Baby corn manchurian recipe | ಬೇಬಿ ಕಾರ್ನ್ ಮಂಚೂರಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 10 ಬೇಬಿ ಕಾರ್ನ್ ಅಥವಾ ಎಳೆ ಜೋಳ
- 4 ಟೇಬಲ್ ಚಮಚ ಮೈದಾ ಹಿಟ್ಟು
- 2 ಟೇಬಲ್ ಚಮಚ ಜೋಳದ ಹಿಟ್ಟು
- 1 ಟೇಬಲ್ ಚಮಚ ಅಕ್ಕಿ ಹಿಟ್ಟು
- 1/2 - 1 ಟೀಸ್ಪೂನ್ ಅಚ್ಚ ಖಾರದ ಪುಡಿ
- 1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಉಪ್ಪು ರುಚಿಗೆ ತಕ್ಕಷ್ಟು
- ಎಣ್ಣೆ ಕಾಯಿಸಲು
ಸಾಸ್ ತಯಾರಿಸಲು ಬೇಕಾಗುವ ಪದಾರ್ಥಗಳು:
- 1 ಕತ್ತರಿಸಿದ ಈರುಳ್ಳಿ
- 1/2 ಕತ್ತರಿಸಿದ ಕ್ಯಾಪ್ಸಿಕಂ
- 1 ಟೀಸ್ಪೂನ್ ಸಣ್ಣದಾಗಿ ಕೊಚ್ಚಿದ ಬೆಳ್ಳುಳ್ಳಿ
- 1 ಟೀಸ್ಪೂನ್ ನುಣ್ಣಗೆ ಕತ್ತರಿಸಿದ ಶುಂಠಿ
- 2 ಈರುಳ್ಳಿ ಗಿಡ
- 1/2 - 1 ಟೀಸ್ಪೂನ್ ಅಚ್ಚ ಖಾರದ ಪುಡಿ
- 1/4 ಚಮಚ ಕಾಳುಮೆಣಸಿನ ಪುಡಿ
- 1 ನುಣ್ಣಗೆ ಕತ್ತರಿಸಿದ ಹಸಿರು ಮೆಣಸಿನಕಾಯಿ ( ಬೇಕಾದಲ್ಲಿ)
- 4 ಟೇಬಲ್ ಚಮಚ ಟೊಮೆಟೊ ಸಾಸ್
- 1 ಟೀಸ್ಪೂನ್ ಸೋಯಾ ಸಾಸ್
- ಉಪ್ಪು ರುಚಿಗೆ ತಕ್ಕಷ್ಟು
- 2 ಟೀಸ್ಪೂನ್ ಅಡುಗೆ ಎಣ್ಣೆ
- 1/2 ಕಪ್ ನೀರು
ಬೇಬಿ ಕಾರ್ನ್ ಮಂಚೂರಿ ಮಾಡುವ ವಿಧಾನ:
- ಬೇಬಿ ಕಾರ್ನ್ ಸಿಪ್ಪೆ ಸುಲಿದು ಕತ್ತರಿಸಿಕೊಳ್ಳಿ. ಬೇಬಿ ಕಾರ್ನ್ ಮಂಚೂರಿಯನ್ ಗರಿಗರಿ ಆಗಬೇಕೆಂದರೆ ತೆಳುವಾಗಿ ಕತ್ತರಿಸಿಕೊಳ್ಳಿ.
- ಒಂದು ಬಟ್ಟಲಿನಲ್ಲಿ ಮೈದಾ, ಜೋಳದ ಹಿಟ್ಟು, ಅಕ್ಕಿ ಹಿಟ್ಟು, ಕೆಂಪು ಮೆಣಸಿನಕಾಯಿ ಪುಡಿ, ಉಪ್ಪು ಮತ್ತು ಶುಂಠಿ ಬೆಳ್ಳುಳ್ಳಿ ಪೇಸ್ಟ್ ತೆಗೆದುಕೊಳ್ಳಿ.
- ನೀರು ಸೇರಿಸಿ ಬಜ್ಜಿ ಅಥವಾ ಬೋಂಡಾದ ಹಿಟ್ಟಿಗಿಂತ ಕೊಂಚ ತೆಳುವಾಗಿ ಕಲಸಿಕೊಳ್ಳಿ.
- ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಹಿಟ್ಟಿನಲ್ಲಿ ಕತ್ತರಿಸಿದ ಬೇಬಿ ಕಾರ್ನ್ ಗಳನ್ನು ಅದ್ದಿ, ಬಿಸಿಯಾದ ಎಣ್ಣೆಯಲ್ಲಿ ಗರಿ ಗರಿಯಾಗುವವರೆಗೆ ಮತ್ತು ಹೊಂಬಣ್ಣ ಬರುವವರೆಗೆ ಕಾಯಿಸಿ.
- ಈಗ ಸಾಸ್ ತಯಾರಿಸಲು 2 ಟೀಸ್ಪೂನ್ ಎಣ್ಣೆಯನ್ನು ಒಂದು ಬಾಣಲೆಯಲ್ಲಿ ಬಿಸಿ ಮಾಡಿ ನುಣ್ಣಗೆ ಕತ್ತರಿಸಿದ ಶುಂಠಿ ಮತ್ತು ಬೆಳ್ಳುಳ್ಳಿ ಸೇರಿಸಿ ಹುರಿಯಿರಿ.
- ನಂತರ ಕತ್ತರಿಸಿದ ಈರುಳ್ಳಿ, ಈರುಳ್ಳಿ ಗಿಡದ ಬಿಳಿ ಭಾಗ, ಹಸಿರು ಮೆಣಸು ಮತ್ತು ಕ್ಯಾಪ್ಸಿಕಂ ಸೇರಿಸಿ ಹುರಿಯಿರಿ.
- ನಂತರ ಅಚ್ಚ ಖಾರದ ಪುಡಿ ಮತ್ತು ಕರಿ ಮೆಣಸಿನ ಪುಡಿ ಸೇರಿಸಿ ಕಲಸಿ.
- ಟೊಮೆಟೊ ಸಾಸ್ ಮತ್ತು ಸೋಯಾ ಸಾಸ್ ಸೇರಿಸಿ.
- ಈಗ ಬೇಬಿ ಕಾರ್ನ್ ಕಾಯಿಸಿ ಉಳಿದಿರುವ ಹಿಟ್ಟಿಗೆ 1/2 ಕಪ್ ನೀರು ಹಾಕಿ ಅಥವಾ 1/2 ಚಮಚ ಜೋಳದ ಹಿಟ್ಟನ್ನು 1/2 ಕಪ್ ನೀರಿನಲ್ಲಿ ಕಲಕಿ ಸೇರಿಸಿ. ಸ್ವಲ್ಪ ಮಂದವಾಗುವವರೆಗೆ ಮಗುಚಿ.
- ಉಪ್ಪು ಸೇರಿಸಿ ಮತ್ತೆ ಚೆನ್ನಾಗಿ ಕಲಸಿ.
- ಹುರಿದ ಬೇಬಿ ಕಾರ್ನ್ ಸೇರಿಸಿ, ಚೆನ್ನಾಗಿ ಕಲಸಿ. ಕತ್ತರಿಸಿದ ಈರುಳ್ಳಿ ಗಿಡಗಳಿಂದ ಅಲಂಕರಿಸಿ ತಕ್ಷಣವೇ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ