Kayi chutney recipe in Kannada | ಕಾಯಿ ಚಟ್ನಿ ಮಾಡುವ ವಿಧಾನ
ಕಾಯಿ ಚಟ್ನಿ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1 ಕಪ್ ತೆಂಗಿನ ತುರಿ
- 2 - 3 ಹಸಿರು ಮೆಣಸಿನಕಾಯಿ
- ಸ್ವಲ್ಪ ಕೊತಂಬರಿ ಸೊಪ್ಪು
- ಸ್ವಲ್ಪ ಹುಣಿಸೆ ಹಣ್ಣು
- ಸಣ್ಣ ಚೂರು ಶುಂಠಿ
- ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1 ಟಿಸ್ಪೂನ್ ಎಣ್ಣೆ
- ಒಂದು ಒಣಮೆಣಸಿನಕಾಯಿ
- 4 ಕರಿಬೇವಿನ ಎಲೆ
- 1/2 ಟಿಸ್ಪೂನ್ ಸಾಸಿವೆ
- ಒಂದು ಚಿಟಿಕೆ ಇಂಗು
ಕಾಯಿ ಚಟ್ನಿ ಮಾಡುವ ವಿಧಾನ:
- ನಂತರ ಮಿಕ್ಸಿ ಜಾರಿಗೆ ತೆಂಗಿನ ತುರಿ ಹಾಕಿ. ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ಅರೆಯಿರಿ.
- ಕೊನೆಯಲ್ಲಿ ಹಸಿರುಮೆಣಸಿನಕಾಯಿ, ಹುಣಿಸೆ ಹಣ್ಣು, ಶುಂಠಿ, ಕೊತಂಬರಿ ಸೊಪ್ಪು ಮತ್ತು ಉಪ್ಪು ಹಾಕಿ.
- ತರಿತರಿಯಾಗಿ ಅರೆಯಿರಿ.
- ಒಂದು ಬಟ್ಟಲಿಗೆ ತೆಗೆದು, ಸಾಸಿವೆ, ಒಣಮೆಣಸು, ಕರಿಬೇವು ಮತ್ತು ಇಂಗಿನ ಒಗ್ಗರಣೆ ಕೊಡಿ. ದೋಸೆ ಅಥವಾ ಇಡ್ಲಿಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ