Shenga chutney pudi recipe in Kannada | ಶೇಂಗಾ ಹಿಂಡಿ ಮಾಡುವ ವಿಧಾನ
Shenga chutney powder video
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಕಪ್ ಕಡಲೆಕಾಯಿ ಅಥವಾ ಶೆಂಗಾ
- 1 - 2 ಟೀಸ್ಪೂನ್ ಅಚ್ಚಖಾರದ ಪುಡಿ (ನಿಮ್ಮ ಖಾರಕ್ಕೆ ತಕ್ಕಂತೆ)
- 1/4 ಟೀಸ್ಪೂನ್ ಜೀರಿಗೆ
- 4 - 5 ಕರಿಬೇವಿನ ಎಲೆ (ಬೇಕಾದಲ್ಲಿ)
- 4 - 5 ಬೇಳೆ ಬೆಳ್ಳುಳ್ಳಿ
- 1/2 ಟೀಸ್ಪೂನ್ ಸಕ್ಕರೆ
- ನಿಮ್ಮ ರುಚಿಗೆ ತಕ್ಕಂತೆ ಉಪ್ಪು
ಶೇಂಗಾ ಹಿಂಡಿ ಮಾಡುವ ವಿಧಾನ:
- ಒಂದು ಬಾಣಲೆಯನ್ನು ಬಿಸಿ ಮಾಡಿ. ಕಡಲೆಕಾಯಿ ಅಥವಾ ಶೇಂಗಾವನ್ನು ಮಧ್ಯಮ ಉರಿಯಲ್ಲಿ ಅಲ್ಲಲ್ಲಿ ಕೆಂಪಗಾಗುವವರೆಗೆ ಹುರಿದು ತೆಗೆದಿಡಿ.
- ಹುರಿದ ಶೇಂಗಾ ಬಿಸಿ ಆರಿದ ಮೇಲೆ, ಜೀರಿಗೆ, ಬೆಳ್ಳುಳ್ಳಿ, ಕರಿಬೇವು ಸೇರಿಸಿ ಪುಡಿ ಮಾಡಿ. ಮಿಕ್ಸಿಯಲ್ಲಿ ಬುರ್-ಬುರ್ ಮಾಡಿ ಪುಡಿ ಮಾಡಿ. ಪುಡಿ ಸ್ವಲ್ಪ ತರಿತರಿಯಾಗಿರಲಿ.
- ನಂತರ ಅದಕ್ಕೆ ಸಕ್ಕರೆ, ಉಪ್ಪು ಮತ್ತು ಅಚ್ಚಖಾರದ ಪುಡಿ ಸೇರಿಸಿ ಪುನಃ ಒಂದೆರಡು ಸುತ್ತು ಮಿಕ್ಸಿ ಮಾಡಿ.
- ತಯಾರಾದ ಚಟ್ನಿ ಪುಡಿಯನ್ನು ಒಂದು ಬಟ್ಟಲಿಗೆ ಹಾಕಿ. ಬಿಸಿ ಆರಿದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. ರೊಟ್ಟಿ ಅಥವಾ ಚಪಾತಿಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ