇವಿನ ಎಲೆ
- 1 ಟೇಬಲ್ ಚಮಚ ಸಣ್ಣದಾಗಿ ಕೊಚ್ಚಿದ ಕೊತ್ತಂಬರಿ ಸೊಪ್ಪು
- 1 ಟೇಬಲ್ ಚಮಚ ಮೊಸರು (ಬೇಕಾದಲ್ಲಿ)
- ಉಪ್ಪು ರುಚಿಗೆ ತಕ್ಕಷ್ಟು
- ಎಣ್ಣೆ ಕಾಯಿಸಲು
ಬಾಳೆಕಾಯಿ ಸ್ನಾಕ್ಸ್ ಮಾಡುವ ವಿಧಾನ:
- ಬಾಳೆಕಾಯಿಯನ್ನು ತುದಿ-ಬುಡ ಕತ್ತರಿಸಿ, ಕುಕ್ಕರ್ ನಲ್ಲಿ 3 - 4 ವಿಷಲ್ ಮಾಡಿ, ಮೆತ್ತಗೆ ಬೇಯಿಸಿ ಕೊಳ್ಳಿ.
- ಬಿಸಿ ಆರಿದ ಮೇಲೆ ಸಿಪ್ಪೆ ತೆಗೆದು, ಪುಡಿಮಾಡಿಟ್ಟುಕೊಳ್ಳಿ.
- ಅದೇ ಸಮಯದಲ್ಲಿ 1 ಟೀಸ್ಪೂನ್ ಎಣ್ಣೆಯನ್ನು ಒಂದು ಬಾಣಲೆಯಲ್ಲಿ ಬಿಸಿ ಮಾಡಿ.
- ಸಾಸಿವೆ ಮತ್ತು ಜೀರಿಗೆ ಹಾಕಿ.
- ಸಾಸಿವೆ ಸಿಡಿದ ಮೇಲೆ ಸಣ್ಣಗೆ ಕತ್ತರಿಸಿದ ಶುಂಠಿ ಮತ್ತು ಹಸಿರುಮೆಣಸಿನಕಾಯಿ ಸೇರಿಸಿ.
- ಅರಿಶಿನ ಪುಡಿ ಮತ್ತು ಇಂಗು ಸೇರಿಸಿ, ಮಗುಚಿ.
- ಕೂಡಲೇ ಈರುಳ್ಳಿ ಸೇರಿಸಿ ಮೆತ್ತಗಾಗುವವರೆಗೆ ಹುರಿಯಿರಿ.
- ಕೊನೆಯಲ್ಲಿ ಹೆಚ್ಚಿದ ಕರಿಬೇವು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ.
- ಕೊನೆಯಲ್ಲಿ ಬೇಯಿಸಿ ಪುಡಿಮಾಡಿದ ಬಾಳೆಕಾಯಿ ಸೇರಿಸಿ. ಸ್ಟವ್ ಆಫ್ ಮಾಡಿ.
- ಉಪ್ಪು ಮತ್ತು ಒಂದು ಟೇಬಲ್ ಚಮಚ ಮೊಸರು ಸೇರಿಸಿ, ಚೆನ್ನಾಗಿ ಕಲಸಿ.
- ಬಿಸಿ ಆರಿದ ಮೇಲೆ ಸಣ್ಣ ನಿಂಬೆಗಾತ್ರದ ಉಂಡೆ ಮಾಡಿಟ್ಟುಕೊಳ್ಳಿ.
- ಗುಳಿಯಪ್ಪ ಅಥವಾ ಪಡ್ಡು ಪಾನ್ ನ್ನು ಬಿಸಿಮಾಡಿ, ಗುಳಿಗಳಿಗೆ ಸ್ವಲ್ಪ ಎಣ್ಣೆ ಹಾಕಿ.
- ತಯಾರಿಸದ ಬಾಳೆಕಾಯಿ ಉಂಡೆಗಳನ್ನು ಹಾಕಿ ಸಣ್ಣ ಉರಿಯಲ್ಲಿ ತಿರುವಿ ಹಾಕುತ್ತ ಬೇಯಿಸಿ. ಅಗತ್ಯವಿದ್ದಷ್ಟು ಎಣ್ಣೆ ಹಾಕಿ ಕಾಯಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ