Sorekai palya recipe in Kannada | ಸೋರೆಕಾಯಿ ಪಲ್ಯ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಮಧ್ಯಮ ಗಾತ್ರದ ಸೋರೆಕಾಯಿ
- 1/2 ಟೀಸ್ಪೂನ್ ಸಾಸಿವೆ
- 1 ಟೀಸ್ಪೂನ್ ಉದ್ದಿನ ಬೇಳೆ
- 1 ಟೀಸ್ಪೂನ್ ಕಡ್ಲೆ ಬೇಳೆ
- 4 - 6 ಟೀಸ್ಪೂನ್ ಅಡುಗೆ ಎಣ್ಣೆ
- 1 ಒಣ ಮೆಣಸಿನಕಾಯಿ (ಬೇಕಾದಲ್ಲಿ)
- 1 ದೊಡ್ಡ ಚಿಟಿಕೆ ಅರಿಶಿನ ಪುಡಿ
- 1 ದೊಡ್ಡ ಚಿಟಿಕೆ ಇಂಗು
- 4 - 5 ಕರಿಬೇವಿನ ಎಲೆ
- ಸಣ್ಣ ನೆಲ್ಲಿಕಾಯಿ ಗಾತ್ರದ ಬೆಲ್ಲ
- ಉಪ್ಪು ರುಚಿಗೆ ತಕ್ಕಷ್ಟು
- 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
- 1 - 2 ಟೀಸ್ಪೂನ್ ನಿಂಬೆರಸ
ಅರೆಯಲು ಬೇಕಾಗುವ ಪದಾರ್ಥಗಳು:
- 1/2 ಕಪ್ ತೆಂಗಿನ ತುರಿ
- 1 ಟೀಸ್ಪೂನ್ ಸಾರಿನ ಪುಡಿ । ಪಲ್ಯದ ಪುಡಿ । ಅಚ್ಚಖಾರದ ಪುಡಿ । ಹಸಿರು ಮೆಣಸಿನಕಾಯಿ
- 4 - 5 ಕರಿಬೇವಿನ ಎಲೆ (ಬೇಕಾದಲ್ಲಿ)
- 1/2 ಟೀಸ್ಪೂನ್ ಸಾಸಿವೆ
ಸೋರೆಕಾಯಿ ಪಲ್ಯ ಮಾಡುವ ವಿಧಾನ:
- ಸೋರೆಕಾಯಿಯನ್ನು ತೊಳೆದು, ಸಿಪ್ಪೆ ತೆಗೆದು, ಕತ್ತರಿಸಿ. ಬೀಜ ಬೆಳೆದಿದ್ದರೆ ತೆಗೆಯಿರಿ.
- ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆ ಹಾಕಿ.
- ಸಾಸಿವೆ ಸಿಡಿದ ಕೂಡಲೇ ಅರಶಿನ, ಇಂಗು, ಒಣ ಮೆಣಸಿನಕಾಯಿ ಮತ್ತು ಕರಿಬೇವಿನ ಎಲೆ ಹಾಕಿ ಒಗ್ಗರಣೆ ತಯಾರಿಸಿಕೊಳ್ಳಿ.
- ಅದಕ್ಕೆ ಕತ್ತರಿಸಿದ ಸೊರೆಕಾಯಿ ಹಾಕಿ.
- ಉಪ್ಪು ಮತ್ತು ಬೆಲ್ಲ ಹಾಕಿ ಮಗುಚಿ.
- 1/4 ಕಪ್ ನೀರು ಹಾಕಿ, ಮುಚ್ಚಳ ಮುಚ್ಚಿ ಮೆತ್ತಗಾಗುವವರೆಗೆ ಬೇಯಿಸಿ.
- ಅದೇ ಸಮಯದಲ್ಲಿ ಒಂದು ಮಿಕ್ಸಿ ಜಾರ್ ನಲ್ಲಿ ತೆಂಗಿನ ತುರಿ, 1/4 ಚಮಚ ಸಾಸಿವೆ ಮತ್ತು ಸಾರಿನ ಪುಡಿ ಅಥವಾ ಪಲ್ಯದ ಪುಡಿ ಹಾಕಿ, ನೀರು ಹಾಕದೆ ಪುಡಿ ಮಾಡಿ.
- ಪುಡಿ ಮಾಡಿದ ಮಸಾಲೆಯನ್ನು ಬೇಯುತ್ತಿರುವ ಸೋರೆಕಾಯಿಗೆ ಹಾಕಿ.
- ಕೊತ್ತಂಬರಿ ಸೊಪ್ಪನ್ನು ಉದುರಿಸಿ ಚೆನ್ನಾಗಿ ಮಗುಚಿ. ಸ್ಟೋವ್ ಆಫ್ ಮಾಡಿ.
- ಕೊನೆಯಲ್ಲಿ ನಿಂಬೆರಸ ಸೇರಿಸಿ (ಬೇಕಾದಲ್ಲಿ). ಚಪಾತಿ ಅಥವಾ ಬಿಸಿ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ