Southe pundi or unde kadubu recipe in Kannada | ಸೌತೆ ಪುಂಡಿ ಅಥವಾ ಉಂಡೆ ಕಡುಬು ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1.5 ಕಪ್ ಉತ್ತಮ ಗುಣಮಟ್ಟದ ದೋಸೆ ಅಕ್ಕಿ
- 1/2 ಕಪ್ ತೆಂಗಿನ ತುರಿ
- 1/2ಮುಳ್ಳು ಸೌತೆಕಾಯಿ
- 2.5 ಕಪ್ ನೀರು
- ಉಪ್ಪು ರುಚಿಗೆ ತಕ್ಕಷ್ಟು
ಸೌತೆ ಪುಂಡಿ ಅಥವಾ ಉಂಡೆ ಕಡುಬು ಮಾಡುವ ವಿಧಾನ:
- ಅಕ್ಕಿಯನ್ನು ತೊಳೆದು, ನೀರು ಬಗ್ಗಿಸಿ, ನೀರಾರಲು ಬಿಡಿ.
- ನಂತರ ಮಿಕ್ಸಿಯಲ್ಲಿ ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ. ಕೆಲವು ಸೆಕೆಂಡ್ ಗಳ ಕಾಲ ಮಿಕ್ಸಿ ಮಾಡಿದರೆ ಸಾಕಾಗುತ್ತದೆ.
- ಮುಳ್ಳುಸೌತೆಯನ್ನು ಮತ್ತು ತೆಂಗಿನಕಾಯಿಯನ್ನು ತುರಿದಿಡಿ.
- ಒಂದು ಬಾಣಲೆಯಲ್ಲಿ ನೀರು ಮತ್ತು ಉಪ್ಪು ಹಾಕಿ ಕುದಿಯಲು ಇಡಿ.
- ನೀರು ಕುದಿಯಲು ಪ್ರಾರಂಭಿಸಿದ ಕೂಡಲೇ ಮೊದಲಿಗೆ ತುರಿದ ಮುಳ್ಳು ಸೌತೆ ಮತ್ತು ತೆಂಗಿನ ತುರಿ ಹಾಕಿ.
- ನಂತ್ರ ಅಕ್ಕಿ ತರಿ ಅಥವಾ ರವೆಯನ್ನು ಹಾಕುತ್ತಾ ದೋಸೆ ಸಟ್ಟುಗ ಉಪಯೋಗಿಸಿ ಗಂಟಾಗದಂತೆ ಮಗುಚಿ.
- ಮಧ್ಯಮ ಉರಿಯಲ್ಲಿ ಗಟ್ಟಿಯಾಗುವವರೆಗೆ ಮಗುಚಿ. ತುಂಬ ಗಟ್ಟಿಯಾಗುವುದು ಬೇಡ. ಸಟ್ಟುಗ ಬೀಳದೆ ನೇರ ನಿಲ್ಲುವಷ್ಟು ಗಟ್ಟಿ ಆದರೆ ಸಾಕು. ಸ್ಟವ್ ಆಫ್ ಮಾಡಿ.
- ಸ್ವಲ್ಪ ಬಿಸಿ ಆರಿದ ಮೇಲೆ, ಕೈಗೆ ನೀರು ಮುಟ್ಟಿಸಿಕೊಂಡು, ಸಣ್ಣ ಕಿತ್ತಳೆ ಗಾತ್ರದ ಉಂಡೆಗಳನ್ನು ಮಾಡಿ, ಹೆಬ್ಬೆರಳಿಂದ ಒಂದು ಗುಳಿಯನ್ನು ಮಾಡಿ. ಅಥವಾ ನಿಮ್ಮಿಷ್ಟದಂತೆ ಚಪ್ಪಟೆ ಅಥವಾ ಗೋಲಾಕಾರದಲ್ಲೂ ಮಾಡಬಹುದು.
- ಸೆಕೆಯಲ್ಲಿ (ಆವಿಯಲ್ಲಿ) 15 ನಿಮಿಷ ಬೇಯಿಸಿ. ಬೇಯಿಸುವ ಸಮಯ ಕಡುಬಿನ ಪ್ರಮಾಣದ ಮೇಲೆ ಬದಲಾಗಬಹುದು. ಚಟ್ನಿ, ಸಾಂಬಾರ್ ಅಥವಾ ಸಾರಿನಿಂದಿಗೆ ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ