Gorikayi rice bath recipe in Kannada | ಗೋರಿಕಾಯಿ ರೈಸ್ ಬಾತ್ ಮಾಡುವ ವಿಧಾನ
ತಯಾರಿ ಸಮಯ: 5 ನಿಮಿಷ
ಅಡುಗೆ ಸಮಯ : 30 ನಿಮಿಷ
ಪ್ರಮಾಣ : 3 ಜನರಿಗೆ
ಅಡುಗೆ ಸಮಯ : 30 ನಿಮಿಷ
ಪ್ರಮಾಣ : 3 ಜನರಿಗೆ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಹಿಡಿ ಎಳೆ ಗೋರಿಕಾಯಿ ಅಥವಾ ಚವಳಿ ಕಾಯಿ
- 1 ಕಪ್ ಸೋನಾ ಮಸೂರಿ ಅಥವಾ ಉತ್ತಮ ಗುಣಮಟ್ಟದ ಅಕ್ಕಿ
- 1/2 ಚಮಚ ಸಾಸಿವೆ
- 2 ಟೀಸ್ಪೂನ್ ಕಡ್ಲೇಬೇಳೆ
- 2 ಟೀಸ್ಪೂನ್ ಉದ್ದಿನ ಬೇಳೆ
- 5 - 6 ಗೋಡಂಬಿ ಅಥವಾ 2 ಟೇಬಲ್ ಸ್ಪೂನ್ ನೆಲಗಡಲೆ ಬೀಜ
- 5 - 6 ಕರಿಬೇವಿನ ಎಲೆ
- 1 ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು
- 1 ನೆಲ್ಲಿಕಾಯಿ ಗಾತ್ರದ ಬೆಲ್ಲ
- 3 - 4 ಚಮಚ ವಾಂಗಿ ಬಾತ್ ಪುಡಿ
- 1/4 ಟೀಸ್ಪೂನ್ ಅರಿಶಿನ ಪುಡಿ
- ಉಪ್ಪು ರುಚಿಗೆ ತಕ್ಕಷ್ಟು
- 8 ಟೀಸ್ಪೂನ್ ಅಡುಗೆ ಎಣ್ಣೆ
ಗೋರಿಕಾಯಿ ರೈಸ್ ಬಾತ್ ಮಾಡುವ ವಿಧಾನ:
- ಮೊದಲಿಗೆ ಅನ್ನ ಮಾಡಿ ತೆಗೆದಿಟ್ಟು ಕೊಳ್ಳಿ.
- ಗೋರಿಕಾಯಿಯನ್ನು ಆಯ್ದು, ಕಡೆಗಳನ್ನು ತೆಗೆದು, 1 "ತುಂಡುಗಳಾಗಿ ಕತ್ತರಿಸಿ.
- ಒಂದು ಬಾಣಲೆಯನ್ನು ಬಿಸಿ ಮಾಡಿ. 8 ಚಮಚ ಅಡುಗೆ ಎಣ್ಣೆ ಹಾಕಿ
- ಸಾಸಿವೆ, ಕಡ್ಲೇಬೇಳೆ, ಉದ್ದಿನ ಬೇಳೆ ಮತ್ತು ಗೋಡಂಬಿ ಸೇರಿಸಿ ಒಗ್ಗರಣೆ ಮಾಡಿ.
- ಸಾಸಿವೆ ಸಿಡಿಯುವವರೆಗೆ, ಬೇಳೆಗಳು ಕಂದು ಬಣ್ಣ ಬರುವ ತನಕ ಹುರಿಯಿರಿ.
- ಕರಿಬೇವು ಹಾಕಿ, ಉರಿ ಕಡಿಮೆ ಮಾಡಿ.
- ಕತ್ತರಿಸಿದ ಗೋರಿಕಾಯಿಯನ್ನು ಸೇರಿಸಿ. 1 ನಿಮಿಷ ಮಧ್ಯಮ ಉರಿಯಲ್ಲಿ ಹುರಿಯಿರಿ.
- ಅರಿಶಿನ ಪುಡಿ ಹಾಕಿ. ಪುನಃ 2 ನಿಮಿಷ ಹುರಿಯಿರಿ.
- ಉಪ್ಪು, ಬೆಲ್ಲ ಮತ್ತು ಹುಣಿಸೆಹಣ್ಣಿನ ರಸ ಸೇರಿಸಿ. ಸ್ವಲ್ಪ ನೀರನ್ನೂ ಸೇರಿಸಿ.
- ಮುಚ್ಚಳ ಮುಚ್ಚಿ ಗೋರಿಕಾಯಿಯನ್ನು ಬೇಯಿಸಿ.
- ನಂತರ 3 - 4 ಚಮಚ ವಾಂಗಿ ಬಾತ್ ಪುಡಿ ಸೇರಿಸಿ. ಒಂದೆರಡು ನಿಮಿಷ ಮಗುಚಿ. ಸ್ಟವ್ ಆಫ್ ಮಾಡಿ.
- ಮೊದಲೇ ಬೇಯಿಸಿಟ್ಟ ಅನ್ನ ಸೇರಿಸಿ, ಮುದ್ದೆಯಾಗದಂತೆ ಕಲಸಿ.
- ಸಲಾಡ್ ಅಥವಾ ಮೊಸರನ್ನ ದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ