Mavina hannina rasayana recipe in kannada | ಮಾವಿನ ಹಣ್ಣಿನ ರಸಾಯನ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1 - 2 ಮಾವಿನಹಣ್ಣು
- 3/4 ಕಪ್ ತೆಂಗಿನತುರಿ ಅಥವಾ 1/2 ಗಟ್ಟಿ ತೆಂಗಿನಕಾಯಿ ಹಾಲು
- 1/2 ಕಪ್ ನೀರು (ಕಾಯಿಹಾಲು ತೆಗೆಯಲು)
- 1/4 ಕಪ್ ಬೆಲ್ಲ (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
- ಚಿಟಿಕೆ ಉಪ್ಪು.
ಮಾವಿನ ಹಣ್ಣಿನ ರಸಾಯನ ಮಾಡುವ ವಿಧಾನ:
- ಮಾವಿನಹಣ್ಣು ತೊಳೆದು, ಸಣ್ಣದಾಗಿ ಕತ್ತರಿಸಿ ಅಥವಾ ಕೊಚ್ಚಿ. ಮೇಲೆ ಹಾಕಿದ ವಿಡಿಯೋ ನೋಡಿ.
- ಆಮೇಲೆ ವಾಟೆ ಅಥವಾ ಗೊರಟಿನ ಭಾಗದ ಮಾವಿನ ಹಣ್ಣನ್ನು ಕೊಚ್ಚಿ ಸೇರಿಸಿ. ಗೊರಟು ಬೇಕಾದರೆ ಹಾಕಬಹುದು.
- ನಂತ್ರ ಪುಡಿ ಮಾಡಿದ ಬೆಲ್ಲ ಸೇರಿಸಿ.
- ತೆಂಗಿನ ತುರಿಯನ್ನು ಮಿಕ್ಸಿ ಜಾರಿಗೆ ಹಾಕಿ, ಅಗತ್ಯವಿದ್ದಷ್ಟು ನೀರು ಸೇರಿಸಿ, ನುಣ್ಣನೆ ಅರೆಯಿರಿ.
- ಅರೆದ ಮಿಶ್ರಣವನ್ನು ಬಟ್ಟೆಯಲ್ಲಿ ಹಿಂಡಿ, ಕಾಯಿ ಹಾಲನ್ನು ತೆಗೆದು, ಮಾವಿನಹಣ್ಣು ಮತ್ತು ಬೆಲ್ಲ ಇರುವ ಪಾತ್ರೆಗೆ ಹಾಕಿ.
- ಚಿಟಿಕೆ ಉಪ್ಪು ಹಾಕಿ. ಚೆನ್ನಾಗಿ ಕಲಸಿ.
- ನೀರು ದೋಸೆ, ತೆಳು ಅವಲಕ್ಕಿ ಅಥವಾ ಒತ್ತು ಶಾವಿಗೆಯೊಂದಿಗೆ ಬಡಿಸಿ.
Tasty and good. Tried and all in family liked. Thanks
ಪ್ರತ್ಯುತ್ತರಅಳಿಸಿ