Easy siridhanya recipes in Kannada | ಸಿರಿಧಾನ್ಯದ ಸರಳ ಅಡಿಗೆ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)
- 1/2 ಕಪ್ ಸಿರಿಧಾನ್ಯ
- 1 ಕಪ್ ಮೊಸರು
- 1/4 ಚಮಚ ಸಾಸಿವೆ
- 1/2 ಟೀಸ್ಪೂನ್ ಉದ್ದಿನ ಬೇಳೆ
- 2 ಕರಿಬೇವಿನ ಎಲೆ
- 1 ಹಸಿರು ಮೆಣಸಿನಕಾಯಿ ಅಥವಾ ಮಜ್ಜಿಗೆ ಮೆಣಸು
- ಸ್ವಲ್ಪ ಶುಂಠಿ ಸಣ್ಣಗೆ ಕತ್ತರಿಸಿದ್ದು
- ಒಂದು ಚಿಟಿಕೆ ಇಂಗು
- 2 ಟೀ ಚಮಚ ಅಡುಗೆ ಎಣ್ಣೆ
- ಉಪ್ಪು ರುಚಿಗೆ ತಕ್ಕಷ್ಟು
- 1/2 ಕಪ್ ಹಾಲು
- ಸಕ್ಕರೆ ರುಚಿಗೆ ತಕ್ಕಷ್ಟು
- 2 ಟೀ ಚಮಚ ತುಪ್ಪ
- 1 ಟೇಬಲ್ ಚಮಚ ಒಣದ್ರಾಕ್ಷಿ
- 1 ಕಪ್ ಬಿಸಿ ನೀರು
- 1 ಟೀ ಚಮಚ ತುಪ್ಪ
- ಉಪ್ಪು ರುಚಿಗೆ ತಕ್ಕಷ್ಟು
- ಉಪ್ಪಿನಕಾಯಿ
ಸಿರಿಧಾನ್ಯದ ಸರಳ ಅಡಿಗೆ ಮಾಡುವ ವಿಧಾನ:
- ಮೊದಲಿಗೆ ಯಾವುದೇ ಸಿರಿಧಾನ್ಯವನ್ನು ಮೆತ್ತಗೆ ಬೇಯಿಸಿಟ್ಟು ಕೊಳ್ಳಿ. ನಾನು 1/2 ಕಪ್ ಸಿರಿಧಾನ್ಯಕ್ಕೆ 1.5 ಕಪ್ ನೀರು ಬಳಸಿದ್ದೇನೆ.
- ಮೊದಲನೇ ಬಟ್ಟಲಿನಲ್ಲಿ 1/3 ಭಾಗದಷ್ಟು ಬೇಯಿಸಿದ ಸಿರಿಧಾನ್ಯ ತೆಗೆದುಕೊಂಡು, ಅದಕ್ಕೆ ಮೊಸರು ಮತ್ತು ಉಪ್ಪು ಹಾಕಿ ಕಲಸಿ.
- ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಕರಿಬೇವು, ಮೆಣಸಿನಕಾಯಿ, ಸಣ್ಣಗೆ ಕತ್ತರಿಸಿದ ಶುಂಠಿ ಮತ್ತು ಇಂಗಿನ ಒಗ್ಗರಣೆ ಕೊಡಿ.
- ಎರಡನೇ ಬಟ್ಟಲಿನಲ್ಲಿ 1/3 ಭಾಗದಷ್ಟು ಬೇಯಿಸಿದ ಸಿರಿಧಾನ್ಯ ತೆಗೆದುಕೊಂಡು, ಅದಕ್ಕೆ ಹಾಲು ಮತ್ತು ಸಕ್ಕರೆ ಹಾಕಿ ಕಲಸಿ.
- ತುಪ್ಪದಲ್ಲಿ ಒಣದ್ರಾಕ್ಷಿ ಹುರಿದು ಸೇರಿಸಿ.
- ಉಳಿದ ಸಿರಿಧಾನ್ಯವನ್ನು ಮೂರನೇ ಬಟ್ಟಲಿನಲ್ಲಿ ತೆಗೆದುಕೊಳ್ಳಿ. ಬಿಸಿನೀರು, ಉಪ್ಪು ಮತ್ತು ತುಪ್ಪ ಹಾಕಿ ಕಲಸಿ. ಉಪ್ಪಿನಕಾಯಿಯೊಂದಿಗೆ ಸವಿಯಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ