ಮೊಳಕೆ ಕಾಳು ಮಾಡುವ ವಿಧಾನ
ಮೊಳಕೆ ಕಾಳು ಮಾಡುವ ವಿಧಾನ:
- ಹೆಸರು ಕಾಳನ್ನು ಒಳ್ಳೆಯ ನೀರಿನಲ್ಲಿ ಒಂದೆರಡು ಬಾರಿ ತೊಳೆದು, 5 - 6 ಘಂಟೆಗಳ ಕಾಲ ನೆನೆಸಿಡಿ. ನಾನು ಬೆಳಿಗ್ಗೆಯಿಂದ ಸಂಜೆಯವರೆಗೆ ನೆನೆಸುತ್ತೇನೆ.
- ನೆನೆದ ನಂತರ ನೀರನ್ನು ಬಗ್ಗಿಸಿ ಪುನಃ ಒಮ್ಮೆ ಒಳ್ಳೆಯ ನೀರಿನಲ್ಲಿ ತೊಳೆಯಿರಿ. ನೀರನ್ನು ಸಂಪೂರ್ಣ ಬಗ್ಗಿಸಿ ತೆಗೆಯಿರಿ.
- ಈಗ ಒಂದು ಶುದ್ಧವಾದ ಬಟ್ಟೆಯಲ್ಲಿ ನೆನೆಸಿದ ಕಾಳನ್ನು ಸುರಿಯಿರಿ.
- ಕಾಳನ್ನು ಬಟ್ಟೆಯಲ್ಲಿ ಗಂಟು ಕಟ್ಟಿ ಶುದ್ಧವಾಗಿರುವ ಪಾತ್ರೆಯೊಳಗೆ ಇಡಿ.
- ಮೇಲಿನಿಂದ ಒಂದು ಕಲ್ಲು ಅಥವಾ ಇನ್ನಾವುದೇ ಭಾರದ ವಸ್ತುವೊಂದನ್ನು ಇಡಿ. ಹೀಗೆ ಮಾಡುವುದರಿಂದ ಮೊಳಕೆ ಚೆನ್ನಾಗಿ ಬರುತ್ತದೆ.
- ಸುಮಾರು 12 - 14 ಘಂಟೆಗಳ ನಂತರ ಬಟ್ಟೆ ಬಿಡಿಸಿ ನೋಡಿದಲ್ಲಿ ಕಾಳು ಚೆನ್ನಾಗಿ ಮೊಳಕೆಯೊಡೆಡಿರುತ್ತದೆ. ನಿಮಗೆ ಉದ್ದ ಮೊಳಕೆ ಬೇಕಾದಲ್ಲಿ ಹೆಚ್ಚು ಸಮಯ ಇಡಿ. ಈಗ ಈ ಮೊಳಕೆ ಕಾಳನ್ನು ಪಲ್ಯ, ಕೋಸಂಬರಿ ಅಥವಾ ಇನ್ನಾವುದೇ ಅಡುಗೆಯಲ್ಲಿ ಉಪಯೋಗಿಸಿ.
- ಒಂದು ಸುಲಭ ಕೋಸಂಬರಿ ಮಾಡಲು, ಒಂದು ಸಣ್ಣ ಸೌತೆಕಾಯಿ ಮತ್ತು ಒಂದು ಕ್ಯಾರೆಟ್ ತುರಿದುಕೊಳ್ಳಿ. ಒಂದು ಟೊಮ್ಯಾಟೋ ವನ್ನು ಸಣ್ಣಗೆ ಹೆಚ್ಚಿ ಕೊಳ್ಳಿ. ಸ್ವಲ್ಪ ಉಪ್ಪು, ಕಾಳು ಮೆಣಸಿನ ಪುಡಿ ಮತ್ತು ಲಿಂಬೆಹಣ್ಣಿನ ರಸವನ್ನು ಸಿದ್ಧ ಮಾಡಿಟ್ಟು ಕೊಳ್ಳಿ.
- ಈಗ ಎಲ್ಲ ಪದಾರ್ಥಗಳನ್ನು 1 ಕಪ್ ಹೆಸರು ಕಾಳು ಮೊಳಕೆಯೊಂದಿಗೆ ಬೆರೆಸಿ ಸವಿಯಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ