Agase - Bellulli chutney pudi recipe in Kannada | ಅಗಸೆ ಬೀಜ ಮತ್ತು ಬೆಳ್ಳುಳ್ಳಿಯ ಚಟ್ನಿ ಪುಡಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 10 - 20 ಒಣ ಮೆಣಸಿನಕಾಯಿ (ಮಧ್ಯಮ ಖಾರ)
- 1 ಕಪ್ ಅಗಸೆ ಬೀಜ
- 1/2 ಕಪ್ ಒಣ ಕೊಬ್ಬರಿ ತುರಿದಿದ್ದು
- 1/4 ಕಪ್ ಕರಿಬೇವಿನ ಎಲೆ
- 1 ಗಡ್ಡೆ ಬೆಳ್ಳುಳ್ಳಿ
- ಸಣ್ಣ ಲಿಂಬೆ ಹಣ್ಣಿನ ಗಾತ್ರದ ಹುಣಿಸೇಹಣ್ಣು (ನಾನು ವಾಟೆಹುಳಿ ಪುಡಿ ಉಪಯೋಗಿಸಿದ್ದೇನೆ)
- 2 ಟೀಸ್ಪೂನ್ ಅಡುಗೆ ಎಣ್ಣೆ
ಅಗಸೆ ಬೀಜ ಮತ್ತು ಬೆಳ್ಳುಳ್ಳಿಯ ಚಟ್ನಿ ಪುಡಿ ಮಾಡುವ ವಿಧಾನ:
- ಒಂದು ಬಾಣಲೆಯನ್ನು ಬಿಸಿ ಮಾಡಿ. ಅಗಸೆ ಬೀಜವನ್ನು ಹೊಟ್ಟುವವರೆಗೆ ಅಥವಾ ಸಿಡಿಯುವವರೆಗೆ ಹುರಿದು ತೆಗೆದಿಡಿ.
- ನಂತರ 2 ಚಮಚ ಅಡುಗೆ ಎಣ್ಣೆ ಹಾಕಿ ಒಣ ಮೆಣಸಿನಕಾಯಿಗಳನ್ನು ಹುರಿದು ತೆಗೆದಿಡಿ.
- ನಂತರ ಸಿಪ್ಪೆ ತೆಗೆದು ಕತ್ತರಿಸಿದ ಬೆಳ್ಳುಳ್ಳಿಯನ್ನು ಹಾಕಿ ಒಂದೆರಡು ನಿಮಿಷ ಹುರಿಯಿರಿ. ಸಿಪ್ಪೆ ತೆಗೆಯದೆ, ಜಜ್ಜಿಯೂ ಹಾಕಬಹುದು.
- ಅದಕ್ಕೆ ಒಣ ಕೊಬ್ಬರಿ ಮತ್ತು ಕರಿಬೇವು ಸೇರಿಸಿ ಹುರಿಯಿರಿ.
- ಕೊನೆಯಲ್ಲಿ ಉಪ್ಪು ಮತ್ತು ಹುಣಿಸೆಹಣ್ಣಿನ ಚೂರುಗಳನ್ನು ಹಾಕಿ ಕೆಲವು ಸೆಕೆಂಡ್ಗಳ ಕಾಲ ಹುರಿಯಿರಿ.
- ಹುರಿದ ಎಲ್ಲ ಪದಾರ್ಥಗಳು ತಣ್ಣಗೆ ಆದ ಮೇಲೆ ಮಿಕ್ಸಿ ಜಾರಿಗೆ ಹಾಕಿ ನುಣ್ಣನೆ ಪುಡಿ ಮಾಡಿ. ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ