Belgaum Kunda recipe in Kannada | ಬೆಳಗಾಂ ಕುಂದಾ ಮಾಡುವ ವಿಧಾನ
ಬೆಳಗಾಂ ಕುಂದಾ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1 ಲೀ ಹಾಲು
- 1/2 + 1/4 ಕಪ್ ಸಕ್ಕರೆ
- 1/2 ಕಪ್ ಮೊಸರು (ಹುಳಿಯಿಲ್ಲದ್ದು)
- 2 ಏಲಕ್ಕಿ ಪುಡಿಮಾಡಿದ್ದು
ಬೆಳಗಾಂ ಕುಂದಾ ಮಾಡುವ ವಿಧಾನ:
- ಒಂದು ದಪ್ಪ ತಳದ ಬಾಣಲೆಯಲ್ಲಿ ಹಾಲನ್ನು ಕುದಿಯಲು ಇಡಿ.
- ಹಾಲು ಸುಮಾರು 1/4 ಭಾಗದಷ್ಟಾಗುವವರೆಗೆ ಆಗಾಗ್ಯೆ ಮಗುಚುತ್ತಾ ಕುದಿಸಿ.
- ನಂತರ ಮೊಸರನ್ನು ಸೇರಿಸಿ ಕುದಿಸುವುದನ್ನು ಮುಂದುವರೆಸಿ.
- ಹಾಲು ಒಡೆಯಲು ಪ್ರಾರಂಭವಾದಾಗ ಸಕ್ಕರೆ ಸೇರಿಸಿ ಕುದಿಸುವುದನ್ನು ಮುಂದುವರೆಸಿ.
- ಇನ್ನೊಂದು ಬಾಣಲೆಯಲ್ಲಿ ಉಳಿದ 1/4 ಕಪ್ ಸಕ್ಕರೆ ಹಾಕಿ ಬಿಸಿ ಮಾಡಿ.
- ನೀರು ಹಾಕದೆ ಕಂದುಬಣ್ಣಕ್ಕೆ ತಿರುಗುವವರೆಗೆ ಬಿಸಿಮಾಡಿ.
- ಇದನ್ನು ಕುದಿಯುತ್ತಿರುವ ಹಾಲು+ಸಕ್ಕರೆ+ಮೊಸರು ಇರುವ ಬಾಣಲೆಗೆ ಹಾಕಿ.
- ಹೆಚ್ಚಿನ ನೀರಾರುವವರೆಗೆ ಕುದಿಸಿ.
- ಕೊನೆಯಲ್ಲಿ ಏಲಕ್ಕಿ ಪುಡಿ ಹಾಕಿ, ಮಗುಚಿ ಸ್ಟವ್ ಆಫ್ ಮಾಡಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ