Shenga or Kadlekai chutney recipe in Kannada | ಶೇಂಗಾ ಚಟ್ನಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಕಪ್ ಶೇಂಗಾ ಅಥವಾ ಕಡ್ಲೆಕಾಯಿ
- 2-4 ಒಣ ಮೆಣಸಿನಕಾಯಿ
- 3 - 4 ಬೇಳೆ ಬೆಳ್ಳುಳ್ಳಿ
- 3 - 4 ಕರಿಬೇವಿನ ಎಲೆ
- 1/4 ಕಪ್ ತೆಂಗಿನ ತುರಿ
- ಸಣ್ಣ ಗೋಲಿ ಗಾತ್ರದ ಹುಣಿಸೆಹಣ್ಣು
- ಉಪ್ಪು ರುಚಿಗೆ ತಕ್ಕಷ್ಟು
- 1 ಟೀಸ್ಪೂನ್ ಅಡುಗೆ ಎಣ್ಣೆ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1/2 ಟೀಸ್ಪೂನ್ ಸಾಸಿವೆ
- 1 ಒಣ ಮೆಣಸಿನಕಾಯಿ ಅಥವಾ ಹಸಿ ಮೆಣಸಿನಕಾಯಿ
- 3 - 4 ಕರಿಬೇವಿನ ಎಲೆ
- 2 ಟೀಸ್ಪೂನ್ ಅಡುಗೆ ಎಣ್ಣೆ
ಶೇಂಗಾ ಚಟ್ನಿ ಮಾಡುವ ವಿಧಾನ:
- ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಬಿಸಿ ಮಾಡಿ, ಅರ್ಧ ಕಪ್ ಶೇಂಗಾ ಅಥವಾ ನೆಲಗಡಲೆ ಹಾಕಿ ಮಧ್ಯಮ ಉರಿಯಲ್ಲಿ ಹುರಿಯಿರಿ. (ಗಮನಿಸಿ, ಶೇಂಗಾ ಮತ್ತು ತೆಂಗಿನ ತುರಿಯ ಪ್ರಮಾಣವನ್ನು ನಿಮ್ಮಿಷ್ಟದಂತೆ ಬದಲಾಯಿಸಬಹುದು.)
- ನೆಲಗಡಲೆ ಕಂದು ಬಣ್ಣಕ್ಕೆ ತಿರುಗಿ, ಗರಿ-ಗರಿಯಾದಾಗ ಒಣಮೆಣಸು ಮತ್ತು ಸಿಪ್ಪೆ ತೆಗೆದು ಕತ್ತರಿಸಿದ ಬೆಳ್ಳುಳ್ಳಿ ಹಾಕಿ. ಒಂದೆರಡು ನಿಮಿಷ ಹುರಿಯಿರಿ.
- ಕೊನೆಯಲ್ಲಿ ಕರಿಬೇವು ಮತ್ತು ತೆಂಗಿನ ತುರಿ ಹಾಕಿ, ಮಗುಚಿ ಸ್ಟವ್ ಆಫ್ ಮಾಡಿ.
- ಉಪ್ಪು, ಹುಣಿಸೇಹಣ್ಣು ಮತ್ತು ಅಗತ್ಯವಿದ್ದಷ್ಟು ನೀರು ಹಾಕಿ ನುಣ್ಣನೆ ಅರೆಯಿರಿ.
- ಅದನ್ನು ಒಂದು ಬಟ್ಟಲಿಗೆ ಹಾಕಿ. ಈ ಚಟ್ನಿ ಸ್ವಲ್ಪ ತೆಳ್ಳಗಿರಬೇಕು. ಅಗತ್ಯವಿದ್ದಷ್ಟು ನೀರು ಸೇರಿಸಿ.
- ಎಣ್ಣೆ, ಸಾಸಿವೆ, ಒಣಮೆಣಸು ಮತ್ತು ಕರಿಬೇವಿನ ಒಗ್ಗರಣೆ ಕೊಡಿ. ಇಡ್ಲಿ ಅಥವಾ ದೋಸೆಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ