ಶುಕ್ರವಾರ, ಏಪ್ರಿಲ್ 21, 2017

Rave uppittu or upma recipe without onion | ಈರುಳ್ಳಿ ರಹಿತ ರವೇ ಉಪ್ಪಿಟ್ಟು ಮಾಡುವ ವಿಧಾನ

Rave uppittu or upma recipe without onion

Rave uppittu or upma recipe without onion | ಈರುಳ್ಳಿ ರಹಿತ ರವೇ ಉಪ್ಪಿಟ್ಟು ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 2 ಕಪ್ ರವೆ
  2. 4 ಕಪ್ ನೀರು
  3. 1/2 ಟೀಸ್ಪೂನ್ ಸಾಸಿವೆ
  4. 1 ಟೀಸ್ಪೂನ್ ಉದ್ದಿನಬೇಳೆ
  5. 1 ಟೀಸ್ಪೂನ್ ಕಡ್ಲೆಬೇಳೆ (ಬೇಕಾದಲ್ಲಿ)
  6. 1/4 ಟೀಸ್ಪೂನ್ ಇಂಗು
  7. 1-2 ಹಸಿರು ಮೆಣಸಿನಕಾಯಿ
  8. 5-6 ಕರಿ ಬೇವಿನ ಎಲೆ
  9. 1 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಶುಂಠಿ
  10. 1/4 ಟೀಸ್ಪೂನ್ ಅರಶಿನ ಪುಡಿ
  11. 3 ಟೇಬಲ್ ಸ್ಪೂನ್ ಅಡುಗೆ ಎಣ್ಣೆ
  12. 1 - 2 ಟೀಸ್ಪೂನ್ ಸಕ್ಕರೆ (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  13. 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  14. 2 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
  15. 1/4 ಕಪ್ ತೆಂಗಿನತುರಿ

ಈರುಳ್ಳಿ ರಹಿತ ರವೇ ಉಪ್ಪಿಟ್ಟು ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಉಪ್ಪು, ಸಕ್ಕರೆ ಮತ್ತು ನೀರನ್ನು ಹಾಕಿ ಕುದಿಯಲು ಇಡಿ. ನೀರು ಕುದಿಯುವುದರೊಳಗೆ ಉಪ್ಪಿಟ್ಟಿಗೆ ಒಗ್ಗರಣೆ ಸಿದ್ಧಪಡಿಸಿಕೊಳ್ಳೋಣ. ಏಕೆಂದರೆ ಕುದಿಯುವ ನೀರು ಕೊನೆಯಲ್ಲಿ ಬೇಕಾಗುತ್ತದೆ.
  2. ಅದಕ್ಕಾಗಿ ಒಂದು ಬಾಣಲೆ ಬಿಸಿಮಾಡಿ, ಎಣ್ಣೆ, ಸಾಸಿವೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆ ಹಾಕಿ. ಸಾಸಿವೆ ಸಿಡಿದ ಕೂಡಲೇ ಕರಿಬೇವು, ಕತ್ತರಿಸಿದ ಶುಂಠಿ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ ಕೈಯಾಡಿಸಿ. 
  3. ನಂತರ ಅರಿಶಿನ ಪುಡಿ ಮತ್ತು ಇಂಗು ಸೇರಿಸಿ. 
  4. 2 ಕಪ್ ರವೆ ಸೇರಿಸಿ ಮಧ್ಯಮ ಉರಿಯಲ್ಲಿ ಒಂದೈದು ನಿಮಿಷಗಳ ಕಾಲ ಹುರಿಯಿರಿ.
  5. ಇಷ್ಟರೊಳಗೆ ನೀರು ಕುದಿಯಲಾರಂಭಿಸಿರುತ್ತದೆ. ಆ ಕುದಿಯುವ ನೀರನ್ನು ಜಾಗ್ರತೆಯಿಂದ ರವೆ ಇರುವ ಬಾಣಲೆಗೆ ಸ್ವಲ್ಪ ಸ್ವಲ್ಪವಾಗಿ ಸುರಿಯಿರಿ. ನೀರು ಇಂಗುವವರೆಗೆ ಮಗುಚಿ. ನೀರು ಇಂಗಲು ಎರಡು ನಿಮಿಷ ಸಾಕಾಗುತ್ತದೆ.
  6. ತೆಂಗಿನತುರಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಮಗುಚಿ. ಸ್ಟೋವ್ ಆಫ್ ಮಾಡಿ. ಬಿಸಿಯಾಗಿರುವಾಗಲೇ ಮಸಾಲೆ ಅವಲಕ್ಕಿ ಅಥವಾ ಮೊಸರಿನೊಂದಿಗೆ ಬಡಿಸಿ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Related Posts Plugin for WordPress, Blogger...