karibevu soppina chutney in Kannada | ಕರಿಬೇವು ಸೊಪ್ಪಿನ ಚಟ್ನಿ
ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 5 ನಿಮಿಷ
ಪ್ರಮಾಣ: 4 ಜನರಿಗೆ
ಅಡುಗೆ ಸಮಯ : 5 ನಿಮಿಷ
ಪ್ರಮಾಣ: 4 ಜನರಿಗೆ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 4 ಎಸಳು ಕರಿಬೇವು ಅಥವಾ 40 - 50 ಕರಿಬೇವಿನ ಎಲೆಗಳು
- 1 ಕಪ್ ತೆಂಗಿನ ತುರಿ
- 2 - 4 ಹಸಿರು ಮೆಣಸಿನಕಾಯಿ
- ಒಂದು ಸಣ್ಣ ಗೋಲಿ ಗಾತ್ರದ ಹುಣಿಸೆ ಹಣ್ಣು
- ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 2 ಟಿಸ್ಪೂನ್ ಎಣ್ಣೆ
- 2 ಕರಿಬೇವಿನ ಎಲೆ
- 1/4 ಟಿಸ್ಪೂನ್ ಸಾಸಿವೆ
- ಒಂದು ಚಿಟಿಕೆ ಇಂಗು
ಕರಿಬೇವು ಸೊಪ್ಪಿನ ಚಟ್ನಿ ಮಾಡುವ ವಿಧಾನ:
- ಒಂದು ಬಾಣಲೆಯಲ್ಲಿ ೧ ಚಮಚ ಎಣ್ಣೆ ಹಾಕಿ ಕರಿಬೇವು ಮತ್ತು ಹಸಿರುಮೆಣಸಿನಕಾಯಿಯನ್ನು ಹುರಿಯಿರಿ.
- ತೆಂಗಿನ ತುರಿ, ಹುಣಿಸೆ ಹಣ್ಣು, ಹುರಿದ ಕರಿಬೇವು, ಹುರಿದ ಹಸಿರುಮೆಣಸಿನ ಕಾಯಿ ಮತ್ತು ಉಪ್ಪು ಹಾಕಿ ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. ಬೇಕಾದಲ್ಲಿ ತೆಂಗಿನಕಾಯಿ ಕಡಿಮೆ ಮಾಡಿ ಸ್ವಲ್ಪ ಹುರಿಗಡಲೆಯನ್ನು ಸೇರಿಸಬಹುದು.
- ಒಂದು ಬಟ್ಟಲಿಗೆ ತೆಗೆದು, ಸಾಸಿವೆ, ಕರಿಬೇವು ಮತ್ತು ಇಂಗಿನ ಒಗ್ಗರಣೆ ಕೊಡಿ. ದೋಸೆ ಅಥವಾ ಇಡ್ಲಿಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ