ಕಲ್ಲಂಗಡಿ ಹಣ್ಣಿನ ಜೂಸ್ ಬಹಳಷ್ಟು ಪೋಷಕಾಂಶಗಳನ್ನು ಹೊಂದಿದ್ದು ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸುವ ಪಾನೀಯವಾಗಿದೆ. ಬಿಸಿ ಬೇಸಿಗೆಯ ದಿನಗಳಲ್ಲಿ ಕಲ್ಲಂಗಡಿ ಜೂಸ್ ನಮ್ಮ ದಾಹ ತಣಿಸುತ್ತದೆ. ಈ ಕಲ್ಲಂಗಡಿ ಜೂಸ್ ನಲ್ಲಿ ಉಪಯೋಗಿಸಲಾದ ಉಪ್ಪು ಮತ್ತು ಕರಿ ಮೆಣಸು ಜೂಸ್ ನ ರುಚಿಯನ್ನು ಹೆಚ್ಚಿಸುತ್ತದೆ. ಈ ರೀತಿಯಲ್ಲದೇ ನೀವು ಶುಂಠಿ ಅಥವಾ ಪುದೀನ ಎಲೆಗಳು ಅಥವಾ ದಾಳಿಂಬೆಯನ್ನು ಜೊತೆಯಲ್ಲಿ ಸೇರಿಸಿ ಸಹ ಕಲ್ಲಂಗಡಿ ಹಣ್ಣಿನ ಜೂಸ್ ತಯಾರಿಸಬಹುದು. ಆದರೆ ಈ ಜೂಸ್ ಅತ್ಯಂತ ಸರಳವಾಗಿದ್ದು ಹೆಚ್ಚು ರುಚಿಕರವಾಗಿರುತ್ತದೆ.
ಕಲ್ಲಂಗಡಿ ಹಣ್ಣಿನಲ್ಲಿ ಅನೇಕ ಆರೋಗ್ಯಕರ ಅಂಶಗಳಿದ್ದು, ಇದು ಮೂತ್ರಪಿಂಡ ಅಸ್ವಸ್ಥತೆ ತಡೆಗಟ್ಟುವಿಕೆ, ಅಧಿಕ ರಕ್ತದೊತ್ತಡ, ಕ್ಯಾನ್ಸರ್, ಮಧುಮೇಹ, ಹೃದಯ ರೋಗ, ಉಷ್ಣ ಸಂಬಂಧಿ ಖಾಯಿಲೆಗಳು ಮತ್ತು ಇಳಿ ವಯಸ್ಸಿನಲ್ಲಿ ಬರುವ ಕಣ್ಣಿನ ಸಮಸ್ಯೆಗಳನ್ನು ತಡೆಗಟ್ಟಲು ಸಹಕಾರಿಯಾಗಿದೆ. ಕಲ್ಲಂಗಡಿ ಹಣ್ಣಿನ ನಿಯಮಿತ ಸೇವನೆ ದೇಹದ ತೂಕವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ.
ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 0 ನಿಮಿಷ
ಪ್ರಮಾಣ: 1 ಕಪ್
ಅಡುಗೆ ಸಮಯ : 0 ನಿಮಿಷ
ಪ್ರಮಾಣ: 1 ಕಪ್
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )
- 1 ಕಪ್ ಕಲ್ಲಂಗಡಿ ಹಣ್ಣಿನ ತುಂಡುಗಳು
- 1 - 2 ಟೀಸ್ಪೂನ್ ಸಕ್ಕರೆ (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
- 1 ಚಿಟಿಕೆ ಕಾಳು ಮೆಣಸಿನ ಪುಡಿ / 1 ಕಾಳು ಮೆಣಸು
- 1 ಚಿಟಿಕೆ ಉಪ್ಪು
ಕಲ್ಲಂಗಡಿ ಹಣ್ಣಿನ ಜೂಸ್ ಮಾಡುವ ವಿಧಾನ:
- ಕಲ್ಲಂಗಡಿ ಹಣ್ಣನ್ನು ತೊಳೆದು ಕತ್ತರಿಸಿ. ಕೆಂಪು ಭಾಗವನ್ನು ತೆಗೆದು ಕೊಂಡು ಸಣ್ಣ ತುಂಡುಗಳಾಗಿ ಮಾಡಿ, ಬೀಜವನ್ನು ತೆಗೆಯಿರಿ.
- ಈಗ ಬೀಜ ತೆಗೆದ ಕಲ್ಲಂಗಡಿ ಹಣ್ಣಿನ ತುಂಡುಗಳನ್ನು ಮಿಕ್ಸಿ ಜಾರಿಗೆ ಹಾಕಿ. ಸಕ್ಕರೆ, ಕಾಳು ಮೆಣಸಿನ ಪುಡಿ ಮತ್ತು ಉಪ್ಪು ಹಾಕಿ.
- ನಯವಾದ ಜೂಸ್ ಆಗುವಂತೆ ಅರೆಯಿರಿ. ನಿಮಗೆ ಇಷ್ಟವಿದ್ದಲ್ಲಿ ಸೋಸ ಬಹುದು, ನಾನು ಸೋಸುವುದಿಲ್ಲ. ತಣ್ಣಗಿನ ಜೂಸ್ ಬೇಕಾದಲ್ಲಿ ಐಸ್ ಕ್ಯೂಬ್ಸ್ ಹಾಕಿ ಕುಡಿಯಲು ಕೊಡಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ