ದೊಡ್ಡಪತ್ರೆ-ಎಳ್ಳಿನ ಸಿಹಿ ಚಟ್ನಿ ಮಾಡುವ ವಿಧಾನ
ದೊಡ್ಡಪತ್ರೆ ಚಟ್ನಿಯನ್ನು ದೊಡ್ಡಪತ್ರೆ ಎಲೆ, ಹುರಿದ ಎಳ್ಳು, ಒಣಮೆಣಸಿನ ಕಾಯಿ, ಬೆಳ್ಳುಳ್ಳಿ, ತೆಂಗಿನ ತುರಿ, ಬೆಲ್ಲ ಮತ್ತು ಹುಣಿಸೆಹಣ್ಣು ಹಾಕಿ ತಯಾರಿಸಲಾಗುತ್ತದೆ. ಎಳ್ಳು ಮತ್ತು ಬೆಲ್ಲ ಹಾಕಿ ಮಾಡುವುದರಿಂದ ಈ ಚಟ್ನಿ ಒಂದು ವಿಶೇಷವಾದ ರುಚಿಯನ್ನು ಹೊಂದಿರುತ್ತದೆ. ಈ ಸರಳವಾದ ಚಟ್ನಿ ಅನ್ನದ ಜೊತೆಗೆ ತಿನ್ನಲು ರುಚಿಯಾಗಿರುತ್ತದೆ.
ದೊಡ್ಡಪತ್ರೆ ದೇಶ ವಿದೇಶಗಳಲ್ಲಿ ಚಿರಪರಿಚಿತವಾಗಿರುವ ಮತ್ತು ಅನೇಕ ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯವಾಗಿದ್ದು, ಇದನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಈ ಸಸ್ಯದ ಬಗ್ಗೆ ಹೆಚ್ಚಿನ ಮಾಹಿತಿ, ವಿವಿಧ ಹೆಸರುಗಳು, ಔಷಧೀಯ ಗುಣಗಳು ಮತ್ತು ಇನ್ನಿತರ ಅಡುಗೆಗಳನ್ನು ಓದಲು ನಮ್ಮ "ದೊಡ್ಡಪತ್ರೆಯ ಹಲವಾರು ಅಡುಗೆಗಳು" ಪೋಸ್ಟನ್ನು ವೀಕ್ಷಿಸಿ.
ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 15 ನಿಮಿಷ
ಪ್ರಮಾಣ : 3 ಜನರಿಗೆ
ಅಡುಗೆ ಸಮಯ : 15 ನಿಮಿಷ
ಪ್ರಮಾಣ : 3 ಜನರಿಗೆ
ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )
- 15-20 ದೊಡ್ಡಪತ್ರೆ ಎಲೆಗಳು
- 2-4 ಒಣ ಮೆಣಸಿನಕಾಯಿ
- 1 ಟಿಸ್ಪೂನ್ ಎಳ್ಳು
- 2 ಬೇಳೆ ಬೆಳ್ಳುಳ್ಳಿ
- ಸಣ್ಣ ಗೋಲಿ ಗಾತ್ರದ ಹುಣಿಸೆಹಣ್ಣು
- 1/2 ಟಿಸ್ಪೂನ್ ಬೆಲ್ಲ
- 1 ಕಪ್ ತೆಂಗಿನ ತುರಿ
- ಉಪ್ಪು ರುಚಿಗೆ ತಕ್ಕಷ್ಟು.
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1 ಒಣ ಮೆಣಸಿನಕಾಯಿ
- 1/2 ಟೀಸ್ಪೂನ್ ಸಾಸಿವೆ
- 1/2 ಟೀಸ್ಪೂನ್ ಉದ್ದಿನಬೇಳೆ
- 2 ಟೀಸ್ಪೂನ್ ಅಡುಗೆ ಎಣ್ಣೆ
ದೊಡ್ಡಪತ್ರೆ ಎಳ್ಳು ಚಟ್ನಿ ಮಾಡುವ ವಿಧಾನ:
- ದೊಡ್ಡಪತ್ರೆ ಎಲೆಗಳನ್ನು ತೊಳೆದು ಕತ್ತರಿಸಿಟ್ಟು ಕೊಳ್ಳಿ.
- ಒಂದು ಬಾಣಲೆ ಬಿಸಿಮಾಡಿ, ಅದಕ್ಕೆ ಕೆಂಪು ಮೆಣಸಿನಕಾಯಿ ಮತ್ತು ಎಳ್ಳನ್ನು ಹಾಕಿ ಹುರಿಯಿರಿ.
- ಎಳ್ಳು ಸ್ವಲ್ಪ ಉಬ್ಬಿದ ಕೂಡಲೇ ಕತ್ತರಿಸಿದ ಬೆಳ್ಳುಳ್ಳಿ ಹಾಕಿ. ಒಂದು ನಿಮಿಷದ ಕಾಲ ಅಥವಾ ಬೆಳ್ಳುಳ್ಳಿ ಹಸಿವಾಸನೆ ಹೋಗುವವರೆಗೆ ಹುರಿಯಿರಿ.
- ಈಗ ಅದೇ ಬಾಣಲೆಗೆ ಕತ್ತರಿಸಿದ ದೊಡ್ಡಪತ್ರೆ ಎಲೆಗಳನ್ನು ಹಾಕಿ ಹುರಿಯಿರಿ.
- ಎಲೆಗಳು ಬಾಡಿದ ಕೂಡಲೇ ಸ್ಟೋವ್ ಆಫ್ ಮಾಡಿ.
- ಹುರಿದ ಪದಾರ್ಥಗಳನ್ನು ತೆಂಗಿನತುರಿ, ಉಪ್ಪು, ಬೆಲ್ಲ ಮತ್ತು ಹುಣಿಸೆ ಹಣ್ಣಿನೊಂದಿಗೆ ನೀರು ಸೇರಿಸಿ ಅರೆಯಿರಿ.
- ಒಣಮೆಣಸು, ಸಾಸಿವೆ, ಉದ್ದಿನಬೇಳೆಯ ಒಗ್ಗರಣೆ ಕೊಡಿ. ಬಿಸಿ ಬಿಸಿ ಅನ್ನದೊಂದಿಗೆ ಬಡಿಸಿ.
NnaroabriFort Collins Denise Holmes Download crack
ಪ್ರತ್ಯುತ್ತರಅಳಿಸಿelmasnochamb