Kitchen tips and tricks in kannada | ಅಡುಗೆಮನೆಯ ಉಪಯುಕ್ತ ಸಲಹೆಗಳು
ಅಡುಗೆಮನೆಯ ಉಪಯುಕ್ತ ಸಲಹೆಗಳು
ಅಡುಗೆಮನೆಯ ಉಪಯುಕ್ತ ಸಲಹೆಗಳು:
- ಹಸಿರುಮೆಣಸಿನಕಾಯಿಯನ್ನು ಕತ್ತರಿಯಲ್ಲಿ ಕತ್ತರಿಸಿ. ಇದರಿಂದ ಕೈ ಉರಿಯುವುದಿಲ್ಲ.
- ನಿಂಬೆ ಹಣ್ಣನ್ನು ಚೆನ್ನಾಗಿ ತಿಕ್ಕಿ, ತೊಳೆದು ಆಮೇಲೆ ರಸ ತೆಗೆದರೆ, ರಸ ತೆಗೆಯಲೂ ಸುಲಭ ಮತ್ತು ಹೆಚ್ಚು ರಸವೂ ಬರುತ್ತದೆ.
- ಶುಂಠಿ ಸಿಪ್ಪೆಯನ್ನು ಚಮಚದಲ್ಲಿ ತೆಗೆಯಿರಿ.
- ಶುಂಠಿಯನ್ನು ಸಣ್ಣಗೆ ಕತ್ತರಿಸಲು, ತುರಿಯಿರಿ ಅಥವಾ ತೆಳುವಾದ ಚಕ್ರಮಾಡಿಕೊಂಡು ಜಜ್ಜಿ.
- ಸಕ್ಕರೆಗೆ ಇರುವೆ ಬರದಿರಲು ನಾಲ್ಕೈದು ಲವಂಗ ಹಾಕಿ ಇಡೀ.
- ಈರುಳ್ಳಿ ಭಾಗ ಮಾಡಿ, ಸಿಪ್ಪೆ ತೆಗೆದು, ಒಮ್ಮೆ ನೀರಿನಲ್ಲಿ ತೊಳೆದು, ಆಮೇಲೆ ಕತ್ತರಿಸುವುದರಿಂದ ಕಣ್ಣೀರು ಬರುವುದಿಲ್ಲ.
- ಬೆಳ್ಳುಳ್ಳಿ ಗಡ್ಡೆಯನ್ನು ಚೆನ್ನಾಗಿ ಗುದ್ದಿದಲ್ಲಿ ಸಿಪ್ಪೆ ತೆಗೆಯಲು ಸುಲಭವಾಗುತ್ತದೆ (ಮೇಲೆ ಹಾಕಿದ ವಿಡಿಯೋ ನೋಡಿ)
- ಬೆಳ್ಳುಳ್ಳಿ ಬೇಳೆಯನ್ನು ಬಿಸಿ ನೀರಿಗೆ ಹಾಕಿ, ಒಂದೆರಡು ನಿಮಿಷ ಬಿಟ್ಟರೆ, ಸುಲಭವಾಗಿ ಸಿಪ್ಪೆ ತೆಗೆಯಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ