Malpuri recipe in Kannada |ಮಾಲ್ಪುರಿ ಮಾಡುವ ವಿಧಾನ
ಮಾಲ್ಪುರಿ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಮೈದಾ ಹಿಟ್ಟು
- 1/4 ಕಪ್ ಸಕ್ಕರೆ
- ದೊಡ್ಡ ಚಿಟಿಕೆ ಏಲಕ್ಕಿ ಪುಡಿ
- ಒಂದು ಚಿಟಿಕೆ ಹಳದಿ ಬಣ್ಣ ಅಥವಾ ಅರಿಶಿನ
- 1/2 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಂತೆ)
- ಚಿಟಿಕೆ ಅಡುಗೆ ಸೋಡಾ
- ನೀರು ಸುಮಾರು ಒಂದು ಲೋಟ
- ಎಣ್ಣೆ ಮಾಲ್ಪುರಿ ಕಾಯಿಸಲು
ಮಾಲ್ಪುರಿ ಮಾಡುವ ವಿಧಾನ:
- ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟು, ಸಕ್ಕರೆ ಮತ್ತು ಏಲಕ್ಕಿ ಪುಡಿ ತೆಗೆದುಕೊಳ್ಳಿ.
- ಅದಕ್ಕೆ ಉಪ್ಪು, ಹಳದಿ ಬಣ್ಣ (ಅಥವಾ ಅರಿಶಿನ) ಮತ್ತು ಅಡುಗೆ ಸೋಡಾ ಸೇರಿಸಿ.
- ಅಗತ್ಯವಿದ್ದಷ್ಟು ನೀರು ಸೇರಿಸಿ, ದಪ್ಪ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಸುಮಾರು ಒಂದು ಕಪ್ ನೀರು ಬೇಕಾಗುವುದು.
- ಒಂದು ಘಂಟೆ ಹಿಟ್ಟನ್ನು ಪಕ್ಕಕ್ಕಿಡಿ.
- ಆಮೇಲೆ ಒಂದು ಅಗಲವಾದ ಬಾಣಲೆಯಲ್ಲಿ, ಅಥವಾ ದೋಸೆ ಕಲ್ಲಿನಲ್ಲಿ, ಸ್ವಲ್ಪ ಎಣ್ಣೆ ಬಿಸಿಮಾಡಿ. ಸುಮಾರು ಅರ್ಧ ಸೆಂಟಿಮೀಟರ್ ನಷ್ಟು ಎಣ್ಣೆ ಇದ್ದರೆ ಸಾಕು.
- ನಂತರ ಒಂದು ಸೌಟು ಹಿಟ್ಟು ಸುರಿಯಿರಿ.
- ಅಂಚು ಕಂದು ಬಣ್ಣಕ್ಕೆ ತಿರುಗಿದಾಗ, ಸಟ್ಟುಗದ ಸಹಾಯದಿಂದ ತಿರುವಿ ಹಾಕಿ, ಇನ್ನೊಂದು ಬದಿಯೂ ಕಾಯಿಸಿ.
- ಹೀಗೆ ಎಲ್ಲ ಮಾಲ್ಪುರಿ ಮಾಡಿ. ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ