Milk peda recipe in Kannada | ಹಾಲಿನ ಪೇಡ ಮಾಡುವ ವಿಧಾನ
ತಯಾರಿ ಸಮಯ: 5 ನಿಮಿಷ
ಅಡುಗೆ ಸಮಯ : 30 ನಿಮಿಷ
ಪ್ರಮಾಣ : 20 ಪೇಡಗಳು
ಅಡುಗೆ ಸಮಯ : 30 ನಿಮಿಷ
ಪ್ರಮಾಣ : 20 ಪೇಡಗಳು
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1.5 - 2 ಕಪ್ ಹಾಲಿನ ಪುಡಿ
- 1 ಟಿನ್ ಸಿಹಿಕರಿಸಿದ ಕಂಡೆನ್ಸೆಡ್ ಹಾಲು ( 400gm )
- 0.25 ಕಪ್ ತುಪ್ಪ ಅಥವಾ ಬೆಣ್ಣೆ
- ಒಂದು ದೊಡ್ಡ ಚಿಟಿಕೆ ಏಲಕ್ಕಿ ಪುಡಿ
- 0.25 ಕಪ್ ಬೀಜಗಳು (ಗೋಡಂಬಿ, ಪಿಸ್ತಾ ಅಥವ ಬಾದಾಮಿ - ಬೇಕಾದಲ್ಲಿ)
- 0.25 ಕಪ್ ಒಣ ಕೊಬ್ಬರಿ ಹುಡಿ (ಬೇಕಾದಲ್ಲಿ)
ಹಾಲಿನ ಪೇಡ ಮಾಡುವ ವಿಧಾನ:
- ಒಂದು ನಾನ್ ಸ್ಟಿಕ್ ಕಡಾಯಿಗೆ ಹಾಲಿನಪುಡಿ ಮತ್ತು ಸಿಹಿಕರಿಸಿದ ಕಂಡೆನ್ಸೆಡ್ ಹಾಲು ಹಾಕಿ ಕಲಸಿ.
- ಕರಗಿಸಿದ ತುಪ್ಪ ಅಥವಾ ಬೆಣ್ಣೆ ಹಾಕಿ ಕಲಸಿ. ಗೋಡಂಬಿ, ಪಿಸ್ತಾ, ಬಾದಾಮಿ ಅಥವಾ ಒಣ ಕೊಬ್ಬರಿ ಹುಡಿ ಹಾಕಬಯಸುತ್ತೀರಾದಲ್ಲಿ ಈ ಹಂತದಲ್ಲಿ ಸೇರಿಸಿ.
- ಒಲೆಯ ಮೇಲಿಟ್ಟು ಮದ್ಯಮ ಉರಿಯಲ್ಲಿ ಮಗುಚಿ.
- ತಳ ಬಿಡಲು ಪ್ರಾರಂಭವಾದ ಕೂಡಲೇ ಏಲಕ್ಕಿ ಪುಡಿ ಹಾಕಿ. ಒಂದೆರಡು ನಿಮಿಷ ಮೆತ್ತಗಿನ ಮುದ್ದೆಯಾಗುವವರೆಗೆ ಮಗುಚಿ. ಸ್ಟವ್ ಆಫ್ ಮಾಡಿ. ಜಾಸ್ತಿ ಮಗುಚಿದಲ್ಲಿ ಪೇಡ ನಾರಾಗುತ್ತದೆ. ಕಡಿಮೆ ಮಗುಚಿದಲ್ಲಿ ಪೇಡ ಮಾಡುವಾಗ ಕೈಗೆ ಅಂಟುತ್ತದೆ.
- ಬಿಸಿ ಆರಿದ ಮೇಲೆ ಪೇಡ ಗಳನ್ನು ತಯಾರಿಸಿ. ಪೇಡ ಮಾಡುವಾಗ ಕೈಗೆ ಅಂಟುತ್ತಿದ್ದರೆ ಪುನಃ ಒಲೆಯ ಮೇಲಿಟ್ಟು ಒಂದೆರಡು ನಿಮಿಷ ಮಗುಚಿ. ಬಿಸಿ ಆರಿದ ಮೇಲೆ ಪೇಡ ತಯಾರಿಸಿ.
- ೪ - ೫ ಘಂಟೆಗಳ ಕಾಲ ಬಿಟ್ಟು ತಿನ್ನಿ. ಅದರ ಮೊದಲೇ ತಿನ್ದಲ್ಲಿ ಪೇಡ ಅಂಟೆನಿಸುವುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ