Chutney pudi recipe in Kannada | ಚಟ್ನಿ ಪುಡಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 10 - 20 ಒಣ ಮೆಣಸಿನಕಾಯಿ (ಮಧ್ಯಮ ಖಾರ)
- 2 - 4 ಎಸಳು ಕರಿಬೇವು
- 1/2 ಕಪ್ ಕಡಲೆಬೇಳೆ
- 1/3 ಕಪ್ ಉದ್ದಿನ ಬೇಳೆ
- 1/2 ಕಪ್ ಒಣ ಕೊಬ್ಬರಿ ತುರಿದಿದ್ದು
- 2 ಟೀಸ್ಪೂನ್ ಕೊತ್ತಂಬರಿ ಬೀಜ
- 1/2 ಟೀಸ್ಪೂನ್ ಇಂಗಿನ ಪುಡಿ
- ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು (ನಾನು ವಾಟೆಹುಳಿ ಪುಡಿ ಉಪಯೋಗಿಸಿದ್ದೇನೆ)
- 2 ಟೀಸ್ಪೂನ್ ಅಡುಗೆ ಎಣ್ಣೆ
ಚಟ್ನಿ ಪುಡಿ ಮಾಡುವ ವಿಧಾನ:
- ಒಂದು ಬಾಣಲೆಯನ್ನು ಬಿಸಿ ಮಾಡಿ. ಒಣ ಮೆಣಸಿನಕಾಯಿಗಳನ್ನು ಹುರಿದು ತೆಗೆದಿಡಿ.
- ನಂತರ ಕಡಲೆಬೇಳೆಯನ್ನು ಮಧ್ಯಮ ಉರಿಯಲ್ಲಿ ಸ್ವಲ್ಪ ಕಂದು ಬಣ್ಣ ಬರುವವರವರೆಗೆ ಹುರಿದು ತೆಗೆದಿಡಿ.
- ನಂತರ ಉದ್ದಿನ ಬೇಳೆಯನ್ನು ಮಧ್ಯಮ ಉರಿಯಲ್ಲಿ ಸ್ವಲ್ಪ ಕಂದು ಬಣ್ಣ ಬರುವವರವರೆಗೆ ಹುರಿದು ತೆಗೆದಿಡಿ.
- ಕರಿಬೇವನ್ನು ಗರಿಗರಿ ಯಾಗುವವರೆಗೆ ಹುರಿಯಿರಿ.
- ಅದಕ್ಕೆ ಇಂಗು ಮತ್ತು ಹುಣಿಸೆಹಣ್ಣಿನ ಚೂರುಗಳನ್ನು ಹಾಕಿ ಕೆಲವು ಸೆಕೆಂಡ್ಗಳ ಕಾಲ ಹುರಿದು ತೆಗೆದಿಡಿ.
- ನಂತರ ಒಣ ಕೊಬ್ಬರಿ ಯನ್ನು ಹುರಿದು ತೆಗೆದಿಡಿ.
- ಹುರಿದ ಎಲ್ಲ ಪದಾರ್ಥಗಳು ತಣ್ಣಗೆ ಆದ ಮೇಲೆ ಮಿಕ್ಸಿ ಜಾರಿಗೆ ಹಾಕಿ ನುಣ್ಣನೆ ಪುಡಿ ಮಾಡಿ. ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ.
Very tasty recipe thank you very much
ಪ್ರತ್ಯುತ್ತರಅಳಿಸಿ