Halasina hannina gatti and kadubu recipe in Kannada | ಹಲಸಿನ ಹಣ್ಣಿನ ಗಟ್ಟಿ ಅಥವಾ ಕಡುಬು ಮಾಡುವ ವಿಧಾನ
ಹಲಸಿನ ಹಣ್ಣಿನ ಗಟ್ಟಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 4 ಕಪ್ ಹಲಸಿನ ಹಣ್ಣು
- 0.5 ಕಪ್ ತೆಂಗಿನ ತುರಿ
- 1 ಕಪ್ ಅಕ್ಕಿ
- 1/4 ಕಪ್ ಬೆಲ್ಲ (ಅಥವಾ ನಿಮ್ಮ ರುಚಿಗೆ ತಕ್ಕಂತೆ)
- ಉಪ್ಪು ರುಚಿಗೆ ತಕ್ಕಷ್ಟು.
- ಬಾಳೆಎಲೆ
ಹಲಸಿನ ಹಣ್ಣಿನ ಕಡುಬಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 4 ಕಪ್ ಹಲಸಿನ ಹಣ್ಣು
- 1 ಕಪ್ ಅಕ್ಕಿ
- ಉಪ್ಪು ರುಚಿಗೆ ತಕ್ಕಷ್ಟು.
ಹಲಸಿನ ಹಣ್ಣಿನ ಗಟ್ಟಿ ಮಾಡುವ ವಿಧಾನ:
- ಅಕ್ಕಿಯನ್ನು ತೊಳೆದು 30 ನಿಮಿಷಗಳ ಕಾಲ ನೆನೆಸಿ.
- ಬಾಳೆಎಲೆಯನ್ನು ತೊಳೆದು, ಆವಿಯಲ್ಲಿ ಅಥವಾ ಸ್ಟವ್ ಮೇಲೆ ಹಿಡಿದು ಬಾಡಿಸಿಕೊಳ್ಳಿ.
- ಮಿಕ್ಸಿಯಲ್ಲಿ ನೆನೆಸಿದ ಅಕ್ಕಿ, ಹಲಸಿನ ಹಣ್ಣು, ತೆಂಗಿನತುರಿ, ಬೆಲ್ಲ ಮತ್ತು ಉಪ್ಪು ಹಾಕಿ ಸ್ವಲ್ಪ ತರಿ ತರಿಯಾಗಿ ಅರೆಯಿರಿ. ಗಮನಿಸಿ ನೀರು ಸೇರಿಸಬೇಡಿ.
- ಹಿಟ್ಟು ಇಡ್ಲಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿರಬೇಕು. ಹಿಟ್ಟು ತೆಳು ಅನಿಸಿದಲ್ಲಿ , ಸ್ವಲ್ಪ ರವೇ ಸಹ ಸೇರಿಸಬಹುದು.
- ಈಗ ಬಾಳೆಎಲೆ ತೆಗೆದುಕೊಂಡು, ಒಂದು ಹಿಡಿ ಹಿಟ್ಟನ್ನು ಹಾಕಿ, ಬಾಳೆಎಲೆಯನ್ನು ಪ್ಯಾಕೆಟ್ ನಂತೆ ಮಡಚಿ.
- ನಂತರ 30 ನಿಮಿಷ ಸೆಕೆ / ಆವಿಯಲ್ಲಿ ಬೇಯಿಸಿ. ಬಿಸಿಯಾಗಿರುವಾಗಲೇ ತುಪ್ಪ, ಜೇನುತುಪ್ಪ, ಕಾಯಿಹಾಲು ಅಥವಾ ಚಟ್ನಿಯೊಂದಿಗೆ ಬಡಿಸಿ.
ಹಲಸಿನ ಹಣ್ಣಿನ ಕಡುಬು ಮಾಡುವ ವಿಧಾನ:
- ಅಕ್ಕಿಯನ್ನು ತೊಳೆದು 30 ನಿಮಿಷಗಳ ಕಾಲ ನೆನೆಸಿ.
- ಮಿಕ್ಸಿಯಲ್ಲಿ ನೆನೆಸಿದ ಅಕ್ಕಿ, ಹಲಸಿನ ಹಣ್ಣು ಮತ್ತು ಉಪ್ಪು ಹಾಕಿ ತರಿ ತರಿಯಾಗಿ ಅರೆಯಿರಿ. ಈ ವಿಧಾನದಲ್ಲಿ ಅಗತ್ಯವಿದ್ದಷ್ಟು ನೀರು ಸೇರಿಸಬಹುದು.
- ಹಿಟ್ಟು ಇಡ್ಲಿ ಹಿಟ್ಟಿನಷ್ಟು ಗಟ್ಟಿಯಾಗಿರಬೇಕು.
- ಈಗ ಅಂಚಿರುವ ಬಟ್ಟಲಿನಲ್ಲಿ ಅಥವಾ ತಟ್ಟೆಯಲ್ಲಿ ಹಿಟ್ಟನ್ನು ಹಾಕಿ.
- 30 ನಿಮಿಷ ಸೆಕೆ / ಆವಿಯಲ್ಲಿ ಬೇಯಿಸಿ. ಬೇಕಾದ ಆಕಾರಕ್ಕೆ ಕತ್ತರಿಸಿ. ಬಿಸಿಯಾಗಿರುವಾಗಲೇ ತುಪ್ಪ ಮತ್ತು ತೆಂಗಿನಕಾಯಿ+ಕೊತ್ತಂಬರಿ ಬೀಜ ದ ಚಟ್ನಿಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ