ಎಳ್ಳು ಜ್ಯೂಸು ಮಾಡುವ ವಿಧಾನ
ಎಳ್ಳು ಜ್ಯೂಸು ಮಾಡುವ ವಿಧಾನವನ್ನು ಹಂತ ಹಂತವಾಗಿ ವಿವರಿಸಲಾಗಿದೆ. ಎಳ್ಳು ಜ್ಯೂಸನ್ನು ಎಳ್ಳು, ಬೆಲ್ಲ ಮತ್ತು ಹಾಲನ್ನು ಬಳಸಿ ತಯಾರಿಸಲಾಗುತ್ತದೆ. ಇದು ತುಂಬಾ ಸುಲಭ ಮತ್ತು ರುಚಿಕರವಾದ ಪಾನೀಯ ಆಗಿದೆ. ಈ ರೀತಿಯ ಜ್ಯೂಸನ್ನು ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಬೇಸಿಗೆ ಕಾಲದಲ್ಲಿ ಅನೇಕ ಅಂಗಡಿಗಳಲ್ಲಿ ಮಾರಲಾಗುತ್ತದೆ.ಎಳ್ಳನ್ನು ಉಷ್ಣ ಆಹಾರ ಎನ್ನುತ್ತಾರೆ. ಆದರೆ ಎಳ್ಳೆಣ್ಣೆ ಮತ್ತು ಈ ಎಳ್ಳಿನ ಜ್ಯೂಸನ್ನು ತಂಪು ಎನ್ನುತ್ತಾರೆ. ಹೇಗೆಂದು ನನಗೆ ಗೊತ್ತಿಲ್ಲ. ಯಾರಿಗಾದರೂ ಗೊತ್ತಿದ್ದರೆ ನನಗೆ ದಯವಿಟ್ಟು ತಿಳಿಸಿ.
ಎಳ್ಳು ಅನೇಕ ಆರೋಗ್ಯಕಾರಿ ಅಂಶಗಳನ್ನು ಹೊಂದಿದೆ. ಕ್ಯಾಲ್ಸಿಯಂ, ತಾಮ್ರ, ಮ್ಯಾಂಗನೀಸ್, ರಂಜಕ, ಮೆಗ್ನೀಷಿಯಂ, ಕಬ್ಬಿಣ, ಸತು, ಜೀವಸತ್ವ B1 ಮತ್ತು ಸೆಲೆನಿಯಮ್ ಹೇರಳವಾಗಿದೆ ಎನ್ನಲಾಗಿದೆ. ಆಸ್ತಮಾ, ರಕ್ತದೊತ್ತಡ, ಹೃದಯಾಘಾತ, ಪಾರ್ಶ್ವವಾಯು, ಕರುಳಿನ ಕ್ಯಾನ್ಸರ್, ಆಸ್ಟಿಯೊಪೊರೋಸಿಸ್, ಮೈಗ್ರೇನ್ ಮತ್ತು ಮಧುಮೇಹ ಹೃದಯ ರೋಗ ಚಿಕಿತ್ಸೆಯಲ್ಲಿ ಬಹಳ ಅನುಕೂಲಕರ ಎಂದು ಹೇಳಲಾಗುತ್ತದೆ. ಈಗ ಎಳ್ಳು ಜ್ಯೂಸು ಮಾಡುವ ವಿಧಾನವನ್ನು ನೋಡೋಣ.
ಎಳ್ಳು ಜ್ಯೂಸು ವಿಡಿಯೋ
ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 5 ನಿಮಿಷ
ಪ್ರಮಾಣ: ಇಬ್ಬರಿಗೆ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )
1/2 ಕಪ್ ಬಿಳಿ ಎಳ್ಳು1/2 ಕಪ್ ಪುಡಿ ಮಾಡಿದ ಬೆಲ್ಲ
2 ಕಪ್ ನೀರು (ಅರೆಯಲು ಬೇಕಾದ ನೀರು ಸೇರಿಸಿ)
2 ಕಪ್ ಕುದಿಸಿ ಆರಿಸಿದ ಹಾಲು
ಒಂದು ಏಲಕ್ಕಿ
ಎಳ್ಳು ಜ್ಯೂಸು ಮಾಡುವ ವಿಧಾನ:
ಒಂದು ಬಾಣಲೆ ತೆಗೆದುಕೊಂಡು ಎಳ್ಳನ್ನು ಎಣ್ಣೆ ಹಾಕದೆ ಹುರಿಯಿರಿ. ಸ್ವಲ್ಪ ಹುರಿದರೆ ಅಂದರೆ ಎಳ್ಳು ಉಬ್ಬುವವರೆಗೆ ಹುರಿದರೆ ಸಾಕು. ಹುರಿದ ಎಳ್ಳು ತಣ್ಣಗಾಗುವವರೆಗೆ ಕಾಯಿರಿ.ಈಗ ಎಳ್ಳು, ಬೆಲ್ಲ ಮತ್ತು ಏಲಕ್ಕಿಯನ್ನು ಮಿಕ್ಸಿ ಜಾರಿಗೆ ಹಾಕಿ.
ಅಗತ್ಯವಿರುವಷ್ಟು ನೀರು ಬಳಸಿಕೊಂಡು ನಯವಾಗಿ ಅರೆಯಿರಿ.
ಅರೆದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ, ಹಾಲು ಮತ್ತು ಉಳಿದ ನೀರು ಸೇರಿಸಿ ಚೆನ್ನಾಗಿ ಕಲಕಿ. ಫ್ರಿಜ್ ನಲ್ಲಿಟ್ಟು ತಂಪಾದ ಎಳ್ಳು ಜ್ಯೂಸನ್ನು ಸವಿಯಿರಿ.
Supper
ಪ್ರತ್ಯುತ್ತರಅಳಿಸಿSupper
ಪ್ರತ್ಯುತ್ತರಅಳಿಸಿDhanyavadagalu
ಅಳಿಸಿI tried and it was tasty.. Thank you for the recipe.
ಪ್ರತ್ಯುತ್ತರಅಳಿಸಿ