Kesuvina ele chutney recipe in Kannada | ಕೆಸುವಿನ ಎಲೆ ಚಟ್ನಿ ಮಾಡುವ ವಿಧಾನ
ಕೆಸುವಿನ ಎಲೆ ಚಟ್ನಿ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 7 - 8 ಮಧ್ಯಮ ಗಾತ್ರದ ಕೆಸುವಿನ ಎಲೆ
- 2 - 4 ಹಸಿ ಮೆಣಸಿನಕಾಯಿ
- 4 - 5 ಎಸಳು ಬೆಳ್ಳುಳ್ಳಿ
- ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು
- 2 ಟೇಬಲ್ ಚಮಚ ಅಡುಗೆ ಎಣ್ಣೆ
- ಉಪ್ಪು ರುಚಿಗೆ ತಕ್ಕಷ್ಟು.
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1 ಒಣ ಮೆಣಸಿನಕಾಯಿ
- 1/2 ಟೀಸ್ಪೂನ್ ಸಾಸಿವೆ
- 2 ಟೇಬಲ್ ಚಮಚ ತೆಂಗಿನೆಣ್ಣೆ ಅಥವಾ ಅಡುಗೆ ಎಣ್ಣೆ
- 4 - 5 ಎಸಳು ಬೆಳ್ಳುಳ್ಳಿ, ಜಜ್ಜಿದ್ದು
ಕೆಸುವಿನ ಎಲೆ ಚಟ್ನಿ ಮಾಡುವ ವಿಧಾನ:
- ಕೆಸುವಿನ ಸೊಪ್ಪನ್ನು ತೊಳೆದು, ಒರೆಸಿ, ಕತ್ತರಿಸಿ.
- ಅದೇ ರೀತಿ, ಹಸಿಮೆಣಸು ಮತ್ತು ಬೆಳ್ಳುಳ್ಳಿಯನ್ನು ಕತ್ತರಿಸಿಟ್ಟುಕೊಳ್ಳಿ.
- ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ, ಹಸಿಮೆಣಸು ಮತ್ತು ಬೆಳ್ಳುಳ್ಳಿಯನ್ನು ಹಾಕಿ ಹುರಿಯಿರಿ.
- ಆಮೇಲೆ ಕತ್ತರಿಸಿದ ಕೆಸುವಿನ ಸೊಪ್ಪು ಹಾಕಿ ಮೆತ್ತಗಾಗುವವರೆಗೆ ಹುರಿಯಿರಿ.
- ಕೊನೆಯಲ್ಲಿ ಉಪ್ಪು ಮತ್ತು ಹುಣಿಸೆರಸ ಹಾಕಿ, ಸ್ಟವ್ ಆಫ್ ಮಾಡಿ.
- ಬಿಸಿ ಆರಿದ ಮೇಲೆ ಮಿಕ್ಸಿ ಜಾರಿಗೆ ಹಾಕಿ ನುಣ್ಣನೆ ಅರೆದುಕೊಳ್ಳಿ.
- ಒಂದು ಬಾಣಲೆಯಲ್ಲಿ ಒಣ ಮೆಣಸಿನಕಾಯಿ, ಎಣ್ಣೆ ಮತ್ತು ಸಾಸಿವೆ ಹಾಕಿ ಒಗ್ಗರಣೆ ಮಾಡಿ.
- ಜಜ್ಜಿದ ಬೆಳ್ಳುಳ್ಳಿ ಮತ್ತು ಕರಿಬೇವು ಹಾಕಿ ಹುರಿಯಿರಿ.
- ಅರೆದ ಮಿಶ್ರಣವನ್ನು ಹಾಕಿ, ಐದು ನಿಮಿಷ ಸಣ್ಣ ಉರಿಯಲ್ಲಿಮಗುಚಿ. ಬಿಸಿ ಅನ್ನ ಮತ್ತು ತುಪ್ಪದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ