Ananas kesari bath recipe in Kannada | ಅನಾನಸ್ ಕೇಸರಿಬಾತ್ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್)
- 1 ಕಪ್ ಮಧ್ಯಮ ರವೆ ಅಥವಾ ಉಪ್ಪಿಟ್ಟು ರವೇ
- 1 ಕಪ್ ಸಣ್ಣಗೆ ಹೆಚ್ಚಿದ ಅನಾನಸ್
- 2.5 ಕಪ್ ನೀರು
- 1.25 ಕಪ್ ಸಕ್ಕರೆ
- 0.25 - 0.5 ಕಪ್ ತುಪ್ಪ (1 ಕಪ್ ವರೆಗೆ ಹಾಕಬಹುದು)
- ಚಿಟಿಕೆ ಕೇಸರಿ ದಳ ಅಥವಾ ಬಣ್ಣ ಅಥವಾ ಅರಶಿನ ಪುಡಿ
- ಒಂದು ದೊಡ್ಡ ಚಿಟಿಕೆ ಏಲಕ್ಕಿ ಪುಡಿ
- 5-6 ಗೋಡಂಬಿ
- 8-10 ಒಣ ದ್ರಾಕ್ಷಿ (ಬೇಕಾದಲ್ಲಿ)
ಅನಾನಸ್ ಕೇಸರಿಬಾತ್ ಪಾಕವಿಧಾನ:
- ಒಂದು ಬಾಣಲೆಯಲ್ಲಿ ಒಂದು ಟೇಬಲ್ ಚಮಚ ತುಪ್ಪ ಮತ್ತು ಹೆಚ್ಚಿದ ಅನಾನಸ್ ಹಣ್ಣು ಹಾಕಿ ಹುರಿಯಿರಿ.
- ಅದಕ್ಕೆ ಸಕ್ಕರೆ, ಕೇಸರಿ ದಳ, ನೀರು ಮತ್ತು ಏಲಕ್ಕಿ ಪುಡಿ ಹಾಕಿ ಕುದಿಯಲು ಇಡಿ.
- ಇನ್ನೊಂದು ಬಾಣಲೆಯಲ್ಲಿ ಉಳಿದ ತುಪ್ಪ, ಗೋಡಂಬಿ, ದ್ರಾಕ್ಷಿ(ಬೇಕಾದಲ್ಲಿ) ಮತ್ತು ರವೇ ಹಾಕಿ ಹುರಿಯಲು ಪ್ರಾರಂಭಿಸಿ. ಸ್ಟೋವ್ ಮಧ್ಯಮ ಉರಿಯಲ್ಲಿರಲಿ.
- ಒಳ್ಳೆಯ ಘಮ ಅಥವಾ ರವೆ ಅಲ್ಲಲ್ಲಿ ಬಿಳಿಯಾದಾಗ ಉರಿ ತಗ್ಗಿಸಿ.
- ಇಷ್ಟರೊಳಗೆ ಇನ್ನೊಂದು ಬಾಣಲೆಯ ನೀರು ಕುದಿಯಲಾರಂಭಿಸಿರುತ್ತದೆ. ಆ ಕುದಿಯುವ ನೀರನ್ನು ಜಾಗ್ರತೆಯಿಂದ ರವೆ ಇರುವ ಬಾಣಲೆಗೆ ಸ್ವಲ್ಪ ಸ್ವಲ್ಪವಾಗಿ ಸುರಿಯಿರಿ.
- ಚೆನ್ನಾಗಿ ಮಗುಚಿ. ದಪ್ಪ ಪೇಸ್ಟ್ ನ ಹದಕ್ಕೆ ಬಂದ ಕೂಡಲೇ ಸ್ಟೋವ್ ಆಫ್ ಮಾಡಿ. ಬಿಸಿ ಆರಿದ ಮೇಲೆ ಗಟ್ಟಿಯಾಗುತ್ತದೆ. ನೆನಪಿಡಿ ೪ - ೫ ನಿಮಿಷದೊಳಗೆ ಪೇಸ್ಟ್ ನ ಹದಕ್ಕೆ ಬರುತ್ತದೆ. ಬಿಸಿ ಅಥವಾ ತಣ್ಣಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ