How to store leaves in kannada | ಸೊಪ್ಪನ್ನು ತುಂಬ ದಿನ ಇಡುವುದು ಹೇಗೆ?
ಅಡುಗೆಮನೆಯ ಉಪಯುಕ್ತ ಸಲಹೆಗಳು
ಅಡುಗೆಮನೆಯ ಉಪಯುಕ್ತ ಸಲಹೆಗಳು:
- ಕರಿಬೇವನ್ನು ಆಯ್ದು, ಎಲೆಗಳನ್ನು ತೆಗೆದುಕೊಳ್ಳಿ.
- ನಂತ್ರ ಚೆನ್ನಾಗಿ ತೊಳೆದು ಒಂದು ಬಟ್ಟೆಯ ಮೇಲೆ ಹರಡಿ ನೀರಾರಲು ಬಿಡಿ.
- ನೀರಾರಿದ ಮೇಲೆ, ಒಂದು ಬಾಕ್ಸ್ ನ ತಳಕ್ಕೆ ಟಿಶ್ಯೂ ಪೇಪರ್ ಹಾಕಿ, ಕರಿಬೇವನ್ನು ತುಂಬಿಸಿ ಫ್ರಿಡ್ಜ್ ನಲ್ಲಿಡಿ. ಒಂದು ತಿಂಗಳು ಹಾಳಾಗುವುದಿಲ್ಲ.
- ಕೊತ್ತಂಬರಿ ಸೊಪ್ಪನ್ನು ಆರಿಸಿ. ಕೊಳೆತ, ಹಣ್ಣಾದ ಮತ್ತು ಹಾಳಾದ ಸೊಪ್ಪು ಬೇರ್ಪಡಿಸಿ. ಹಣ್ಣಾದ ಸೊಪ್ಪನ್ನು ಒಂದೆರಡು ದಿನಗಳಲ್ಲಿ ಉಪಯೋಗಿಸಿ ಬಿಡಿ.
- ಬೇರಿನ ಭಾಗವನ್ನೂ ತೆಗೆಯಿರಿ.
- ಒಳ್ಳೆ ಸೊಪ್ಪನ್ನು ಪೇಪರ್ ನಲ್ಲಿ ಸುತ್ತಿ. ನೀರಿನ ಪಸೆ ಇರಬಾರದು.
- ಆಮೇಲೆ ಪೇಪರ್ ಸಹಿತ ಒಂದು ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿ ಫ್ರಿಡ್ಜ್ ನಲ್ಲಿಡಿ. ಮೂರು ವಾರ ಹಾಳಾಗುವುದಿಲ್ಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ