Badane bol koddel recipe in Kannada | ಬದನೆ ಬೋಳು ಕೊದ್ದೆಲ್ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:(ಅಳತೆ ಕಪ್ = 240 ಎಂಎಲ್ )
- 4 ಮಧ್ಯಮ ಗಾತ್ರದ ಬದನೆಕಾಯಿ (ಉಡುಪಿ ಮಟ್ಟುಗುಳ್ಳ)
- 1/2 ಕಪ್ ತೊಗರಿಬೇಳೆ
- 1 - 2 ಹಸಿಮೆಣಸು
- 2 ಟೀಸ್ಪೂನ್ ಬೆಲ್ಲ
- ದೊಡ್ಡ ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು
- 2 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
- ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1 ಕೆಂಪು ಮೆಣಸಿನಕಾಯಿ
- 1/2 ಟೀಸ್ಪೂನ್ ಸಾಸಿವೆ
- 1/2 ಟೀಸ್ಪೂನ್ ಜೀರಿಗೆ
- 4 - 5 ಕರಿಬೇವಿನ ಎಲೆ
- 2 ಟೀಸ್ಪೂನ್ ಎಣ್ಣೆ ಅಥವಾ ತುಪ್ಪ
- 1/4 ಟೀಸ್ಪೂನ್ ಇಂಗು
ಬದನೆ ಬೋಳು ಕೊದ್ದೆಲ್ ಅಥವಾ ಬೋಳು ಹುಳಿ ಮಾಡುವ ವಿಧಾನ:
- ಬದನೆಕಾಯಿಯನ್ನು ಕತ್ತರಿಸಿ 15 ನಿಮಿಷ ನೀರಿನಲ್ಲಿ ಹಾಕಿಡಿ.
- ಒಂದು ಕುಕ್ಕರ್ ನಲ್ಲಿ ತೊಗರಿ ಬೇಳೆಯನ್ನು ಹಾಕಿ ತೊಳೆಯಿರಿ. ಅದಕ್ಕೆ ೧ ಕಪ್ ನೀರು, ಅರಶಿನ ಪುಡಿ ಮತ್ತು ಒಂದೆರಡು ಹನಿ ಎಣ್ಣೆ ಹಾಕಿ.
- ಮುಚ್ಚಳ ಮುಚ್ಚಿ ಎರಡು ವಿಷಲ್ ಮಾಡಿ ಮೆತ್ತಗೆ ಬೇಯಿಸಿ.
- ಈಗ ಬೇಳೆಯಿರುವ ಕುಕ್ಕರ್ ಗೆ ಕತ್ತರಿಸಿದ ಬದನೆಕಾಯಿ, ಉಪ್ಪು, ಹುಳಿ, ಬೆಲ್ಲ ಮತ್ತು ಸೀಳಿದ ಹಸಿರುಮೆಣಸಿನಕಾಯಿಯನ್ನು ಹಾಕಿ.
- ನೀರು ಸೇರಿಸಿ ಬದನೆಕಾಯಿ ಮೆತ್ತಗಾಗುವವರೆಗೆ ಬೇಯಿಸಿ.
- ಕೊತ್ತಂಬರಿ ಸೊಪ್ಪು ಸೇರಿಸಿ ಸ್ಟವ್ ಆಫ್ ಮಾಡಿ. ಬೇಕಾದಲ್ಲಿ ಉಪ್ಪು, ಸಿಹಿ ಮತ್ತು ಹುಳಿಯನ್ನು ಸರಿಹೊಂದಿಸಿ.
- ಸಣ್ಣ ಬಾಣಲೆ ಅಥವಾ ಒಗ್ಗರಣೆ ಸೌಟಿನಲ್ಲಿ ತುಪ್ಪ, ಕೆಂಪು ಮೆಣಸಿನಕಾಯಿ, ಸಾಸಿವೆ, ಜೀರಿಗೆ, ಇಂಗು ಮತ್ತು ಕರಿಬೇವಿನ ಒಗ್ಗರಣೆ ಮಾಡಿ ಸೇರಿಸಿ. ಬಿಸಿಯಾದ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ