Cutlet recipe in Kannada | ಕಟ್ಲೆಟ್ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 2 ಆಲೂಗಡ್ಡೆ
- 1/2 ಕಪ್ ಹಸಿ ಬಟಾಣಿ
- 1/2 ಟೀಸ್ಪೂನ್ ಜೀರಿಗೆ
- 1 ಈರುಳ್ಳಿ
- 1 ಟೀಸ್ಪೂನ್ ಸಣ್ಣದಾಗಿ ಕೊಚ್ಚಿದ ಶುಂಠಿ
- 1 ಟೇಬಲ್ ಚಮಚ ಸಣ್ಣದಾಗಿ ಕೊಚ್ಚಿದ ಕೊತ್ತಂಬರಿ ಸೊಪ್ಪು
- 1 ಟೇಬಲ್ ಚಮಚ ನುಣ್ಣಗೆ ಕತ್ತರಿಸಿದ ಪುದಿನ (ಬೇಕಾದಲ್ಲಿ)
- 1/2 - 1 ಟೀಸ್ಪೂನ್ ಅಚ್ಚಖಾರದ ಪುಡಿ
- 1/2 ಟೀಸ್ಪೂನ್ ಗರಂ ಮಸಾಲಾ
- 1 ಟೀಸ್ಪೂನ್ ನಿಂಬೆ ರಸ (ಬೇಕಾದಲ್ಲಿ)
- 4 ಬ್ರೆಡ್
- 2 ಟೇಬಲ್ ಚಮಚ ಜೋಳದ ಹಿಟ್ಟು
- ಉಪ್ಪು ರುಚಿಗೆ ತಕ್ಕಷ್ಟು
- ಎಣ್ಣೆ ಕಾಯಿಸಲು
ಕಟ್ಲೆಟ್ ಮಾಡುವ ವಿಧಾನ:
- ಆಲೂಗಡ್ಡೆ ಮತ್ತು ಹಸಿಬಟಾಣಿಯನ್ನು ಬೇಯಿಸಿಕೊಳ್ಳಿ. ಆಲೂಗಡ್ಡೆ ಸಿಪ್ಪೆ ತೆಗೆಯಿರಿ. ಎರಡನ್ನು ಮ್ಯಾಶ್ ಮಾಡಿ ಅಥವಾ ಹಿಸುಕಿ.
- 2 ಟೀಸ್ಪೂನ್ ಎಣ್ಣೆಯನ್ನು ಒಂದು ಬಾಣಲೆಯಲ್ಲಿ ಬಿಸಿ ಮಾಡಿ ಜೀರಿಗೆ ಹಾಕಿ.
- ಜೀರಿಗೆ ಸಿಡಿದ ಮೇಲೆ ನುಣ್ಣಗೆ ಕತ್ತರಿಸಿದ ಶುಂಠಿ ಮತ್ತು ಈರುಳ್ಳಿ ಸೇರಿಸಿ ಮೆತ್ತಗಾಗುವವರೆಗೆ ಹುರಿಯಿರಿ.
- ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ಪುದಿನ ಸೇರಿಸಿ ಹುರಿಯಿರಿ.
- ಬೇಯಿಸಿ, ಹಿಸುಕಿದ ಆಲೂಗಡ್ಡೆ ಮತ್ತು ಹಸಿಬಟಾಣಿ ಹಾಕಿ ಕಲಸಿ.
- ನಂತರ ಅಚ್ಚ ಖಾರದ ಪುಡಿ, ಉಪ್ಪು ಮತ್ತು ಗರಂ ಮಸಾಲಾ ಸೇರಿಸಿ ಕಲಸಿ. ಬೇಕಾದಲ್ಲಿ ನಿಂಬೆರಸ ಹಾಕಿ. ಸ್ಟವ್ ಆಫ್ ಮಾಡಿ.
- ಎರಡು ಬ್ರೆಡ್ ನ್ನು ನೀರಿನಲ್ಲಿ ಹಾಕಿ, ಹಿಂಡಿ ತೆಗೆದು ಸೇರಿಸಿ ಕಲಸಿ.
- ನಂತ್ರ ಒಂದು ಬಟ್ಟಲಿನಲ್ಲಿ ಜೋಳದ ಹಿಟ್ಟು ಮತ್ತು ನೀರು ಹಾಕಿ ತೆಳುವಾದ ದೋಸೆ ಹಿಟ್ಟಿನಂತೆ ಮಾಡಿಕೊಳ್ಳಿ.
- ಉಳಿದ ಎರಡು ಬ್ರೆಡ್ ನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಟ್ಟು ಕೊಳ್ಳಿ.
- ಮಸಾಲೆ ಹಾಕಿ ಸಿದ್ದ ಪಡಿಸಿದ ಆಲೂಗಡ್ಡೆ ಮಿಶ್ರಣದಿಂದ ಚಪ್ಪಟೆಯಾದ ಕಟ್ಲೇಟ್ ಗಳನ್ನೂ ಮಾಡಿಕೊಳ್ಳಿ.
- ಅದನ್ನು ಮೊದಲು ಜೋಳದ ಹಿಟ್ಟಿನಲ್ಲಿ ಅದ್ದಿ ತೆಗೆದು, ನಂತ್ರ ಬ್ರೆಡ್ ಪುಡಿಯಲ್ಲಿ ಹೊರಳಾಡಿಸಿ. ಹೀಗೆ ಎಲ್ಲ ಕಟ್ಲೇಟ್ ಗಳನ್ನೂ ಸಿದ್ದ ಪಡಿಸಿಕೊಳ್ಳಿ.
- ದೋಸೆ ಕಾವಲಿಯಲ್ಲಿ ಸ್ವಲ್ಪ ಎಣ್ಣೆ ಚಿಮುಕಿಸಿ ಬಿಸಿ ಮಾಡಿ.
- ತಯಾರಿಸದ ಕಟ್ಲೇಟ್ ನ್ನು ಅಗತ್ಯವಿದ್ದಷ್ಟು ಎಣ್ಣೆ ಚಿಮುಕಿಸಿ ಎರಡು ಬದಿ ಕಾಯಿಸಿ. ಬಿಸಿ ಬಿಸಿಯಾಗಿ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ