ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 2 ಕಪ್ ಬೀಟ್ರೂಟ್ ತುರಿ ಅಥವಾ 1 ದೊಡ್ಡ ಗಾತ್ರದ ಬೀಟ್ರೂಟ್
- 1 ಕಪ್ ಹಾಲು
- 1/4 ಕಪ್ ಸಕ್ಕರೆ
- 2 ಟೇಬಲ್ ಸ್ಪೂನ್ ತುಪ್ಪ
- 1 ಟೇಬಲ್ ಸ್ಪೂನ್ ಗೋಡಂಬಿ ಕತ್ತರಿಸಿದ್ದು
- 1/4 ಟೀಸ್ಪೂನ್ ಏಲಕ್ಕಿ ಪುಡಿ
ಬೀಟ್ರೂಟ್ ಹಲ್ವಾ ಮಾಡುವ ವಿಧಾನ:
- ಬೀಟ್ರೂಟ್ ನ್ನು ತೊಳೆದು, ಸಿಪ್ಪೆ ತೆಗೆದು ತುರಿದುಕೊಳ್ಳಿ.
- ಒಂದು ಬಾಣಲೆಯಲ್ಲಿ ಒಂದು ಟೇಬಲ್ ಚಮಚ ತುಪ್ಪ ಹಾಕಿ. ಬಿಸಿ ಮಾಡಿ.
- ಬೀಟ್ರೂಟ್ ತುರಿ ಹಾಕಿ, ಬೀಟ್ರೂಟ್ ಮೆತ್ತಗಾಗುವವರೆಗೆ ಹುರಿಯಿರಿ.
- ನಂತರ ಹಾಲು ಸೇರಿಸಿ.
- ದೊಡ್ಡ ಮಧ್ಯಮ ಉರಿಯಲ್ಲಿ ಆಗಾಗ್ಯೆ ಮಗುಚುತ್ತಾ ಬೇಯಿಸಿ.
- ಹಾಲು ಕಡಿಮೆ ಆದಾಗ ಸಕ್ಕರೆ ಸೇರಿಸಿ.
- ಹಲ್ವಾ ನೀರಾರುತ್ತ ಬಂದಾಗ ಕತ್ತರಿಸಿದ ಗೋಡಂಬಿ ಮತ್ತು ಇನ್ನೊಂದು ಟೇಬಲ್ ಚಮಚ ತುಪ್ಪ ಹಾಕಿ.
- ಆಗಾಗ್ಯೆ ಮಗುಚುತ್ತಾ ಇರಿ. ಉರಿ ಕಡಿಮೆ ಇರಲಿ.
- ಕೊನೆಯಲ್ಲಿ ಏಲಕ್ಕಿ ಪುಡಿ ಸೇರಿಸಿ ಮಗುಚಿ.
- ಹಲ್ವಾದ ನೀರು ಸಂಪೂರ್ಣ ಆರುತ್ತಾ ಬಂದಾಗ ಸ್ಟೋವ್ ಆಫ್ ಮಾಡಿ. ಬಿಸಿ ಅಥವಾ ತಣ್ಣಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ