Southe gatti recipe in Kannada | ಸೌತೆಕಾಯಿ ಗಟ್ಟಿ ಅಥವಾ ಕಡುಬು ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 2 ಕಪ್ ಸಣ್ಣಗೆ ಹೆಚ್ಚಿದ ಅಥವಾ ತುರಿದ ಸೌತೆಕಾಯಿ
- 0.5 - 1 ಕಪ್ ತೆಂಗಿನ ತುರಿ
- 1 ಕಪ್ ಅಕ್ಕಿ (ನಾನು ದೋಸೆ ಅಕ್ಕಿ ಉಪಯೋಗಿಸಿದ್ದೇನೆ)
- ಉಪ್ಪು ರುಚಿಗೆ ತಕ್ಕಷ್ಟು.
- ಬಾಳೆಎಲೆ
ಸೌತೆಕಾಯಿ ಗಟ್ಟಿ ಅಥವಾ ಕಡುಬು ಮಾಡುವ ವಿಧಾನ:
- ಅಕ್ಕಿಯನ್ನು ತೊಳೆದು, ನೀರು ಬಸಿದು, ನೀರಾರಲು ಬಿಡಿ.
- ಬಾಳೆಎಲೆಯನ್ನು ತೊಳೆದು, ಆವಿಯಲ್ಲಿ ಅಥವಾ ಸ್ಟವ್ ಮೇಲೆ ಹಿಡಿದು ಬಾಡಿಸಿಕೊಳ್ಳಿ.
- ಅಕ್ಕಿ ಒಣಗಿದ ಮೇಲೆ, ಮಿಕ್ಸಿಯಲ್ಲಿ ಸಣ್ಣನೆ ಪುಡಿ ಮಾಡಿಕೊಳ್ಳಿ. ಅಕ್ಕಿ ಪುಡಿಯು ಸ್ವಲ್ಪ ತರಿ ತರಿಯಿರುವ ಅಕ್ಕಿ ಹಿಟ್ಟಿನಂತಿರಲಿ.
- ತೆಂಗಿನ ತುರಿಯನ್ನು ಮಿಕ್ಸಿಯಲ್ಲಿ ಅಗತ್ಯವಿದ್ದಷ್ಟು ನೀರು ಸೇರಿಸಿ, ಅರೆದು ಅಕ್ಕಿ ಹಿಟ್ಟಿಗೆ ಸೇರಿಸಿ.
- ನಂತರ ಸೌತೆಕಾಯಿಯನ್ನು ಸಣ್ಣಗೆ ಹೆಚ್ಚಿ ಅಥವಾ ತುರಿದು ಅಕ್ಕಿ ಹಿಟ್ಟಿಗೆ ಸೇರಿಸಿ.
- ರುಚಿಗೆ ತಕ್ಕಷ್ಟು ಸಕ್ಕರೆ ಮತ್ತು ಉಪ್ಪನ್ನು ಹಾಕಿ.
- ಎಲ್ಲವನ್ನು ಚೆನ್ನಾಗಿ ಕಲಸಿ. ಹಿಟ್ಟು ಸುಲಭವಾಗಿ ಬೀಳುವಷ್ಟು ನೀರಾಗಿರಬೇಕು. ಆದರೆ ಕೈಗಳಿಂದ ತೆಗೆದು ಹಾಕುವಷ್ಟು ಗಟ್ಟಿಯಾಗಿರಬೇಕು.
- ಈಗ ಬಾಳೆಎಲೆ ತೆಗೆದುಕೊಂಡು, ಒಂದು ಹಿಡಿ ಹಿಟ್ಟನ್ನು ಹಾಕಿ, ಬಾಳೆಎಲೆಯನ್ನು ಪ್ಯಾಕೆಟ್ ನಂತೆ ಮಡಚಿ.
- 20 ನಿಮಿಷ ಸೆಕೆ / ಆವಿಯಲ್ಲಿ ಬೇಯಿಸಿ. ಬಿಸಿಯಾಗಿರುವಾಗಲೇ ಚಟ್ನಿಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ