Curd in 1 hour recipe in Kannada | ಗಟ್ಟಿಮೊಸರು 1 ಘಂಟೆಯಲ್ಲಿ ಮಾಡುವ ವಿಧಾನ
ಗಟ್ಟಿಮೊಸರು ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- ಅರ್ಧ ಲೀಟರ್ ಹಾಲು
- 5 - 6 ಟೇಬಲ್ ಚಮಚ ಮೊಸರು
ಗಟ್ಟಿಮೊಸರು 1 ಘಂಟೆಯಲ್ಲಿ ಮಾಡುವ ವಿಧಾನ:
- ಹಾಲನ್ನು ಕುದಿಸಿ.
- ಬಿಸಿ ಕಡಿಮೆ ಆದ ಮೇಲೆ (ಉಗುರು ಬೆಚ್ಚಗೆ ಗಿಂತ ಸ್ವಲ್ಪ ಜಾಸ್ತಿ ಬಿಸಿ ಇರಲಿ), ಮೊಸರು ಸೇರಿಸಿ.
- ಚೆನ್ನಾಗಿ ಎತ್ತಿಹಾಕಿ ಮಿಕ್ಸ್ ಮಾಡಿ.
- ಮೊಸರು ಮಾಡಲು ಎರಡು ಪಾತ್ರೆಗೆ ಹಾಕಿ.
- ಒಂದು ಪಾತ್ರೆಯನ್ನು ಸ್ವಲ್ಪ ಬೆಚ್ಚಗೆ ಮಾಡಿಕೊಂಡು ಅದರಲ್ಲಿ ಮೊದಲನೇ ಹಾಲಿನ ಪಾತ್ರೆ ಇಟ್ಟು ಮುಚ್ಚಳ ಮುಚ್ಚಿ. ಈ ವಿಧಾನದಲ್ಲಿ ಸುಮಾರು ಎರಡು ಘಂಟೆ ಬೇಕಾಗುತ್ತದೆ.
- ಎರಡನೇ ವಿಧಾನದಲ್ಲಿ, ಒಂದು ಪಾತ್ರೆ ಅಥವಾ ಕುಕ್ಕರ್ ನಲ್ಲಿ ಸ್ವಲ್ಪ ನೀರು ಬಿಸಿ ಮಾಡಿ. ನಂತರ ಸ್ಟವ್ ಆಫ್ ಮಾಡಿ.
- ಒಂದು ಸ್ಟಾಂಡ್ ಇಟ್ಟು, ಹಾಲಿನ ಪಾತ್ರೆ ಇಟ್ಟು ಮುಚ್ಚಳ ಮುಚ್ಚಿ.
- ನಂತ್ರ ಪಾತ್ರೆ ಅಥವಾ ಕುಕ್ಕರ್ ನ ಮುಚ್ಚಳವನ್ನೂ ಮುಚ್ಚಿ.
- ಈ ವಿಧಾನದಲ್ಲಿ ಒಂದೇ ಘಂಟೆಯಲ್ಲಿ ಮೊಸರು ತಯಾರಾಗುತ್ತದೆ.
- ಮಾಡಿ ನೋಡಿ. ಮೇಲೆ ಇರುವ ವಿಡಿಯೋವನ್ನು ಒಮ್ಮೆ ನೋಡಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ