Malnad style Appe kayi saaru in kannada | ಅಪ್ಪೆ ಕಾಯಿ ಸಾರು ಮಾಡುವ ವಿಧಾನ
ಅಪ್ಪೆ ಕಾಯಿ ಸಾರು ವಿಡಿಯೋ
ತಯಾರಿ ಸಮಯ: 5 ನಿಮಿಷ
ಅಡುಗೆ ಸಮಯ : 20 ನಿಮಿಷ
ಪ್ರಮಾಣ : 1.5 ಲೀ
ಅಡುಗೆ ಸಮಯ : 20 ನಿಮಿಷ
ಪ್ರಮಾಣ : 1.5 ಲೀ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಸಣ್ಣ ಗಾತ್ರದ ಮಾವಿನಕಾಯಿ
- 5 - 6 ಹಸಿರು ಮೆಣಸಿನ ಕಾಯಿ (ನಿಮ್ಮ ಖಾರಕ್ಕೆ ತಕ್ಕಂತೆ)
- ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1/4 ಟೀಸ್ಪೂನ್ ಸಾಸಿವೆ
- 1/4 ಟೀಸ್ಪೂನ್ ಜೀರಿಗೆ
- ಒಂದು ದೊಡ್ಡ ಚಿಟಿಕೆ ಇಂಗು
- 1 ಟೀಸ್ಪೂನ್ ಅಡುಗೆ ಎಣ್ಣೆ
ಅಪ್ಪೆ ಕಾಯಿ ಸಾರು ಮಾಡುವ ವಿಧಾನ:
- ಮಾವಿನಕಾಯಿ ಸಿಪ್ಪೆ ತೆಗೆದು ಕತ್ತರಿಸಿ. ಒಂದು ಪಾತ್ರೆಗೆ ಕತ್ತರಿಸಿದ ಮಾವಿನಕಾಯಿ, ಹಸಿರು ಮೆಣಸಿನ ಕಾಯಿ ಮತ್ತು ಉಪ್ಪು ಸೇರಿಸಿ.
- ಒಂದು ಕಪ್ ನೀರು ಹಾಕಿ ಮಾವಿನಕಾಯಿ ಮೆತ್ತಗಾಗುವವರೆಗೆ ಬೇಯಿಸಿ. ಒಂದೈದು ನಿಮಿಷ ಸಾಕಾಗುತ್ತದೆ.
- ಬಿಸಿ ಆರಿದ ಮೇಲೆ ಮಿಕ್ಸಿಗೆ ಹಾಕಿ ಸಣ್ಣಗೆ ರುಬ್ಬಿಕೊಳ್ಳಿ.
- ರುಚಿಗೆ ತಕ್ಕಷ್ಟು ಉಪ್ಪು, ಉಳಿದ ನೀರು ಸೇರಿಸಿ ಕುದಿಸಿ.
- ಸಾಸಿವೆ, ಜೀರಿಗೆ ಮತ್ತೆ ಇಂಗಿನ ಒಗ್ಗರಣೆ ಕೊಡಿ. ಊಟದೊಂದಿಗೆ ಕುಡಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ