Peanut butter recipe in Kannada | ಶೇಂಗಾ ಬೆಣ್ಣೆ ಮಾಡುವ ವಿಧಾನ
ಶೇಂಗಾ ಬೆಣ್ಣೆ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1 ಕಪ್ ನೆಲಗಡಲೆ ಅಥವಾ ಶೇಂಗಾ
- ದೊಡ್ಡ ಚಿಟಿಕೆ ಉಪ್ಪು
- 1 ಚಮಚ ತೆಂಗಿನೆಣ್ಣೆ (ಬೇಕಾದಲ್ಲಿ; ಬೇರೆ ಎಣ್ಣೆ ಬಳಸಬಹುದು)
- 1 ಚಮಚ ಬೆಲ್ಲ ಅಥವಾ ಜೇನುತುಪ್ಪ
ಶೇಂಗಾ ಬೆಣ್ಣೆ ಮಾಡುವ ವಿಧಾನ:
- ಶೇಂಗಾ ಅಥವಾ ಕಡ್ಲೆಕಾಯಿಯನ್ನು ದಪ್ಪ ತಳದ ಬಾಣಲೆಯಲ್ಲಿ ತೆಗೆದುಕೊಂಡು ಅಲ್ಲಲ್ಲಿ ಕಂದುಬಣ್ಣ ಬರುವವರೆಗೆ ಅಥವಾ ಗರಿಗರಿಯಾಗುವವರೆಗೆ, ಮಧ್ಯಮ ಉರಿಯಲ್ಲಿ ಹುರಿಯಿರಿ.
- ಬಿಸಿ ಆರಿದ ಮೇಲೆ ಸಿಪ್ಪೆ ತೆಗೆಯಿರಿ.
- ಮಿಕ್ಸಿಜಾರಿನಲ್ಲಿ ತೆಗೆದುಕೊಂಡು ಪುಡಿ ಮಾಡಿ.
- ಆಮೇಲೆ ಉಪ್ಪು, ಎಣ್ಣೆ ಮತ್ತು ಜೇನುತುಪ್ಪ ಸೇರಿಸಿ.
- ಶೆಂಗಾ ಎಣ್ಣೆ ಬಿಟ್ಟು, ಪೇಸ್ಟ್ ಆಗುವವರೆಗೆ ಅರೆಯಿರಿ (ಮೇಲಿರುವ ವಿಡಿಯೋ ನೋಡಿ)
- ಗಾಳಿಯಾಡದ ಡಬ್ಬದಲ್ಲಿ ಎತ್ತಿಡಿ. ಫ್ರಿಡ್ಜ್ ನಲ್ಲಿ ಮೂರು ತಿಂಗಳು, ಹೊರಗೆ ಒಂದು ತಿಂಗಳು ಇಡಬಹುದು.
- ಬ್ರೆಡ್, ಚಪಾತಿ ಅಥವಾ ದೋಸೆಯೊಂದಿಗೆ ಬಡಿಸಿ. ಸ್ಯಾಂಡ್ವಿಚ್ ನಲ್ಲೂ ಬಳಸಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ