How to clean stove burner in Kannada | ಸ್ಟವ್ ಬರ್ನರ್ ಸ್ವಚ್ಛ ಗೊಳಿಸುವ ವಿಧಾನ
ಸ್ಟವ್ ಬರ್ನರ್ ಸ್ವಚ್ಛ ಗೊಳಿಸುವ ವಿಡಿಯೋ
ಬೇಕಾಗುವ ಪದಾರ್ಥಗಳು - ವಿಧಾನ ೧:( ಅಳತೆ ಕಪ್ = 240 ಎಂಎಲ್ )
- ಅಗತ್ಯವಿದ್ದಷ್ಟು ಬಿಸಿ ನೀರು
- ಅರ್ಧ ನಿಂಬೆ ಹಣ್ಣು
- ಒಂದು ಸಣ್ಣ ಪ್ಯಾಕ್ ಇನೋ
- ಸ್ವಲ್ಪ ಪಾತ್ರೆ ತೊಳೆಯುವ ಲಿಕ್ವಿಡ್ (ಅಥವಾ ಡಿಟರ್ಜೆಂಟ್)
- ಒಂದು ಬ್ರಷ್ ಅಥವಾ ಸ್ಕ್ರಬ್ಬರ್
ಬೇಕಾಗುವ ಪದಾರ್ಥಗಳು - ವಿಧಾನ ೨:( ಅಳತೆ ಕಪ್ = 240 ಎಂಎಲ್ )
- ಅರ್ಧ ಕಪ್ ಬಿಸಿ ನೀರು
- ಅರ್ಧ ಕಪ್ ವಿನೆಗರ್
- ಎರಡು ಚಮಚ ಅಡುಗೆ ಸೋಡಾ
- ಸ್ವಲ್ಪ ಪಾತ್ರೆ ತೊಳೆಯುವ ಲಿಕ್ವಿಡ್ (ಅಥವಾ ಡಿಟರ್ಜೆಂಟ್)
- ಒಂದು ಬ್ರಷ್ ಅಥವಾ ಸ್ಕ್ರಬ್ಬರ್
ಸ್ಟವ್ ಬರ್ನರ್ ಸ್ವಚ್ಛ ಗೊಳಿಸುವ ವಿಧಾನ:
- ಮೊದಲನೇ ವಿಧಾನವಾದಲ್ಲಿ, ಒಂದು ಬೌಲ್ನಲ್ಲಿ ಬಿಸಿ ನೀರು, ಅರ್ಧ ನಿಂಬೆ ಹಣ್ಣು ಮತ್ತು ಒಂದು ಸಣ್ಣ ಪ್ಯಾಕ್ ಇನೋ ಫ್ರೂಟ್ ಸಾಲ್ಟ್ ಹಾಕಿ. ಅದರಲ್ಲಿ ಸ್ಟವ್ ಬರ್ನರ್ ಎರಡು ಘಂಟೆ ನೆನೆಸಿಡಿ.
- ಮೊದಲನೇ ವಿಧಾನವಾದಲ್ಲಿ, ಒಂದು ಬೌಲ್ನಲ್ಲಿ ಬಿಸಿ ನೀರು, ವಿನೆಗರ್ ಮತ್ತು ಅಡುಗೆ ಸೋಡಾ ಹಾಕಿ. ಅದರಲ್ಲಿ ಸ್ಟವ್ ಬರ್ನರ್ ಎರಡು ಘಂಟೆ ನೆನೆಸಿಡಿ.
- ಇನೋ ಫ್ರೂಟ್ ಸಾಲ್ಟ್ ಅಥವಾ ವಿನೆಗರ್ ಇಲ್ಲವಾದಲ್ಲಿ, ಬಿಸಿ ನೀರು ಮತ್ತು ಸ್ವಲ್ಪ ಪಾತ್ರೆ ತೊಳೆಯುವ ಲಿಕ್ವಿಡ್ (ಅಥವಾ ಡಿಟರ್ಜೆಂಟ್) ನಲ್ಲಿ ನೆನೆಸಿಡಿ.
- ನೆನೆಸಿದ ನಂತರ ಬ್ರಷ್ (ಅಥವಾ ಸ್ಕ್ರಬ್ಬರ್) ಮತ್ತು ಪಾತ್ರೆ ತೊಳೆಯೋ ಸೋಪ್ ಹಾಕಿ ಚೆನ್ನಾಗಿ ತಿಕ್ಕಿ.
- ಜಾಸ್ತಿ ಹೊಳತೆ ಬೇಕಾದಲ್ಲಿ ಸ್ಟೀಲ್ ಸ್ಕ್ರಬ್ಬರ್ ನಲ್ಲಿ ಮೆತ್ತಗೆ ತಿಕ್ಕಿ.
- ಚೆನ್ನಾಗಿ ತೊಳೆದು, ನೀರಾರಲು ಬಿಡಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ