Uddinittu recipe in Kannada | ಉದ್ದಿನಿಟ್ಟು ಮಾಡುವ ವಿಧಾನ
ಉದ್ದಿನಿಟ್ಟು ವೀಡಿಯೊ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1/4 ಕಪ್ ಅಥವಾ 4 ಚಮಚ ಉದ್ದಿನ ಹಿಟ್ಟು
- 1 ಟೀಸ್ಪೂನ್ ಸಣ್ಣಗೆ ಕತ್ತರಿಸಿದ ಹಸಿರು ಮೆಣಸಿನಕಾಯಿ
- 1 ಟೀಸ್ಪೂನ್ ಸಣ್ಣಗೆ ಕತ್ತರಿಸಿದ ಶುಂಠಿ
- 1 ಟೀಸ್ಪೂನ್ ಕತ್ತರಿಸಿದ ಕರಿಬೇವು
- 1 ಟೀಸ್ಪೂನ್ ಕತ್ತರಿಸಿದ ಕೊತ್ತಂಬರಿ ಸೊಪ್ಪು
- ಉಪ್ಪು ರುಚಿಗೆ ತಕ್ಕಷ್ಟು
- 1 ಕಪ್ ಮೊಸರು ಅಥವಾ ಮಜ್ಜಿಗೆ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1 ಟೀಸ್ಪೂನ್ ಅಡುಗೆ ಎಣ್ಣೆ
- 1ಸಂಡಿಗೆ ಮೆಣಸು ಅಥವಾ ಮಜ್ಜಿಗೆ ಮೆಣಸು
- ಒಂದು ಚಿಟಿಕೆ ಇಂಗು
- 1/4 ಟೀಸ್ಪೂನ್ ಸಾಸಿವೆ
ಉದ್ದಿನಿಟ್ಟು ಮಾಡುವ ವಿಧಾನ:
- ಉದ್ದಿನ ಬೇಳೆಯನ್ನು ಮಿಕ್ಸಿಯಲ್ಲಿ ಪುಡಿಮಾಡಿಕೊಳ್ಳಿ.
- ಸುಮಾರು ನಾಲ್ಕು ಚಮಚದಷ್ಟು ಹಿಟ್ಟನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಳ್ಳಿ.
- ಅದಕ್ಕೆ ಸಣ್ಣಗೆ ಕತ್ತರಿಸಿದ ಹಸಿರುಮೆಣಸಿನಕಾಯಿ, ಶುಂಠಿ, ಕರಿಬೇವು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಕಲಸಿ.
- ಅದಕ್ಕೆ ಮೊಸರು ಅಥವಾ ಮಜ್ಜಿಗೆ ಸೇರಿಸಿ ತೆಳುವಾದ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
- ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
- ಎಣ್ಣೆ, ಮಜ್ಜಿಗೆಮೆಣಸು, ಇಂಗು ಮತ್ತು ಸಾಸಿವೆಯ ಒಗ್ಗರಣೆ ಕೊಡಿ. ಮಜ್ಜಿಗೆ ಮೆಣಸಿಲ್ಲದಿದ್ದಲ್ಲಿ, ಒಣಮೆಣಸನ್ನು ಹಾಕಬಹುದು. ಬಿಸಿ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ