Masala puri recipe in Kannada | ಮಸಾಲೆ ಪುರಿ ಮಾಡುವ ವಿಧಾನ
ಮಸಾಲೆ ಪುರಿ ವಿಡಿಯೋ
ಪ್ರಮಾಣ: 4 ಪ್ಲೇಟ್ ಗಾಗುವಷ್ಟು
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)
- 20 - 25 ಪೂರಿ ಅಥವಾ ಪಾಪಡಿ (ಚಾಟ್ಗಳಿಗಾಗಿ ಬಳಸಲಾಗುತ್ತದೆ)
- 2 ಸಣ್ಣದಾಗಿ ಹೆಚ್ಚಿದ ಈರುಳ್ಳಿ
- 2 ಸಣ್ಣದಾಗಿ ಹೆಚ್ಚಿದ ಟೊಮೆಟೊ
- 4 ಟೇಬಲ್ ಚಮಚ ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು
- 4 ಟೇಬಲ್ ಚಮಚ ಸೇವ್
ಗ್ರೇವಿಗೆ ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)
- 1/2 ಕಪ್ ಒಣ ಬಟಾಣಿ
- 1/2 ಆಲೂಗಡ್ಡೆ
- 1/2 ಕ್ಯಾರೆಟ್ (ಬೇಕಾದಲ್ಲಿ)
- 1 - 2 ಹಸಿರು ಮೆಣಸು
- 2 ಟೇಬಲ್ ಚಮಚ ಕತ್ತರಿಸಿದ ಕೊತ್ತಂಬರಿ ಸೊಪ್ಪು
- 1 ಟೇಬಲ್ ಚಮಚ ಕತ್ತರಿಸಿದ ಪುದಿನ
- 1 ಕತ್ತರಿಸಿದ ಈರುಳ್ಳಿ
- 4 - 5 ಎಸಳು ಬೆಳ್ಳುಳ್ಳಿ
- 1 cm ಉದ್ದದ ಶುಂಠಿ
- 1 ಕತ್ತರಿಸಿದ ಟೊಮೆಟೊ
- 1/2 ಟೀಸ್ಪೂನ್ ಅಚ್ಚಖಾರದ ಪುಡಿ (ನಿಮ್ಮ ರುಚಿಗೆ ತಕ್ಕಂತೆ ಹೊಂದಿಸಿ)
- 1 ಟೀಸ್ಪೂನ್ ಪಾವ್ ಬಾಜಿ ಪುಡಿ
- 1/2 ಟೀಸ್ಪೂನ್ ಗರಂ ಮಸಾಲಾ ಪುಡಿ
- 1/2 ಚಮಚ ಚಾಟ್ ಮಸಾಲಾ
- ಒಂದು ದೊಡ್ಡ ಚಿಟಿಕೆ ಅರಿಶಿನ ಪುಡಿ
- ನಿಮ್ಮ ರುಚಿಗೆ ತಕ್ಕಂತೆ ಉಪ್ಪು
ಮಸಾಲೆ ಪುರಿ ಮಾಡುವ ವಿಧಾನ:
- ಮೊದಲಿಗೆ ಗ್ರೇವಿ ತಯಾರಿಸೋಣ. ಬಟಾಣಿಯನ್ನು ರಾತ್ರೆಯಿಡಿ ನೆನೆಸಿಡಿ.
- ನೆನೆಸಿದ ಬಟಾಣಿ, ಆಲೂಗಡ್ಡೆ ಮತ್ತು ಕ್ಯಾರಟ್ ನ್ನು ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ.
- ಒಂದು ಬಾಣಲೆಯಲ್ಲಿ ಹೆಚ್ಚಿದ ಈರುಳ್ಳಿ, ಶುಂಠಿ ಮತ್ತು ಬೆಳ್ಳುಳ್ಳಿಯನ್ನು ತೆಗೆದು ಕೊಂಡು ಮಧ್ಯಮ ಉರಿಯಲ್ಲಿ ಹುರಿಯಿರಿ.
- ಈರುಳ್ಳಿ ಮೆತ್ತಗಾದ ಮೇಲೆ ಹಸಿರು ಮೆಣಸು, ಕೊತ್ತಂಬರಿ ಸೊಪ್ಪು ಮತ್ತು ಪುದಿನ ಹಾಕಿ ಹುರಿಯಿರಿ.
- ಕೊನೆಯಲ್ಲಿ ಟೊಮೇಟೊ ಹಾಕಿ ಹುರಿಯಿರಿ. ಸ್ಟವ್ ಆಫ್ ಮಾಡಿ.
- ಬಟಾಣಿ, ಆಲೂಗಡ್ಡೆ ಮತ್ತು ಕ್ಯಾರಟ್ ಬೆಂದ ನಂತ್ರ... ಬೇಯಿಸಿದ ಆಲೂಗಡ್ಡೆ, ಕ್ಯಾರಟ್ ಮತ್ತು ಎರಡು ಸೌಟಿನಷ್ಟು ಬಟಾಣಿಯನ್ನು ಹುರಿದ ಪದಾರ್ಥಗಳೊಂದಿಗೆ ಸೇರಿಸಿ ನುಣ್ಣನೆ ಅರೆಯಿರಿ.
- ಅರೆದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ ಮಸಾಲೆ ಪುಡಿಗಳನ್ನು ಸೇರಿಸಿ (ಅಚ್ಚಖಾರದ ಪುಡಿ, ಪಾವ್ ಬಾಜಿ ಪುಡಿ, ಗರಂ ಮಸಾಲಾ ಪುಡಿ, ಚಾಟ್ ಮಸಾಲಾ, ಅರಿಶಿನ ಪುಡಿ). ಉಪ್ಪನ್ನೂ ಸೇರಿಸಿ.
- ಉಳಿದ ಬೇಯಿಸಿದ ಬಟಾಣಿಯನ್ನೂ ಬೇಯಿಸಿದ ನೀರಿನೊಂದಿಗೆ ಸೇರಿಸಿ.
- ಅಗತ್ಯವಿದ್ದಷ್ಟು ನೀರು ಸೇರಿಸಿ ಕುದಿಸಿ. ಗ್ರೇವಿ ತಯಾರಾಯಿತು.
- ಸರ್ವಿಂಗ್ ಪ್ಲೇಟ್ ನಲ್ಲಿ ಪೂರಿಗಳನ್ನ ತೆಗೆದುಕೊಂಡು ಪುಡಿಮಾಡಿ.
- ಮೇಲಿನಿಂದ 4 ಸೌಟಿನಷ್ಟು ತಯಾರಿಸಿದ ಗ್ರೇವಿಯನ್ನು ಹಾಕಿ.
- ನಂತರ ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಟೊಮೆಟೊ, ಕೊತ್ತಂಬರಿ ಸೊಪ್ಪು ಮತ್ತು ಸೇವ್ ನಿಂದ ಅಲಂಕರಿಸಿ. ಕೂಡಲೇ ಬಡಿಸಿ. ಸವಿದು ಆನಂದಿಸಿ.
Good recipe. How to print recipe?
ಪ್ರತ್ಯುತ್ತರಅಳಿಸಿ