Karabooja milkshake recipe in Kannada | ಕರಬೂಜ ಮಿಲ್ಕ್‌ಶೇಕ್ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1 ಮಧ್ಯಮ ಗಾತ್ರದ ಕರಬೂಜ
- 1/4 ಕಪ್ ತೆಂಗಿನ ತುರಿ
- 1 ಕಪ್ ನೀರು
- 1 ಕಪ್ ಕುದಿಸಿ ಆರಿಸಿದ ಹಾಲು
- 8 ಟೀಸ್ಪೂನ್ ಸಕ್ಕರೆ (ಅಥವಾ ರುಚಿಗೆ ತಕ್ಕಷ್ಟು)
ಕರಬೂಜ ಮಿಲ್ಕ್‌ಶೇಕ್ ಮಾಡುವ ವಿಧಾನ:
- ಕರಬೂಜವನ್ನು ನ್ನು ತೊಳೆದು, ಸಿಪ್ಪೆ ತೆಗೆದು ಕತ್ತರಿಸಿ.
- ಒಂದು ಮಿಕ್ಸೀ ಜಾರ್ ತೆಗೆದುಕೊಂಡು, ಕತ್ತರಿಸಿದ ಕರಬೂಜ, ಸಕ್ಕರೆ ಮತ್ತು ತೆಂಗಿನ ತುರಿ ಹಾಕಿ.
- ಅಗತ್ಯವಿದ್ದಷ್ಟು ನೀರು ಬಳಸಿಕೊಂಡು ನಯವಾಗಿ ಅರೆಯಿರಿ.
- ಅರೆದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ, ಹಾಲು ಸೇರಿಸಿ ಚೆನ್ನಾಗಿ ಕಲಕಿ. ಐಸ್ ಕ್ಯೂಬ್ ಗಳೊಂದಿಗೆ ಸವಿಯಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ