ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 4 ಮಧ್ಯಮ ಗಾತ್ರದ ಟೊಮೇಟೊ
- 8 ಟೀಸ್ಪೂನ್ ಸಕ್ಕರೆ (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
- 1/2 ಕಪ್ ತೆಂಗಿನ ತುರಿ
- 1.5 ಕಪ್ ನೀರು
ಟೊಮೇಟೊ ಜೂಸ್ ಮಾಡುವ ವಿಧಾನ:
- ಟೊಮೇಟೊ ತೊಳೆದು ಕತ್ತರಿಸಿ.
- ನಂತರ ಟೊಮೇಟೊ, ಸಕ್ಕರೆ ಮತ್ತು ತೆಂಗಿನ ತುರಿಯನ್ನು ಮಿಕ್ಸಿ ಜಾರಿಗೆ ಹಾಕಿ.
- ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ಅರೆಯಿರಿ.
- ನಿಮಗೆ ಇಷ್ಟವಿದ್ದಲ್ಲಿ ಸೋಸಬಹುದು.
- ಉಳಿದ ನೀರು ಸೇರಿಸಿ. ಸ್ವಲ್ಪ ಹೊತ್ತು ಫ್ರಿಡ್ಜ್ ನಲ್ಲಿಟ್ಟು ಸವಿಯಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ