How to store green peas in kannada | ಹಸಿಬಟಾಣಿಯನ್ನು ತುಂಬ ದಿನ ಇಡುವುದು ಹೇಗೆ?
ಹಸಿಬಟಾಣಿಯನ್ನು ಶೇಖರಿಸುವ ವಿಡಿಯೋ
ಹಸಿಬಟಾಣಿಯನ್ನು ಶೇಖರಿಸುವ ಸಲಹೆಗಳು:
- ಅಗತ್ಯವಿದ್ದಷ್ಟು ಹಸಿಬಟಾಣಿಯನ್ನು ಸುಲಿದು ತೆಗೆದುಕೊಳ್ಳಿ.
- ಒಂದು ಪಾತ್ರೆಯಲ್ಲಿ ನೀರು ಕುದಿಯಲು ಇಡಿ.
- ಕುದಿಯಲು ಶುರು ಆದ ಮೇಲೆ ಸುಲಿದ ಬಟಾಣಿ ಹಾಕಿ.
- ಒಂದು ನಿಮಿಷ ಅಥವಾ ಬಟಾಣಿ ಎಲ್ಲ ಮೇಲೆ ಬರುವವರೆಗೆ ಕುದಿಸಿ, ಕೂಡಲೇ ಸ್ಟವ್ ಆಫ್ ಮಾಡಿ.
- ನಂತ್ರ ನೀರನ್ನು ಬಗ್ಗಿಸಿ.
- ಮೇಲಿನಿಂದ ಸ್ವಲ್ಪ ನೀರನ್ನು ಸುರಿಯಿರಿ. ಹೀಗೆ ಮಾಡುವುದರಿಂದ ಜಾಸ್ತಿ ಬೇಯಿಸುವುದನ್ನು ತಪ್ಪಿಸಬಹುದು.
- ಆಮೇಲೆ ಒಂದು ಬಟ್ಟೆಯ ಮೇಲೆ ಹರಡಿ.
- ಬಿಸಿ ಆರಿದ ಮೇಲೆ ಬಾಕ್ಸ್ ಅಥವಾ ಜಿಪ್ ಲಾಕ್ ಕವರ್ ನಲ್ಲಿ ಹಾಕಿ ಫ್ರೀಜರ್ನಲ್ಲಿಡಿ (ಫ್ರಿಡ್ಜ್ ನ ಮೇಲ್ಭಾಗ).
- ಒಂದು ವರ್ಷದವರೆಗೆ ಹಾಳಾಗುವುದಿಲ್ಲ. ಅಗತ್ಯವಿದ್ದಾಗ ಬಳಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ