ಶುಕ್ರವಾರ, ಏಪ್ರಿಲ್ 28, 2017

Biriyani masala powder recipe in Kannada | ಬಿರಿಯಾನಿ ಮಸಾಲಾ ಪೌಡರ್ ಮಾಡುವ ವಿಧಾನ

Biriyani masala powder recipe in Kannada

Biriyani masala powder recipe in Kannada | ಬಿರಿಯಾನಿ ಮಸಾಲಾ ಪೌಡರ್ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:

  1. 10 ಟೀಸ್ಪೂನ್ ಕೊತ್ತಂಬರಿ ಬೀಜ
  2. 4 ಟೀಸ್ಪೂನ್ ಕಪ್ಪು ಜೀರಿಗೆ
  3. 2 ಟೀಸ್ಪೂನ್ ಲವಂಗ
  4. 2 ಬೆರಳು ಉದ್ದ ಚಕ್ಕೆ
  5. 1 ದಾಲ್ಚಿನ್ನಿ ಎಲೆ
  6. 2 ಟೀಸ್ಪೂನ್ ಸೋಂಪು
  7. 1 ಟೀಸ್ಪೂನ್ ಕಾಳು ಮೆಣಸು
  8. 2 ದೊಡ್ಡ ಕಪ್ಪು ಏಲಕ್ಕಿ
  9. 5 ಹಸಿರು ಏಲಕ್ಕಿ
  10. 1 ಜಾಪತ್ರೆ ಹೂವು
  11. 2 ಚಕ್ರ ಮೊಗ್ಗು
  12. 1/2 ಟೀಸ್ಪೂನ್ ತುರಿದ ಜಾಯಿಕಾಯಿ

 ಬಿರಿಯಾನಿ ಮಸಾಲಾ ಪೌಡರ್ ಮಾಡುವ ವಿಧಾನ:

  1. ಅಳತೆ ಪ್ರಕಾರ ಎಲ್ಲ ಮಸಾಲಾ ಪದಾರ್ಥಗಳನ್ನು ತೆಗೆದುಕೊಳ್ಳಿ. 
  2. ನಂತರ ಮಸಾಲಾ ಪದಾರ್ಥಗಳನ್ನು ಬಿಸಿಲಿನಲ್ಲಿ ಒಣಗಿಸಿ ಅಥವಾ ಬಾಣಲೆಯಲ್ಲಿ ಸ್ವಲ್ಪ ಬಿಸಿಯಾಗುವವರೆಗೆ ಹುರಿಯಿರಿ. 
  3. ಮಸಾಲಾ ಪದಾರ್ಥಗಳು ತಣ್ಣಗಾದಮೇಲೆ ಮಿಕ್ಸಿ ಜಾರಿಗೆ ಹಾಕಿ ನುಣ್ಣನೆ ಪುಡಿ ಮಾಡಿ. 
  4.  ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. ರುಚಿಕರ ಬಿರಿಯಾನಿ ಮಾಡಲು ಉಪಯೋಗಿಸಿ.

ಮಂಗಳವಾರ, ಏಪ್ರಿಲ್ 25, 2017

Akki rotti using leftover rice recipe in Kannada | ಅನ್ನ ಬಳಸಿ ಮಾಡಿದ ಅಕ್ಕಿ ರೊಟ್ಟಿ ಮಾಡುವ ವಿಧಾನ

Akki rotti using leftover rice recipe in Kannada

Akki rotti using leftover rice recipe in Kannada | ಅನ್ನ ಬಳಸಿ ಮಾಡಿದ ಅಕ್ಕಿ ರೊಟ್ಟಿ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಕಪ್ ಮೆತ್ತಗೆ ಬೇಯಿಸಿದ ಅನ್ನ 
  2. ಸುಮಾರು 1 ಕಪ್ ನಷ್ಟು ಅಕ್ಕಿ ಹಿಟ್ಟು 
  3. 2 ಟೀಸ್ಪೂನ್ ಅಡುಗೆ ಎಣ್ಣೆ 
  4. ಉಪ್ಪು ರುಚಿಗೆ ತಕ್ಕಷ್ಟು

ಅನ್ನ ಬಳಸಿ ಮಾಡಿದ ಅಕ್ಕಿ ರೊಟ್ಟಿ ಮಾಡುವ ವಿಧಾನ:

  1. ಒಂದು ಬಟ್ಟಲಿನಲ್ಲಿ ಅನ್ನವನ್ನು ತೆಗೆದುಕೊಂಡು ಚೆನ್ನಾಗಿ ಕಿವುಚಿ. ಅನ್ನ ಗಟ್ಟಿ ಇದ್ದರೆ ಮಿಕ್ಸಿಯಲ್ಲಿ ಅರೆಯಿರಿ. 
  2. ನಂತರ ಅದಕ್ಕೆ ಸ್ವಲ್ಪ ಸ್ವಲ್ಪವಾಗಿ ಅಕ್ಕಿ ಹಿಟ್ಟನ್ನು ಸೇರಿಸಿ ಕಲಸಿ. 
  3. ಚೆನ್ನಾಗಿ ನಾದಿ ಮೃದುವಾದ ಹಿಟ್ಟನ್ನು ತಯಾರಿಸಿ. 
  4. ಕೊನೆಯಲ್ಲಿ ಎರಡು ಚಮಚ ಎಣ್ಣೆ ಹಾಕಿ ಹಿಟ್ಟನ್ನು ಚೆನ್ನಾಗಿ ನಾದಿ. 
  5. ನಿಂಬೆ ಗಾತ್ರದ ಉಂಡೆ ಮಾಡಿಕೊಂಡು, ಅಗತ್ಯವಿದ್ದಷ್ಟು ಹಿಟ್ಟು ಹಾಕಿ ತೆಳ್ಳಗೆ ಲಟ್ಟಿಸಿ. ಕೈಯಲ್ಲಿ ತಟ್ಟಿಯೂ ಮಾಡಬಹುದು. 
  6. ಒಂದು ಹೆಂಚು ಅಥವಾ ತವಾ ತೆಗೆದುಕೊಂಡು ಬಿಸಿ ಮಾಡಿ. ಲಟ್ಟಿಸಿದ ರೊಟ್ಟಿಯನ್ನು ತವಾ ಮೇಲೆ ಹಾಕಿ. 
  7.  ರೊಟ್ಟಿಯ ಎರಡು ಬದಿಯನ್ನು ಸುಮಾರು ಹತ್ತು ಸೆಕೆಂಡ್ಗಳ ಕಾಲ ಕಾಯಿಸಿ. 
  8. ನಂತರ ರೊಟ್ಟಿಯನ್ನು ನೇರವಾಗಿ ಸ್ಟವ್ ಮೇಲೆ ಹಾಕಿ. ಎರಡು ಬದಿ ಅಲ್ಲಲ್ಲಿ ಕೆಂಪಾಗುವವರೆಗೆ ಕಾಯಿಸಿ. 
  9. ಬಿಸಿ ಬಿಸಿಯಾಗಿರುವಾಗಲೇ ನಿಮ್ಮಿಷ್ಟದ ಗೊಜ್ಜು ಅಥವಾ ಪಲ್ಯದೊಂದಿಗೆ ಬಡಿಸಿ.

ಶುಕ್ರವಾರ, ಏಪ್ರಿಲ್ 21, 2017

Rave uppittu or upma recipe without onion | ಈರುಳ್ಳಿ ರಹಿತ ರವೇ ಉಪ್ಪಿಟ್ಟು ಮಾಡುವ ವಿಧಾನ

Rave uppittu or upma recipe without onion

Rave uppittu or upma recipe without onion | ಈರುಳ್ಳಿ ರಹಿತ ರವೇ ಉಪ್ಪಿಟ್ಟು ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 2 ಕಪ್ ರವೆ
  2. 4 ಕಪ್ ನೀರು
  3. 1/2 ಟೀಸ್ಪೂನ್ ಸಾಸಿವೆ
  4. 1 ಟೀಸ್ಪೂನ್ ಉದ್ದಿನಬೇಳೆ
  5. 1 ಟೀಸ್ಪೂನ್ ಕಡ್ಲೆಬೇಳೆ (ಬೇಕಾದಲ್ಲಿ)
  6. 1/4 ಟೀಸ್ಪೂನ್ ಇಂಗು
  7. 1-2 ಹಸಿರು ಮೆಣಸಿನಕಾಯಿ
  8. 5-6 ಕರಿ ಬೇವಿನ ಎಲೆ
  9. 1 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಶುಂಠಿ
  10. 1/4 ಟೀಸ್ಪೂನ್ ಅರಶಿನ ಪುಡಿ
  11. 3 ಟೇಬಲ್ ಸ್ಪೂನ್ ಅಡುಗೆ ಎಣ್ಣೆ
  12. 1 - 2 ಟೀಸ್ಪೂನ್ ಸಕ್ಕರೆ (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  13. 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  14. 2 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
  15. 1/4 ಕಪ್ ತೆಂಗಿನತುರಿ

ಈರುಳ್ಳಿ ರಹಿತ ರವೇ ಉಪ್ಪಿಟ್ಟು ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಉಪ್ಪು, ಸಕ್ಕರೆ ಮತ್ತು ನೀರನ್ನು ಹಾಕಿ ಕುದಿಯಲು ಇಡಿ. ನೀರು ಕುದಿಯುವುದರೊಳಗೆ ಉಪ್ಪಿಟ್ಟಿಗೆ ಒಗ್ಗರಣೆ ಸಿದ್ಧಪಡಿಸಿಕೊಳ್ಳೋಣ. ಏಕೆಂದರೆ ಕುದಿಯುವ ನೀರು ಕೊನೆಯಲ್ಲಿ ಬೇಕಾಗುತ್ತದೆ.
  2. ಅದಕ್ಕಾಗಿ ಒಂದು ಬಾಣಲೆ ಬಿಸಿಮಾಡಿ, ಎಣ್ಣೆ, ಸಾಸಿವೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆ ಹಾಕಿ. ಸಾಸಿವೆ ಸಿಡಿದ ಕೂಡಲೇ ಕರಿಬೇವು, ಕತ್ತರಿಸಿದ ಶುಂಠಿ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ ಕೈಯಾಡಿಸಿ. 
  3. ನಂತರ ಅರಿಶಿನ ಪುಡಿ ಮತ್ತು ಇಂಗು ಸೇರಿಸಿ. 
  4. 2 ಕಪ್ ರವೆ ಸೇರಿಸಿ ಮಧ್ಯಮ ಉರಿಯಲ್ಲಿ ಒಂದೈದು ನಿಮಿಷಗಳ ಕಾಲ ಹುರಿಯಿರಿ.
  5. ಇಷ್ಟರೊಳಗೆ ನೀರು ಕುದಿಯಲಾರಂಭಿಸಿರುತ್ತದೆ. ಆ ಕುದಿಯುವ ನೀರನ್ನು ಜಾಗ್ರತೆಯಿಂದ ರವೆ ಇರುವ ಬಾಣಲೆಗೆ ಸ್ವಲ್ಪ ಸ್ವಲ್ಪವಾಗಿ ಸುರಿಯಿರಿ. ನೀರು ಇಂಗುವವರೆಗೆ ಮಗುಚಿ. ನೀರು ಇಂಗಲು ಎರಡು ನಿಮಿಷ ಸಾಕಾಗುತ್ತದೆ.
  6. ತೆಂಗಿನತುರಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಮಗುಚಿ. ಸ್ಟೋವ್ ಆಫ್ ಮಾಡಿ. ಬಿಸಿಯಾಗಿರುವಾಗಲೇ ಮಸಾಲೆ ಅವಲಕ್ಕಿ ಅಥವಾ ಮೊಸರಿನೊಂದಿಗೆ ಬಡಿಸಿ.


ಬುಧವಾರ, ಏಪ್ರಿಲ್ 19, 2017

Tamarind rice or huliyanna recipe in Kannada | ಹುಳಿಯನ್ನ ಮಾಡುವ ವಿಧಾನ

Tamarind rice or huliyanna recipe in Kannada

Tamarind rice or huliyanna recipe in Kannada | ಹುಳಿಯನ್ನ ಮಾಡುವ ವಿಧಾನ

ಹುಳಿಯನ್ನ ವಿಡಿಯೋ

 ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 1 ಕಪ್ ಸೋನಾ ಮಸೂರಿ ಅಕ್ಕಿ
  2. 1 ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು 
  3. 1 ನೆಲ್ಲಿಕಾಯಿ ಗಾತ್ರದ ಬೆಲ್ಲ 
  4. ರುಚಿಗೆ ತಕ್ಕಷ್ಟು ಉಪ್ಪು
  5. 1/2 - 1 ಟೀಸ್ಪೂನ್ ಅಚ್ಚ ಖಾರದ ಪುಡಿ
  6. 1 ಟೀಸ್ಪೂನ್ ಧನಿಯಾ ಪುಡಿ
  7. 1/2 ಟೀಸ್ಪೂನ್ ಜೀರಿಗೆ ಪುಡಿ
  8. 1/4 ಕಪ್ ಕೊಬ್ಬರಿ ತುರಿ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಚಮಚ ಸಾಸಿವೆ
  2. 1 ಕೆಂಪು ಮೆಣಸಿನಕಾಯಿ
  3. 1 ಟೀಸ್ಪೂನ್ ಉದ್ದಿನ ಬೇಳೆ
  4. 1 ಟೀಸ್ಪೂನ್ ಕಡಲೆಬೇಳೆ 
  5. 2 ಟೇಬಲ್ ಸ್ಪೂನ್ ಕಡ್ಲೆಕಾಯಿ ಬೀಜ ಅಥವಾ ಶೇಂಗಾ
  6. 8 - 10 ಗೋಡಂಬಿ
  7. 5 - 6 ಕರಿಬೇವಿನ ಎಲೆ
  8. 1/4 ಟೀಸ್ಪೂನ್ ಅರಿಶಿನ ಪುಡಿ
  9. 1 ಟೀಸ್ಪೂನ್ ಇಂಗು
  10. 4 ಟೇಬಲ್ ಸ್ಪೂನ್ ಅಡುಗೆ ಎಣ್ಣೆ

ಹುಳಿಯನ್ನ ಮಾಡುವ ವಿಧಾನ:

  1. ಮೊದಲಿಗೆ ಉದುರು ಉದುರಾದ ಅನ್ನ ಮಾಡಿಟ್ಟು ಕೊಳ್ಳಿ ಮತ್ತು ಹುಣಿಸೆಹಣ್ಣನ್ನು 1/2 ಕಪ್ ನೀರಿನಲ್ಲಿ ನೆನೆಸಿಡಿ. 
  2. ಒಂದು ಬಾಣಲೆಯಲ್ಲಿ ಒಗ್ಗರಣೆಗೆ ಪಟ್ಟಿ ಮಾಡಿದ ಎಲ್ಲ ಪದಾರ್ಥಗಳನ್ನು ಹಾಕಿ ಒಗ್ಗರಣೆ ತಯಾರಿಸಿ. 
  3. ನಂತರ ಹುಣಿಸೆರಸ, ಉಪ್ಪು ಮತ್ತು ಬೆಲ್ಲವನ್ನು ಹಾಕಿ ಕುದಿಸಿ. 
  4.  ಕುದಿದು ಸ್ವಲ್ಪ ಗಟ್ಟಿಯಾದ ಮೇಲೆ ಅಚ್ಚ ಖಾರದ ಪುಡಿ, ಧನಿಯಾ ಪುಡಿ ಮತ್ತು ಜೀರಿಗೆ ಪುಡಿ ಹಾಕಿ. ಕೊಬ್ಬರಿ ತುರಿಯನ್ನು ಹಾಕಿ. 
  5. ಸ್ವಲ್ಪ ಗಟ್ಟಿಯಾಗುವವರೆಗೆ ಕುದಿಸಿ ಸ್ಟವ್ ಆಫ್ ಮಾಡಿ. ಹುಳಿಯನ್ನದ ಗೊಜ್ಜು ತಯಾರಾಯಿತು. 
  6. ನಂತರ ಬೇಯಿಸಿಟ್ಟ ಅನ್ನ ಹಾಕಿ, ಚೆನ್ನಾಗಿ ಕಲಸಿ ಬಡಿಸಿ. 

ಮಂಗಳವಾರ, ಏಪ್ರಿಲ್ 18, 2017

Agase - Bellulli chutney pudi recipe in Kannada | ಅಗಸೆ ಬೀಜ ಮತ್ತು ಬೆಳ್ಳುಳ್ಳಿಯ ಚಟ್ನಿ ಪುಡಿ ಮಾಡುವ ವಿಧಾನ

Agase - Bellulli chutney pudi recipe in Kannada

Agase - Bellulli chutney pudi recipe in Kannada | ಅಗಸೆ ಬೀಜ ಮತ್ತು ಬೆಳ್ಳುಳ್ಳಿಯ ಚಟ್ನಿ ಪುಡಿ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 10 - 20 ಒಣ ಮೆಣಸಿನಕಾಯಿ (ಮಧ್ಯಮ ಖಾರ)
  2. 1 ಕಪ್ ಅಗಸೆ ಬೀಜ
  3. 1/2 ಕಪ್ ಒಣ ಕೊಬ್ಬರಿ ತುರಿದಿದ್ದು
  4. 1/4 ಕಪ್ ಕರಿಬೇವಿನ ಎಲೆ
  5. 1 ಗಡ್ಡೆ ಬೆಳ್ಳುಳ್ಳಿ
  6. ಸಣ್ಣ ಲಿಂಬೆ ಹಣ್ಣಿನ ಗಾತ್ರದ ಹುಣಿಸೇಹಣ್ಣು (ನಾನು ವಾಟೆಹುಳಿ ಪುಡಿ ಉಪಯೋಗಿಸಿದ್ದೇನೆ)
  7. 2 ಟೀಸ್ಪೂನ್ ಅಡುಗೆ ಎಣ್ಣೆ


ಅಗಸೆ ಬೀಜ ಮತ್ತು ಬೆಳ್ಳುಳ್ಳಿಯ ಚಟ್ನಿ ಪುಡಿ ಮಾಡುವ ವಿಧಾನ:

  1. ಒಂದು ಬಾಣಲೆಯನ್ನು ಬಿಸಿ ಮಾಡಿ. ಅಗಸೆ ಬೀಜವನ್ನು ಹೊಟ್ಟುವವರೆಗೆ ಅಥವಾ ಸಿಡಿಯುವವರೆಗೆ ಹುರಿದು ತೆಗೆದಿಡಿ.
  2. ನಂತರ 2 ಚಮಚ ಅಡುಗೆ ಎಣ್ಣೆ ಹಾಕಿ ಒಣ ಮೆಣಸಿನಕಾಯಿಗಳನ್ನು ಹುರಿದು ತೆಗೆದಿಡಿ.
  3. ನಂತರ ಸಿಪ್ಪೆ ತೆಗೆದು ಕತ್ತರಿಸಿದ ಬೆಳ್ಳುಳ್ಳಿಯನ್ನು ಹಾಕಿ ಒಂದೆರಡು ನಿಮಿಷ ಹುರಿಯಿರಿ.  ಸಿಪ್ಪೆ ತೆಗೆಯದೆ, ಜಜ್ಜಿಯೂ ಹಾಕಬಹುದು. 
  4. ಅದಕ್ಕೆ ಒಣ ಕೊಬ್ಬರಿ ಮತ್ತು ಕರಿಬೇವು ಸೇರಿಸಿ ಹುರಿಯಿರಿ. 
  5. ಕೊನೆಯಲ್ಲಿ ಉಪ್ಪು ಮತ್ತು ಹುಣಿಸೆಹಣ್ಣಿನ ಚೂರುಗಳನ್ನು ಹಾಕಿ ಕೆಲವು ಸೆಕೆಂಡ್ಗಳ ಕಾಲ ಹುರಿಯಿರಿ. 
  6. ಹುರಿದ ಎಲ್ಲ ಪದಾರ್ಥಗಳು ತಣ್ಣಗೆ ಆದ ಮೇಲೆ ಮಿಕ್ಸಿ ಜಾರಿಗೆ ಹಾಕಿ ನುಣ್ಣನೆ ಪುಡಿ ಮಾಡಿ. ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. 


ಸೋಮವಾರ, ಏಪ್ರಿಲ್ 17, 2017

Siridhanya neer dose recipe in Kannada | ಸಿರಿಧಾನ್ಯ ನೀರ್ ದೋಸೆ ಮಾಡುವ ವಿಧಾನ

Siridhanya neer dose recipe in Kannada

Siridhanya neer dose recipe in Kannada | ಸಿರಿಧಾನ್ಯ ನೀರ್ ದೋಸೆ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಸಿರಿಧಾನ್ಯ
  2. 1/4 ಕಪ್ ತೆಂಗಿನ ತುರಿ
  3. 1/4 ಕಪ್ ತೆಳು ಅವಲಕ್ಕಿ
  4. ಉಪ್ಪು ರುಚಿಗೆ ತಕ್ಕಷ್ಟು

ಸಿರಿಧಾನ್ಯ ನೀರ್ ದೋಸೆ ಮಾಡುವ ವಿಧಾನ:

  1. ಸಿರಿಧಾನ್ಯವನ್ನು ನ್ನು ತೊಳೆದು 5-6 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ.
  2. ನಂತರ ನೀರನ್ನು ಬಗ್ಗಿಸಿ, ತೆಂಗಿನ ತುರಿ ಮತ್ತು ಅವಲಕ್ಕಿಯೊಂದಿಗೆ ಮಿಕ್ಸರ್ ಗ್ರೈಂಡರ್ ನಲ್ಲಿ ನಯವಾಗಿ ಅರೆಯಿರಿ. 
  3. ಅರೆದ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
  4. ದೋಸೆ ಹಿಟ್ಟು ತೆಳುವಾಗಲು ಸಾಕಷ್ಟು ನೀರು ಸೇರಿಸಿ. ಒಮ್ಮೆಲೇ ತುಂಬಾ ನೀರು ಸೇರಿಸಬೇಡಿ. ದೋಸೆ ಮಾಡಲು ಪ್ರಾರಂಭಿಸಿದ ನಂತರ ಸ್ವಲ್ಪ ಸ್ವಲ್ಪವಾಗಿ ನೀರು ಸೇರಿಸಿ ಹಿಟ್ಟನ್ನು ಸರಿ ಮಾಡಿಕೊಳ್ಳಿ. 
  5. ಕಬ್ಬಿಣದ ಕಾವಲಿ ಅಥವಾ ನಾನ್ ಸ್ಟಿಕ್ ಪ್ಯಾನ್ ತೆಗೆದುಕೊಂಡು ಒಲೆ ಮೇಲೆ ಇರಿಸಿ. ನೀರು ದೋಸೆ ಮಾಡಲು ಕಾವಲಿ ಚೆನ್ನಾಗಿ ಕಾದಿರ ಬೇಕು. ಸಣ್ಣ ಈರುಳ್ಳಿ ಅಥವಾ ಒಂದು ಕ್ಯಾರೆಟ್ ಬಳಸಿಕೊಂಡು ಕಾವಲಿಗೆ ಎಣ್ಣೆ ಹಚ್ಚಿ. ಪ್ರತಿ ದೋಸೆ ಮಾಡುವ ಮುನ್ನ, ಹಿಟ್ಟನ್ನು ಚೆನ್ನಾಗಿ ಸೌಟಿನಲ್ಲಿ ಬೆರೆಸಿಕೊಳ್ಳ ಬೇಕು. ಬಿಸಿ ಕಾವಲಿ ಮೇಲೆ ದೋಸೆ ಹಿಟ್ಟನ್ನು ಸೌಟಿನಿಂದ ಸುರಿಯಿರಿ. 
  6. ಸುಮಾರು 10 ಸೆಕೆಂಡುಗಳ ಕಾಲ ಮುಚ್ಚಳವನ್ನು ಮುಚ್ಚಿ. ನಂತರ ಮುಚ್ಚಳ ತೆರೆದು, ದೋಸೆ ಸಟ್ಟುಗ ಉಪಯೋಗಿಸಿ ದೋಸೆಯನ್ನು ತೆಗೆಯಿರಿ. ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಬಡಿಸಿ. 

ಗುರುವಾರ, ಏಪ್ರಿಲ್ 13, 2017

Tomato juice recipe in Kannada | ಟೊಮೇಟೊ ಜೂಸ್ ಮಾಡುವ ವಿಧಾನ

Tomato juice recipe in Kannada

Tomato juice recipe in Kannada | ಟೊಮೇಟೊ ಜೂಸ್ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 4 ಮಧ್ಯಮ ಗಾತ್ರದ ಟೊಮೇಟೊ
  2. 8 ಟೀಸ್ಪೂನ್ ಸಕ್ಕರೆ (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  3. 1/2 ಕಪ್ ತೆಂಗಿನ ತುರಿ
  4. 1.5 ಕಪ್ ನೀರು

ಟೊಮೇಟೊ ಜೂಸ್ ಮಾಡುವ ವಿಧಾನ:

  1. ಟೊಮೇಟೊ ತೊಳೆದು ಕತ್ತರಿಸಿ.
  2. ನಂತರ ಟೊಮೇಟೊ, ಸಕ್ಕರೆ ಮತ್ತು ತೆಂಗಿನ ತುರಿಯನ್ನು ಮಿಕ್ಸಿ ಜಾರಿಗೆ ಹಾಕಿ.
  3. ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ಅರೆಯಿರಿ. 
  4. ನಿಮಗೆ ಇಷ್ಟವಿದ್ದಲ್ಲಿ ಸೋಸಬಹುದು. 
  5. ಉಳಿದ ನೀರು ಸೇರಿಸಿ. ಸ್ವಲ್ಪ ಹೊತ್ತು ಫ್ರಿಡ್ಜ್ ನಲ್ಲಿಟ್ಟು ಸವಿಯಿರಿ.

Karabooja milkshake recipe in Kannada | ಕರಬೂಜ ಮಿಲ್ಕ್‌ಶೇಕ್ ಮಾಡುವ ವಿಧಾನ

Karabooja milkshake recipe in Kannada

Karabooja milkshake recipe in Kannada | ಕರಬೂಜ ಮಿಲ್ಕ್‌ಶೇಕ್ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಮಧ್ಯಮ ಗಾತ್ರದ ಕರಬೂಜ
  2. 1/4 ಕಪ್ ತೆಂಗಿನ ತುರಿ
  3. 1 ಕಪ್ ನೀರು
  4. 1 ಕಪ್ ಕುದಿಸಿ ಆರಿಸಿದ ಹಾಲು
  5. 8 ಟೀಸ್ಪೂನ್ ಸಕ್ಕರೆ (ಅಥವಾ ರುಚಿಗೆ ತಕ್ಕಷ್ಟು)

ಕರಬೂಜ ಮಿಲ್ಕ್‌ಶೇಕ್ ಮಾಡುವ ವಿಧಾನ:

  1. ಕರಬೂಜವನ್ನು ನ್ನು ತೊಳೆದು, ಸಿಪ್ಪೆ ತೆಗೆದು ಕತ್ತರಿಸಿ. 
  2. ಒಂದು ಮಿಕ್ಸೀ ಜಾರ್ ತೆಗೆದುಕೊಂಡು, ಕತ್ತರಿಸಿದ ಕರಬೂಜ, ಸಕ್ಕರೆ ಮತ್ತು ತೆಂಗಿನ ತುರಿ ಹಾಕಿ. 
  3. ಅಗತ್ಯವಿದ್ದಷ್ಟು ನೀರು ಬಳಸಿಕೊಂಡು ನಯವಾಗಿ ಅರೆಯಿರಿ.
  4. ಅರೆದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ, ಹಾಲು ಸೇರಿಸಿ ಚೆನ್ನಾಗಿ ಕಲಕಿ. ಐಸ್ ಕ್ಯೂಬ್ ಗಳೊಂದಿಗೆ ಸವಿಯಿರಿ.

ಬುಧವಾರ, ಏಪ್ರಿಲ್ 12, 2017

Boodu kumbalakai palya recipe in Kannada | ಬೂದು ಕುಂಬಳಕಾಯಿ ಪಲ್ಯ ಮಾಡುವ ವಿಧಾನ

Boodu kumbalakai palya recipe in Kannada

Boodu kumbalakai palya recipe in Kannada | ಬೂದು ಕುಂಬಳಕಾಯಿ ಪಲ್ಯ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕೆಜಿ ಬೂದುಕುಂಬಳಕಾಯಿ
  2. 1/2 ಟೀಸ್ಪೂನ್ ಸಾಸಿವೆ
  3. 1 ಟೀಸ್ಪೂನ್ ಉದ್ದಿನ ಬೇಳೆ
  4. 1 ಟೀಸ್ಪೂನ್ ಕಡ್ಲೆ ಬೇಳೆ
  5. 4 - 6 ಟೀಸ್ಪೂನ್ ಅಡುಗೆ ಎಣ್ಣೆ
  6. 1 ದೊಡ್ಡ ಚಿಟಿಕೆ ಅರಿಶಿನ ಪುಡಿ
  7. 1 ದೊಡ್ಡ ಚಿಟಿಕೆ ಇಂಗು
  8. 4 - 5 ಕರಿಬೇವಿನ ಎಲೆ
  9. ಸಣ್ಣ ನೆಲ್ಲಿಕಾಯಿ ಗಾತ್ರದ ಬೆಲ್ಲ (ಬೇಕಾದಲ್ಲಿ)
  10. ಉಪ್ಪು ರುಚಿಗೆ ತಕ್ಕಷ್ಟು
  11. 2 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  12. 1/4 ಕಪ್ ನೀರು

ಅರೆಯಲು ಬೇಕಾಗುವ ಪದಾರ್ಥಗಳು:

  1. 1/2 ಕಪ್ ತೆಂಗಿನ ತುರಿ
  2. 2 - 4 ಒಣ ಮೆಣಸಿನ ಕಾಯಿ
  3. 1/2 ಟೀಸ್ಪೂನ್ ಸಾಸಿವೆ

ಬೂದು ಕುಂಬಳಕಾಯಿ ಪಲ್ಯ ಮಾಡುವ ವಿಧಾನ:

  1. ಬೂದು ಕುಂಬಳಕಾಯಿಯನ್ನು ತೊಳೆದು, ಸಿಪ್ಪೆ ತೆಗೆದು,  ಕತ್ತರಿಸಿ.
  2. ಕುಕ್ಕರ್ ನಲ್ಲಿ ಕತ್ತರಿಸಿದ ಕುಂಬಳಕಾಯಿಯನ್ನು ಹಾಕಿ, 1/4 ಕಪ್ ನೀರು ಸೇರಿಸಿ, ಒಂದು ವಿಷಲ್ ಮಾಡಿ ಬೇಯಿಸಿಕೊಳ್ಳಿ. ನೇರವಾಗಿ ಒಗ್ಗರಣೆಯಲ್ಲೂ ಬೇಯಿಸಬಹುದು. 
  3. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆ ಹಾಕಿ. ಸಾಸಿವೆ ಸಿಡಿದ ಕೂಡಲೇ ಅರಶಿನ, ಇಂಗು, ಹಸಿರು ಮೆಣಸಿನಕಾಯಿ ಮತ್ತು ಕರಿಬೇವಿನ ಎಲೆ ಹಾಕಿ ಒಗ್ಗರಣೆ ತಯಾರಿಸಿಕೊಳ್ಳಿ. 
  4. ಅದಕ್ಕೆ ಬೇಯಿಸಿದ ಕುಂಬಳಕಾಯಿ ಹಾಕಿ. 
  5. ಉಪ್ಪು ಮತ್ತು ಬೆಲ್ಲ ಹಾಕಿ ಮಗುಚಿ. ದೊಡ್ಡ ಉರಿಯಲ್ಲಿ ನೀರಾರಿಸಿ.
  6. ಅದೇ ಸಮಯದಲ್ಲಿ ಒಂದು ಮಿಕ್ಸಿ ಜಾರ್ ನಲ್ಲಿ ತೆಂಗಿನ ತುರಿ, 1/4 ಚಮಚ ಸಾಸಿವೆ ಮತ್ತು ಒಣ ಮೆಣಸು ಹಾಕಿ, ನೀರು ಹಾಕದೆ ಪುಡಿ ಮಾಡಿ. 
  7. ಪುಡಿ ಮಾಡಿದ ಮಸಾಲೆ ಮತ್ತು ಕೊತ್ತಂಬರಿ ಸೊಪ್ಪನ್ನು ಬೇಯುತ್ತಿರುವ ಕುಂಬಳಕಾಯಿಗೆ ಹಾಕಿ. 
  8. 2 ನಿಮಿಷ ಮಗುಚಿ. ಕೊತ್ತಂಬರಿ ಸೊಪ್ಪು ಉದುರಿಸಿ. ಸ್ಟೋವ್ ಆಫ್ ಮಾಡಿ. ಚಪಾತಿ ಅಥವಾ ಬಿಸಿ ಅನ್ನದೊಂದಿಗೆ ಬಡಿಸಿ.

ಮಂಗಳವಾರ, ಏಪ್ರಿಲ್ 11, 2017

Basale pundi recipe in Kannada | ಬಸಳೆ ಪುಂಡಿ ಮಾಡುವ ವಿಧಾನ

2Basale pundi recipe in Kannada

Basale pundi recipe in Kannada | ಬಸಳೆ ಪುಂಡಿ ಮಾಡುವ ವಿಧಾನ

ಪುಂಡಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಸೋನಾ ಮಸೂರಿ ಅಕ್ಕಿ
  2. 1/4 ಕಪ್ ತೆಂಗಿನ ತುರಿ
  3. 2 ಕಪ್ ನೀರು 
  4. ಉಪ್ಪು ರುಚಿಗೆ ತಕ್ಕಷ್ಟು

ಸಾಂಬಾರಿಗೆ ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 2 ದೊಡ್ಡ ಈರುಳ್ಳಿ
  2. 1/4 ಟೀಸ್ಪೂನ್ ಅರಿಶಿನ ಪುಡಿ
  3. 1 ಟೀಸ್ಪೂನ್ ಕಲ್ಲುಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)
  4. ಸಣ್ಣ ಗೋಲಿ ಗಾತ್ರದ ಹುಣಿಸೇಹಣ್ಣು

ಮಸಾಲೆಗೆ ಬೇಕಾಗುವ ಪದಾರ್ಥಗಳು:

  1. 1/2 ಕಪ್ ತೆಂಗಿನ ತುರಿ
  2. 2 - 4 ಕೆಂಪು ಮೆಣಸಿನಕಾಯಿ
  3. 1.5 ಟೀಸ್ಪೂನ್ ಉದ್ದಿನ ಬೇಳೆ
  4. 2 ಟೀಸ್ಪೂನ್ ಕೊತ್ತಂಬರಿ ಬೀಜ
  5. 1/4 ಟೀಸ್ಪೂನ್ ಜೀರಿಗೆ
  6. 7 - 8 ಮೆಂತ್ಯ ಕಾಳು (ಬೇಕಾದಲ್ಲಿ)
  7. 1 ಟೀಸ್ಪೂನ್ ಅಡುಗೆ ಎಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 5 - 6 ಕರಿಬೇವು
  2. 1/4 ಟೀಸ್ಪೂನ್ ಸಾಸಿವೆ
  3. ಒಂದು ಚಿಟಿಕೆ ಇಂಗು
  4. 1 ಟೀಸ್ಪೂನ್ ಅಡುಗೆ ಎಣ್ಣೆ

ಬಸಳೆ ಪುಂಡಿ ಮಾಡುವ ವಿಧಾನ:

  1. ಅಕ್ಕಿಯನ್ನು ತೊಳೆದು, ನೀರು ಬಗ್ಗಿಸಿ, ಅಗಲವಾದ ಪಾತ್ರೆಯಲ್ಲಿ ಹರಡಿ ನೀರಾರಲು ಬಿಡಿ. 
  2. ನಂತರ ಮಿಕ್ಸಿಯಲ್ಲಿ ಸ್ವಲ್ಪ ತರಿಯಾದ ಪುಡಿ ಮಾಡಿಕೊಳ್ಳಿ. ರವೆಗಿಂತ ಸ್ವಲ್ಪ ನುಣ್ಣನೆ ಅಥವಾ ಸಣ್ಣಗಿರಲಿ. 
  3. ನಂತರ ಅದಕ್ಕೆ ತೆಂಗಿನ ತುರಿ ಹಾಕಿ ಒಂದೆರಡು ಸುತ್ತು ಅರೆಯಿರಿ. 
  4. ಒಂದು ಬಾಣಲೆಯಲ್ಲಿ ನೀರು ಮತ್ತು ಉಪ್ಪು ಹಾಕಿ ಕುದಿಯಲು ಇಡಿ. 
  5. ನೀರು ಕುದಿಯಲು ಪ್ರಾರಂಭಿಸಿದ ನಂತರ ಅಕ್ಕಿ ತರಿ ಅಥವಾ ರವೆಯನ್ನು ಹಾಕುತ್ತಾ ದೋಸೆ ಸಟ್ಟುಗ ಉಪಯೋಗಿಸಿ ಗಂಟಾಗದಂತೆ ಮಗುಚಿ. 
  6. ಮಧ್ಯಮ ಉರಿಯಲ್ಲಿ ಗಟ್ಟಿಯಾಗುವವರೆಗೆ ಮಗುಚಿ. ತುಂಬ ಗಟ್ಟಿಯಾಗುವುದು ಬೇಡ. ಸಟ್ಟುಗ ಬೀಳದೆ ನೇರ ನಿಲ್ಲುವಷ್ಟು ಗಟ್ಟಿ ಆದರೆ ಸಾಕು. ಸ್ಟವ್ ಆಫ್ ಮಾಡಿ.
  7. ಸ್ವಲ್ಪ ಬಿಸಿ ಆರಿದ ಮೇಲೆ, ಕೈಗೆ ನೀರು ಮುಟ್ಟಿಸಿಕೊಂಡು, ನೆಲ್ಲಿಕಾಯಿ ಗಾತ್ರದ ಉಂಡೆಗಳನ್ನು ಮಾಡಿ.
  8. ಸೆಕೆಯಲ್ಲಿ (ಆವಿಯಲ್ಲಿ) 15 ನಿಮಿಷ ಬೇಯಿಸಿ. ಪುಂಡಿ ತಯಾರಾಯಿತು. 
  9. ಈಗ ಒಂದು ಬಾಣಲೆ ತೆಗೆದು ಕೊಂಡು, ಕೆಂಪು ಮೆಣಸಿನಕಾಯಿ, ಉದ್ದಿನಬೇಳೆ, ಕೊತ್ತಂಬರಿ ಬೀಜ, ಜೀರಿಗೆ ಮತ್ತು ಮೆಂತೆಯನ್ನು ಮಧ್ಯಮ ಉರಿಯಲ್ಲಿ 1 ಟೀಸ್ಪೂನ್ ಎಣ್ಣೆ ಹಾಕಿ ಹುರಿಯಿರಿ.
  10. ಹುರಿದ ಮಸಾಲೆ ಮತ್ತು ತೆಂಗಿನತುರಿಯನ್ನು ನೀರು ಸೇರಿಸಿ ಅರೆದು ಪಕ್ಕಕ್ಕಿಡಿ. 
  11. ಒಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಇಂಗು ಮತ್ತು ಕರಿಬೇವಿನ ಒಗ್ಗರಣೆ ಮಾಡಿ. 
  12. ಅದಕ್ಕೆ ಸಣ್ಣಗೆ ಕತ್ತರಿಸಿದ ಈರುಳ್ಳಿ ಹಾಕಿ ಬಡಿಸಿ. ಚಿಟಿಕೆ ಅರಿಶಿನ ಪುಡಿ ಮತ್ತು ೧/೪ ಲೋಟ ನೀರು ಹಾಕಿ ಈರುಳ್ಳಿ ಮೆತ್ತಗಾಗುವವರೆಗೆ ಬೇಯಿಸಿ. 
  13. ಅರೆದ ಮಸಾಲೆಯನ್ನು ಹಾಕಿ. ಉಪ್ಪು ಮತ್ತು ಹುಣಿಸೆರಸ ಹಾಕಿ.
  14. ಬೇಕಾದಷ್ಟು ನೀರು ಸೇರಿಸಿ, ಮಗುಚಿ, ಒಂದು ಕುದಿ ಕುದಿಸಿ.
  15. ಆವಿಯಲ್ಲಿ ಬೇಯಿಸಿದ ಪುಂಡಿಯನ್ನು ಹಾಕಿ, ಹತ್ತು ನಿಮಿಷ ಬಿಡಿ. ಸವಿದು ಆನಂದಿಸಿ. 

ಸೋಮವಾರ, ಏಪ್ರಿಲ್ 10, 2017

Palak sambar recipe in Kannada | ಪಾಲಕ್ ಸಾಂಬಾರ್ ಮಾಡುವ ವಿಧಾನ

Palak sambar recipe in Kannada

Palak sambar recipe in Kannada | ಪಾಲಕ್ ಸಾಂಬಾರ್ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಕಟ್ಟು ಪಾಲಕ್ ಸೊಪ್ಪು 
  2. 1/4 ಕಪ್ ಅಲಸಂದೆ ಕಾಳು
  3. 1/4 ಟೀಸ್ಪೂನ್ ಅರಿಶಿನ ಪುಡಿ
  4. 2 ಟೀಸ್ಪೂನ್ ಕಲ್ಲುಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)
  5. ಸಣ್ಣ ಗೋಲಿ ಗಾತ್ರದ ಹುಣಿಸೇಹಣ್ಣು

ಮಸಾಲೆಗೆ ಬೇಕಾಗುವ ಪದಾರ್ಥಗಳು:

  1. 1/2 ಕಪ್ ತೆಂಗಿನ ತುರಿ
  2. 2 - 4 ಕೆಂಪು ಮೆಣಸಿನಕಾಯಿ
  3. 2 ಟೀಸ್ಪೂನ್ ಕೊತ್ತಂಬರಿ ಬೀಜ
  4. 1/2 ಟೀಸ್ಪೂನ್ ಸಾಸಿವೆ
  5. 2 ಬೇಳೆ ಬೆಳ್ಳುಳ್ಳಿ 
  6. 1 ಟೀಸ್ಪೂನ್ ಅಡುಗೆ ಎಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಕೆಂಪು ಮೆಣಸಿನಕಾಯಿ
  2. 5 - 6 ಕರಿಬೇವು
  3. 1/4 ಟೀಸ್ಪೂನ್ ಸಾಸಿವೆ
  4. 1 ಟೀಸ್ಪೂನ್ ಅಡುಗೆ ಎಣ್ಣೆ

ಪಾಲಕ್ ಸಾಂಬಾರ್ ಮಾಡುವ ವಿಧಾನ:

  1. ಅಲಸಂದೆ ಕಾಳನ್ನು 2 ಘಂಟೆಗಳ ಕಾಲ ನೆನೆಸಿ. ಅಥವಾ 2 ವಿಷಲ್ ಮಾಡಿ. 
  2. ಪಾಲಕ್ ಸೊಪ್ಪನ್ನು ತೊಳೆದು ಕತ್ತರಿಸಿ.
  3. ಒಂದು ಕುಕ್ಕರ್ ನಲ್ಲಿ ಕತ್ತರಿಸಿದ ಪಾಲಕ್ ಸೊಪ್ಪು, ಸ್ವಲ್ಪ ಉಪ್ಪು ಮತ್ತು ಅರಿಶಿನ ಪುಡಿ ಹಾಕಿ. 
  4. 1 ಲೋಟ ನೀರು ಹಾಕಿ ಒಂದೆರಡು ವಿಷಲ್ ಮಾಡಿ ಬೇಯಿಸಿ ಕೊಳ್ಳಿ. 
  5. ಈಗ ಒಂದು ಬಾಣಲೆ ತೆಗೆದು ಕೊಂಡು, ಕೆಂಪು ಮೆಣಸಿನಕಾಯಿ, ಕೊತ್ತಂಬರಿ ಬೀಜ ಮತ್ತು ಸಾಸಿವೆಯನ್ನು ಮಧ್ಯಮ ಉರಿಯಲ್ಲಿ 1 ಟೀಸ್ಪೂನ್ ಎಣ್ಣೆ ಹಾಕಿ ಹುರಿಯಿರಿ.
  6. ಹುರಿದ ಮಸಾಲೆ ಮತ್ತು ತೆಂಗಿನತುರಿಯನ್ನು ನೀರು ಸೇರಿಸಿ ಅರೆಯಿರಿ. 
  7. ಕೊನೆಯಲ್ಲಿ ಬೆಳ್ಳುಳ್ಳಿ ಹಾಕಿ ಒಂದು ಸುತ್ತು ಅರೆದು ತೆಗೆಯಿರಿ. 
  8. ಅರೆದ ಮಸಾಲೆಯನ್ನು ತರಕಾರಿ ಮತ್ತು ಬೇಳೆ ಇರುವ ಕುಕ್ಕರ್ ಗೆ ಹಾಕಿ. ಉಪ್ಪು ಮತ್ತು ಹುಣಿಸೆರಸ ಹಾಕಿ.
  9. ಕೊನೆಯಲ್ಲಿ ಬೇಕಾದಷ್ಟು ನೀರು ಸೇರಿಸಿ, ಮಗುಚಿ, ಒಂದು ಕುದಿ ಕುದಿಸಿ. 
  10. ಬೇಕಾದಲ್ಲಿ ಕೊತ್ತಂಬರಿ ಸೊಪ್ಪು ಹಾಕಿ. 
  11. ಕೆಂಪು ಮೆಣಸು, ಸಾಸಿವೆ, ಕರಿಬೇವಿನ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.

ಗುರುವಾರ, ಏಪ್ರಿಲ್ 6, 2017

Uddu menthe dose recipe in Kannada | ಉದ್ದು ಮೆಂತೆ ದೋಸೆ ಮಾಡುವ ವಿಧಾನ

Uddu menthe dose recipe in Kannada

Uddu menthe dose recipe in Kannada | ಉದ್ದು ಮೆಂತೆ ದೋಸೆ ಮಾಡುವ ವಿಧಾನ 

ಉದ್ದು ಮೆಂತೆ ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 2 ಕಪ್ ದೋಸೆ ಅಕ್ಕಿ
  2. 1/4 ಕಪ್ ಉದ್ದಿನ ಬೇಳೆ
  3. 2 ಟೀಸ್ಪೂನ್ ಮೆಂತ್ಯ
  4. ಎಣ್ಣೆ ದೋಸೆ ಮಾಡಲು
  5. ಉಪ್ಪು ರುಚಿಗೆ ತಕ್ಕಷ್ಟು.

ಉದ್ದು ಮೆಂತೆ ದೋಸೆ ಮಾಡುವ ವಿಧಾನ:

  1. ಅಕ್ಕಿ, ಉದ್ದಿನಬೇಳೆ ಮತ್ತು ಮೆಂತೆಯನ್ನು ತೊಳೆದು 5-6 ಗಂಟೆಗಳ ಕಾಲ ನೆನೆಯಲು ಬಿಡಿ.
  2. ನೆನೆಸಿದ ನಂತರ ಅಕ್ಕಿ, ಉದ್ದಿನಬೇಳೆ ಮತ್ತು ಮೆಂತೆಯನ್ನು ನುಣ್ಣನೆ ಅರೆದು ಒಂದು ಪಾತ್ರೆಗೆ ಹಾಕಿ.
  3. ಹಿಟ್ಟನ್ನು ಚೆನ್ನಾಗಿ ಕಲಸಿ, ಮುಚ್ಚಳವನ್ನು ಮುಚ್ಚಿ, 8-9 ಘಂಟೆ ಕಾಲ ಹಿಟ್ಟು ಹುದುಗಲು ಬಿಡಿ. ಗಮನಿಸಿ, ಉದ್ದಿನ ದೋಸೆಯಂತೆ ಹಿಟ್ಟು ಮೇಲೆ ಬರುವುದಿಲ್ಲ. 
  4. 8-9 ಘಂಟೆಯ ನಂತರ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಹಿಟ್ಟು ನೀರ್ ದೋಸೆ ಗಿಂತ ಗಟ್ಟಿ ಮತ್ತು ಉದ್ದಿನ ದೋಸೆಗಿಂತ ತೆಳುವಾಗಿರಲಿ. ಅಥವಾ ತೆಳುವಾದ ಮಿಲ್ಕ್ ಶೇಕ್ ನಂತಿರಲಿ. 
  5. ದೋಸೆ ಹೆಂಚನ್ನು ಬಿಸಿಮಾಡಿ. ದೋಸೆ ಹೆಂಚನ್ನು ಬಳಸುತ್ತಿದ್ದರೆ ಮೊದಲಿಗೆ ಎಣ್ಣೆ ಹಚ್ಚಿ. ನಾನ್ ಸ್ಟಿಕ್ ಪ್ಯಾನ್ ಆದಲ್ಲಿ ಎಣ್ಣೆ ಹಚ್ಚಬೇಡಿ, ಎಣ್ಣೆ ಹಚ್ಚಿದರೆ ದೋಸೆ ಹರಡಲು ಸಾಧ್ಯವಾಗುವುದಿಲ್ಲ. ಈಗ ವೃತ್ತಾಕಾರದ ರೀತಿಯಲ್ಲಿ ದೋಸೆ ಹಿಟ್ಟನ್ನು ಹರಡಿ, ಮುಚ್ಚಳವನ್ನು ಮುಚ್ಚಿ .
  6. 5 ಸೆಕೆಂಡುಗಳ ನಂತರ ಮುಚ್ಚಳವನ್ನು ತೆಗೆದು, ಎಣ್ಣೆ ಅಥವಾ ತುಪ್ಪ ಹಾಕಿ. ದೋಸೆ ಒಂದು ಬದಿ ಕಾಯಿಸಿದರೆ ಸಾಕು. ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಬಡಿಸಿರಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಬುಧವಾರ, ಏಪ್ರಿಲ್ 5, 2017

Masale majjige recipe in Kannada | ಮಸಾಲೆ ಮಜ್ಜಿಗೆ ಮಾಡುವ ವಿಧಾನ - 2

Masale majjige recipe in Kannada

Masale majjige recipe in Kannada | ಮಸಾಲೆ ಮಜ್ಜಿಗೆ ಮಾಡುವ ವಿಧಾನ - 2

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂಎಲ್)

  1. 1 ಕಪ್ ಗಟ್ಟಿ ಮೊಸರು
  2. 2 ಕಪ್ ನೀರು
  3. 1/2 ಟೀಸ್ಪೂನ್ ಜಜ್ಜಿದ ಕಾಳುಮೆಣಸು ಅಥವಾ ಹೆಚ್ಚಿದ ಹಸಿ ಮೆಣಸಿನಕಾಯಿ
  4. 1/2 ಟೀಸ್ಪೂನ್ ಹೆಚ್ಚಿದ ಶುಂಠಿ
  5. 1 ಟೀಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು
  6. 1/2 ಟೀಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು
  7. 1 ಟೀಸ್ಪೂನ್ ಎಣ್ಣೆ
  8. ದೊಡ್ಡ ಚಿಟಿಕೆ ಇಂಗು
  9. 1/2 ಟೀಸ್ಪೂನ್ ಸಾಸಿವೆ
  10. 1/2 ಟೀಸ್ಪೂನ್ ಜೀರಿಗೆ
  11. ಉಪ್ಪು ರುಚಿಗೆ ತಕ್ಕಷ್ಟು.

ಮಸಾಲೆ ಮಜ್ಜಿಗೆ ಮಾಡುವ ವಿಧಾನ:

  1. ಒಂದು ಪಾತ್ರೆಗೆ ಮೊಸರು, ನೀರು ಮತ್ತು ಉಪ್ಪು ಸೇರಿಸಿ ಕಡಗೋಲಿನಿಂದ ಅಥವಾ ಒಂದು ಪಾತ್ರೆಯಿಂದ ಇನ್ನೊಂದಕ್ಕೆ ಎತ್ತಿ ಹಾಕುತ್ತಾ ಚೆನ್ನಾಗಿ ಬೆರೆಸಿ.
  2. ಶುಂಠಿ, ಕರಿಬೇವಿನ ಸೊಪ್ಪು ಮತ್ತು ಕೊತ್ತಂಬರಿ ಸೊಪ್ಪುಗಳನ್ನು ಸಣ್ಣಗೆ ಕತ್ತರಿಸಿ. ಕಾಳುಮೆಣಸನ್ನು ಗುದ್ದಿ ಪುಡಿ ಮಾಡಿ ಕೊಳ್ಳಿ.
  3.  ಈಗ ಎಣ್ಣೆ, ಸಾಸಿವೆ, ಜೀರಿಗೆ, ಇಂಗು, ಜಜ್ಜಿದ ಕಾಳುಮೆಣಸು, ಹೆಚ್ಚಿದ ಶುಂಠಿ, ಕೊತ್ತಂಬರಿ ಸೊಪ್ಪು ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಒಗ್ಗರಣೆ ತಯಾರಿಸಿ. 
  4. ಒಗ್ಗರಣೆಯನ್ನು ಉಪ್ಪು ಬೆರೆಸಿದ ಮಜ್ಜಿಗೆಗೆ ಹಾಕಿ ಬೆರಸಿ. 
Related Posts Plugin for WordPress, Blogger...