Biriyani masala powder recipe in Kannada | ಬಿರಿಯಾನಿ ಮಸಾಲಾ ಪೌಡರ್ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:
- 10 ಟೀಸ್ಪೂನ್ ಕೊತ್ತಂಬರಿ ಬೀಜ
- 4 ಟೀಸ್ಪೂನ್ ಕಪ್ಪು ಜೀರಿಗೆ
- 2 ಟೀಸ್ಪೂನ್ ಲವಂಗ
- 2 ಬೆರಳು ಉದ್ದ ಚಕ್ಕೆ
- 1 ದಾಲ್ಚಿನ್ನಿ ಎಲೆ
- 2 ಟೀಸ್ಪೂನ್ ಸೋಂಪು
- 1 ಟೀಸ್ಪೂನ್ ಕಾಳು ಮೆಣಸು
- 2 ದೊಡ್ಡ ಕಪ್ಪು ಏಲಕ್ಕಿ
- 5 ಹಸಿರು ಏಲಕ್ಕಿ
- 1 ಜಾಪತ್ರೆ ಹೂವು
- 2 ಚಕ್ರ ಮೊಗ್ಗು
- 1/2 ಟೀಸ್ಪೂನ್ ತುರಿದ ಜಾಯಿಕಾಯಿ
ಬಿರಿಯಾನಿ ಮಸಾಲಾ ಪೌಡರ್ ಮಾಡುವ ವಿಧಾನ:
- ಅಳತೆ ಪ್ರಕಾರ ಎಲ್ಲ ಮಸಾಲಾ ಪದಾರ್ಥಗಳನ್ನು ತೆಗೆದುಕೊಳ್ಳಿ.
- ನಂತರ ಮಸಾಲಾ ಪದಾರ್ಥಗಳನ್ನು ಬಿಸಿಲಿನಲ್ಲಿ ಒಣಗಿಸಿ ಅಥವಾ ಬಾಣಲೆಯಲ್ಲಿ ಸ್ವಲ್ಪ ಬಿಸಿಯಾಗುವವರೆಗೆ ಹುರಿಯಿರಿ.
- ಮಸಾಲಾ ಪದಾರ್ಥಗಳು ತಣ್ಣಗಾದಮೇಲೆ ಮಿಕ್ಸಿ ಜಾರಿಗೆ ಹಾಕಿ ನುಣ್ಣನೆ ಪುಡಿ ಮಾಡಿ.
- ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. ರುಚಿಕರ ಬಿರಿಯಾನಿ ಮಾಡಲು ಉಪಯೋಗಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ