Matvadi palya recipe in Kannada | ಮಟವಾಡಿ ಪಲ್ಯ ಮಾಡುವ ವಿಧಾನ
ಮಾಟವಾಡಿ ಪಲ್ಯ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1ಕಪ್ ತೊಗರಿಬೇಳೆ
- 4 ಕಪ್ ಹೆಚ್ಚಿದ ಮೆಂತ್ಯ ಸೊಪ್ಪು
- 2 - 4 ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ
- 1 " ಉದ್ದದ ಶುಂಠಿ
- 1/2 ಕಪ್ ತೆಂಗಿನತುರಿ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 4 ಟೇಬಲ್ ಚಮಚ ಎಣ್ಣೆ
- 1 ಟೀ ಚಮಚ ಸಾಸಿವೆ
- 1 ಟೀ ಚಮಚ ಜೀರಿಗೆ
- 1 ಟೀ ಚಮಚ ಉದ್ದಿನಬೇಳೆ
- 1 ಟೀ ಚಮಚ ಕಡ್ಲೆಬೇಳೆ
- 1 ಒಣಮೆಣಸು
- 5 - 6 ಸಣ್ಣಗೆ ಹೆಚ್ಚಿದ ಕರಿಬೇವಿನ ಎಲೆ
- ಒಂದು ದೊಡ್ಡ ಚಿಟಿಕೆ ಇಂಗು
- ಒಂದು ದೊಡ್ಡ ಚಿಟಿಕೆ ಅರಿಶಿನ
- ನಿಮ್ಮ ರುಚಿ ಪ್ರಕಾರ ಉಪ್ಪು
- ನಿಂಬೆರಸ (ಬೇಕಾದಲ್ಲಿ)
ಮಟವಾಡಿ ಪಲ್ಯ ಮಾಡುವ ವಿಧಾನ:
- ಬೇಳೆಯನ್ನು ತೊಳೆದು 2 ಘಂಟೆಗಳ ಕಾಲ ನೆನೆಸಿಡಿ.
- ನೆನೆದ ನಂತರ ನೀರು ಬಗ್ಗಿಸಿ. ಹಸಿರುಮೆಣಸಿನಕಾಯಿ ಮತ್ತು ಶುಂಠಿಯೊಂದಿಗೆ, ನೀರು ಹಾಕದೆ ತರಿ ತರಿಯಾಗಿ ರುಬ್ಬಿ ಕೊಳ್ಳಿ.
- ಅದಕ್ಕೆ ಹೆಚ್ಚಿದ ಮೆಂತ್ಯ ಸೊಪ್ಪು ಮತ್ತು ತೆಂಗಿನತುರಿ ಹಾಕಿ ಕಲಸಿ.
- ೧೫ ನಿಮಿಷಗಳ ಕಾಲ ಆವಿ ಅಥವಾ ಸೆಕೆಯಲ್ಲಿ ಬೇಯಿಸಿ. ನಂತ್ರ ಪುಡಿಪುಡಿ ಮಾಡಿಟ್ಟುಕೊಳ್ಳಿ.
- ಒಂದು ಬಾಣಲೆಯಲ್ಲಿ ಒಗ್ಗರಣೆಗೆ ಪಟ್ಟಿ ಮಾಡಿದ ಪದಾರ್ಥಗಳನ್ನು ಹಾಕಿ ಒಗ್ಗರಣೆ ಮಾಡಿ.
- ಅದಕ್ಕೆ ಪುಡಿ ಮಾಡಿಟ್ಟ ಬೇಳೆ ಮತ್ತು ಮೆಂತ್ಯಸೊಪ್ಪಿನ ಮಿಶ್ರಣ ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ.
- ಸಣ್ಣ ಉರಿಯಲ್ಲಿ ಬೇಯಿಸಿ. ಅಗತ್ಯವಿದ್ದಲ್ಲಿ ಸ್ವಲ್ಪ ನೀರು ಚಿಮುಕಿಸಿ ಬೇಯಿಸಿ.
- ಕೊನೆಯಲ್ಲಿ ನಿಂಬೆರಸ ಹಾಕಿ. ಚಪಾತಿ ಅಥವಾ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ