Akki rotti using leftover rice recipe in Kannada | ಅನ್ನ ಬಳಸಿ ಮಾಡಿದ ಅಕ್ಕಿ ರೊಟ್ಟಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 2 ಕಪ್ ಮೆತ್ತಗೆ ಬೇಯಿಸಿದ ಅನ್ನ
- ಸುಮಾರು 1 ಕಪ್ ನಷ್ಟು ಅಕ್ಕಿ ಹಿಟ್ಟು
- 2 ಟೀಸ್ಪೂನ್ ಅಡುಗೆ ಎಣ್ಣೆ
- ಉಪ್ಪು ರುಚಿಗೆ ತಕ್ಕಷ್ಟು
ಅನ್ನ ಬಳಸಿ ಮಾಡಿದ ಅಕ್ಕಿ ರೊಟ್ಟಿ ಮಾಡುವ ವಿಧಾನ:
- ಒಂದು ಬಟ್ಟಲಿನಲ್ಲಿ ಅನ್ನವನ್ನು ತೆಗೆದುಕೊಂಡು ಚೆನ್ನಾಗಿ ಕಿವುಚಿ. ಅನ್ನ ಗಟ್ಟಿ ಇದ್ದರೆ ಮಿಕ್ಸಿಯಲ್ಲಿ ಅರೆಯಿರಿ.
- ನಂತರ ಅದಕ್ಕೆ ಸ್ವಲ್ಪ ಸ್ವಲ್ಪವಾಗಿ ಅಕ್ಕಿ ಹಿಟ್ಟನ್ನು ಸೇರಿಸಿ ಕಲಸಿ.
- ಚೆನ್ನಾಗಿ ನಾದಿ ಮೃದುವಾದ ಹಿಟ್ಟನ್ನು ತಯಾರಿಸಿ.
- ಕೊನೆಯಲ್ಲಿ ಎರಡು ಚಮಚ ಎಣ್ಣೆ ಹಾಕಿ ಹಿಟ್ಟನ್ನು ಚೆನ್ನಾಗಿ ನಾದಿ.
- ನಿಂಬೆ ಗಾತ್ರದ ಉಂಡೆ ಮಾಡಿಕೊಂಡು, ಅಗತ್ಯವಿದ್ದಷ್ಟು ಹಿಟ್ಟು ಹಾಕಿ ತೆಳ್ಳಗೆ ಲಟ್ಟಿಸಿ. ಕೈಯಲ್ಲಿ ತಟ್ಟಿಯೂ ಮಾಡಬಹುದು.
- ಒಂದು ಹೆಂಚು ಅಥವಾ ತವಾ ತೆಗೆದುಕೊಂಡು ಬಿಸಿ ಮಾಡಿ. ಲಟ್ಟಿಸಿದ ರೊಟ್ಟಿಯನ್ನು ತವಾ ಮೇಲೆ ಹಾಕಿ.
- ರೊಟ್ಟಿಯ ಎರಡು ಬದಿಯನ್ನು ಸುಮಾರು ಹತ್ತು ಸೆಕೆಂಡ್ಗಳ ಕಾಲ ಕಾಯಿಸಿ.
- ನಂತರ ರೊಟ್ಟಿಯನ್ನು ನೇರವಾಗಿ ಸ್ಟವ್ ಮೇಲೆ ಹಾಕಿ. ಎರಡು ಬದಿ ಅಲ್ಲಲ್ಲಿ ಕೆಂಪಾಗುವವರೆಗೆ ಕಾಯಿಸಿ.
- ಬಿಸಿ ಬಿಸಿಯಾಗಿರುವಾಗಲೇ ನಿಮ್ಮಿಷ್ಟದ ಗೊಜ್ಜು ಅಥವಾ ಪಲ್ಯದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ