Avalakki payasa recipe in Kannada |ಅವಲಕ್ಕಿ ಪಾಯಸ ಮಾಡುವ ವಿಧಾನ
ಅವಲಕ್ಕಿ ಪಾಯಸ ವಿಡಿಯೋ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)
- 1/2 ಕಪ್ ಗಟ್ಟಿ ಅವಲಕ್ಕಿ
- 1/2 ಕಪ್ ಸಕ್ಕರೆ
- 2 ಕಪ್ ಹಾಲು
- 1 ಟೇಬಲ್ ಚಮಚ ತುಪ್ಪ
- 7 - 8 ಗೋಡಂಬಿ
- ಒಂದು ದೊಡ್ಡ ಚಿಟಿಕೆ ಏಲಕ್ಕಿ ಪುಡಿ
ಅವಲಕ್ಕಿ ಪಾಯಸ ಮಾಡುವ ವಿಧಾನ:
- ಗಟ್ಟಿ ಅವಲಕ್ಕಿಯನ್ನು ತೊಳೆದು ನೀರು ಬಗ್ಗಿಸಿ ಪಕ್ಕಕ್ಕಿಡಿ.
- ಒಂದು ಬಾಣಲೆಯಲ್ಲಿ ತುಪ್ಪ ಬಿಸಿಮಾಡಿ, ಗೋಡಂಬಿ ಮತ್ತು ದ್ರಾಕ್ಷಿ ಹುರಿದು ಎತ್ತಿಡಿ.
- ಅದೇ ಬಾಣಲೆಗೆ ಹಾಲನ್ನು ಹಾಕಿ ಕುದಿಯಲು ಇಡಿ.
- ಸಕ್ಕರೆಯನ್ನು ಸೇರಿಸಿ.
- ಕುದಿಯಲು ಪ್ರಾರಂಭವಾದ ಕೂಡಲೇ ತೊಳೆದಿಟ್ಟ ಅವಲಕ್ಕಿ ಹಾಕಿ ಆಗಾಗ್ಯೆ ಮಗುಚುತ್ತಾ ಕುದಿಯಲು ಬಿಡಿ.
- ಅವಲಕ್ಕಿ ಮೆತ್ತಗೆ ಬೇಯುವವರೆಗೆ ಮಧ್ಯಮ ಉರಿಯಲ್ಲಿ ಕುದಿಸಿ. ಸುಮಾರು ಹತ್ತು ನಿಮಿಷ ಬೇಕಾಗುತ್ತದೆ.
- ಏಲಕ್ಕಿ ಪುಡಿಯನ್ನು ಸೇರಿಸಿ.
- ಸ್ಟೋವ್ ಆಫ್ ಮಾಡಿ. ರುಚಿಕರ ಪಾಯಸವನ್ನು ಸವಿಯಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ