Bele dose recipe in kannada | ಬೇಳೆ ದೋಸೆ ಮಾಡುವ ವಿಧಾನ
ಬೇಳೆ ದೋಸೆ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ದೋಸೆ ಅಕ್ಕಿ
- 2 ಟೇಬಲ್ ಚಮಚ ಉದ್ದಿನ ಬೇಳೆ
- 2 ಟೇಬಲ್ ಚಮಚ ತೊಗರಿ ಬೇಳೆ
- 2 ಟೇಬಲ್ ಚಮಚ ಹೆಸರು ಬೇಳೆ
- 2 ಟೇಬಲ್ ಚಮಚ ಕಡ್ಲೇ ಬೇಳೆ
- 2 ಟೇಬಲ್ ಚಮಚ ಮಸೂರ್ ಬೇಳೆ
- 1 - 2 ಹಸಿರುಮೆಣಸಿನಕಾಯಿ
- ಸಣ್ಣ ತುಂಡು ಶುಂಠಿ
- 1/4 ಟೀಸ್ಪೂನ್ ಜೀರಿಗೆ
- ಕೊತಂಬರಿ ಸೊಪ್ಪು ಸ್ವಲ್ಪ
- ಉಪ್ಪು ರುಚಿಗೆ ತಕ್ಕಷ್ಟು.
ಬೇಳೆ ದೋಸೆ ಮಾಡುವ ವಿಧಾನ:
- ಅಕ್ಕಿ ಮತ್ತು ಬೇಳೆಗಳನ್ನು ತೊಳೆದು ನೀರಿನಲ್ಲಿ 4 - 5 ಗಂಟೆಗಳ ಕಾಲ ನೆನೆಯಲು ಬಿಡಿ.
- 4 - 5 ಗಂಟೆಗಳ ನಂತರ ನೀರು ಬಗ್ಗಿಸಿ ಅಕ್ಕಿ ಮತ್ತು ಬೇಳೆಗಳನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ನಯವಾಗಿ ಅರೆಯಿರಿ.
- ಕೊನೆಯಲ್ಲಿ ಹಸಿರುಮೆಣಸಿನಕಾಯಿ, ಶುಂಠಿ, ಜೀರಿಗೆ ಮತ್ತು ಸ್ವಲ್ಪ ಕೊತಂಬರಿ ಸೊಪ್ಪು ಸೇರಿಸಿ ಅರೆಯಿರಿ.
- ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಉದ್ದಿನ ದೋಸೆ ಹಿಟ್ಟಿಗಿಂತ ಸ್ವಲ್ಪ ತೆಳುವಾಗಿರಲಿ. ಒಂದರ್ಧ ಘಂಟೆ ಬಿಟ್ಟು ದೋಸೆ ಮಾಡಿ.
- ದೋಸೆ ಮಾಡಲು ಹೆಂಚನ್ನು ಬಿಸಿಮಾಡಿ ಕೊಳ್ಳಿ. ಈಗ ವೃತ್ತಾಕಾರದ ರೀತಿಯಲ್ಲಿ ದೋಸೆ ಹಿಟ್ಟನ್ನು ತೆಳುವಾಗಿ ಹರಡಿ. ಮೇಲಿನಿಂದ ತುಪ್ಪ ಅಥವಾ ಎಣ್ಣೆ ಹಾಕಿ. ಬಿಸಿ ಬಿಸಿ ದೋಸೆಯನ್ನು ಚಟ್ನಿಯೊಂದಿಗೆ ಬಡಿಸಿ.
- ಸಮಯವಿದ್ದಲ್ಲಿ ಕೆಲವು ಘಂಟೆಗಳ ಕಾಲ ಹಿಟ್ಟು ಹುದುಗಲು ಬಿಟ್ಟು ನಂತರ ದೋಸೆ ಮಾಡಿದರೆ ಆಗಲೂ ದೋಸೆ ಚೆನ್ನಾಗಿ ಬರುತ್ತದೆ. ನಿಮ್ಮ ರುಚಿ ಪ್ರಕಾರ ಮಾಡಿ ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ