ಗುರುವಾರ, ಜೂನ್ 16, 2016

Kobbari mithai or Kaayi burfi or Kayi paka in Kannada | ಕೊಬ್ಬರಿ ಮಿಟಾಯಿ ಅಥವಾ ಕಾಯಿ ಬರ್ಫಿ ಅಥವಾ ಕಾಯಿ ಪಾಕ ಮಾಡುವ ವಿಧಾನ

Kobbari mithai or Kaayi burfi or Kayi paaka in Kannada

Kobbari mithai or Kaayi burfi or Kayi paka in Kannada | ಕೊಬ್ಬರಿ ಮಿಟಾಯಿ ಅಥವಾ ಕಾಯಿ ಬರ್ಫಿ ಅಥವಾ ಕಾಯಿ ಪಾಕ ಮಾಡುವ ವಿಧಾನ  

ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 20 ನಿಮಿಷ
ಪ್ರಮಾಣ : 10 - 12 ಬರ್ಫಿ


ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ತೆಂಗಿನ ತುರಿ
  2. 1/2 ಕಪ್ ಸಕ್ಕರೆ 
  3. 2 ಟೇಬಲ್ ಸ್ಪೂನ್ ತುಪ್ಪ
  4. ಒಂದು ಚಿಟಿಕೆ ಏಲಕ್ಕಿ ಪುಡಿ ಅಥವಾ ಲವಂಗದ ಪುಡಿ

ಕೊಬ್ಬರಿ ಮಿಟಾಯಿ ಅಥವಾ ಕಾಯಿ ಬರ್ಫಿ ಅಥವಾ ಕಾಯಿ ಪಾಕ ಮಾಡುವ ವಿಧಾನ:

  1. ತೆಂಗಿನಕಾಯಿಯ ಬಿಳಿಭಾಗ ಮಾತ್ರ ತುರಿದುಕೊಳ್ಳಿ. 
  2. ನೀರು ಹಾಕದೇ ಮಿಕ್ಸಿಯಲ್ಲಿ ನುಣ್ಣನೆ ಪುಡಿ ಮಾಡಿಕೊಳ್ಳಿ. 
  3. ಒಂದು ಬಾಣಲೆಗೆ ಸಕ್ಕರೆ ಮತ್ತು ಸ್ವಲ್ಪ ನೀರು ಹಾಕಿ (೧ ಕಪ್ ಸಕ್ಕರೆಗೆ ೧/೪ ಕಪ್ ನೀರು ಸಾಕು)
  4. ನಿರಂತರವಾಗಿ ಮಗುಚುತ್ತಾ ಒಂದೆಳೆ ಸಕ್ಕರೆ ಪಾಕ ಮಾಡಿ. ಒಂದೈದು ನಿಮಿಷ ಸಾಕಾಗುತ್ತದೆ. ಇಲ್ಲವೇ ಸೌಟಿನಿಂದ ಎತ್ತಿ ಸುರಿದಾಗ ಜೇನಿನಂತೆ ಬಿದ್ದರೆ ಸಾಕು. 
  5. ನಂತರ ಪುಡಿ ಮಾಡಿದ ತೆಂಗಿನತುರಿ ಸೇರಿಸಿ. 
  6. ನಿರಂತರವಾಗಿ ಮಗುಚುತ್ತಾ ಇರಿ. 
  7. ನೀರಾರಿ ಒಂದು ಮೆತ್ತಗಿನ ಮುದ್ದೆಯಂತೆ ಆದಾಗ ಏಲಕ್ಕಿ ಅಥವಾ ಲವಂಗ ಹಾಕಿ. 
  8. ತುಪ್ಪವನ್ನು ಸೇರಿಸಿ. ಮಗುಚುವುದನ್ನು ಮುಂದುವರೆಸಿ. 
  9. ಒಂದೆರಡು ನಿಮಿಷದಲ್ಲಿ ಕಾಯಿ ಮತ್ತು ಸಕ್ಕರೆಯ ಮಿಶ್ರಣ ಮುದ್ದೆಯಾಗಿ, ಸ್ವಲ್ಪ ಬಿಳಿ ಬಣ್ಣಕ್ಕೆ ತಿರುಗುತ್ತದೆ. 
  10. ಈ ಸಮಯದಲ್ಲಿ ತುಪ್ಪ ಸವರಿದ ಟ್ರೇ ಗೆ ಸುರಿಯಿರಿ . 
  11. ತುಪ್ಪ ಸವರಿದ ಚಮಚದ ಹಿಂಭಾಗ ಉಪಯೋಗಿಸಿ ಹರಡಿ. 
  12. ಬಿಸಿಯಾಗಿರುವಾಗಲೇ ಕತ್ತರಿಸಿ. ತಣಿದ ಮೇಲೆ ಕೊಬ್ಬರಿ ಮಿಟಾಯಿ ಅಥವಾ ಕಾಯಿ ಬರ್ಫಿ ಅಥವಾ ಕಾಯಿ ಪಾಕವನ್ನು ಬಡಿಸಿ, ತಿಂದು ಆನಂದಿಸಿ. 

1 ಕಾಮೆಂಟ್‌:

  1. ನೀವು ಹೇಳುವ ಚೆನ್ನಾಗಿಯೇ ಇದೆ ಆದಷ್ಟು ಕನ್ನಡದಲ್ಲಿ ಸಾಮಾನುಗಳ ವಿವರಣೆ ಕೊಡಿ ಆಗಲಾದರೂ ನಮ್ಮ ಮಕ್ಕಳಿಗೆ ಕನ್ನಡದ ಪದಗಳು ಗೊತ್ತಾಗುತ್ತವೆ ಅಮ್ಮ ಕನ್ನಡದಲ್ಲಿಹೇಳುತ್ತಾರೆ ಮಗಳೂ ಕನ್ನಡದಲ್ಲಿಯೇ ಹೇಳಲಿ

    ಪ್ರತ್ಯುತ್ತರಅಳಿಸಿ

Related Posts Plugin for WordPress, Blogger...