ಸೌತೆಕಾಯಿ ಇಡ್ಲಿ ಅಥವಾ ಕಡುಬು ಮಾಡುವ ವಿಧಾನ
ಈ ಅಡುಗೆ ಹೆಚ್ಚಿನ ಮಕ್ಕಳು ಇಷ್ಟ ಪಡುವ ಅಡುಗೆಯಾಗಿದ್ದು, ತರಕಾರಿ ತಿನ್ನಲು ಇಷ್ಟಪಡದ ಮಕ್ಕಳಿಗೆ ಒಳ್ಳೆಯ ಆಹಾರವೊಂದನ್ನು ತಿನ್ನಿಸಲು ಸಹಕಾರಿಯಾಗಿದೆ. ಈ ಇಡ್ಲಿಯನ್ನು ಬಿಸಿ ಬಿಸಿಯಾಗಿ ತೆಂಗಿನಕಾಯಿ ಚಟ್ನಿಯೊಂದಿಗೆ ಸೇವಿಸಿದರೆ ಬಲು ರುಚಿ.
ನಾನು ಬೆಳಗ್ಗಿನ ತಿಂಡಿಗೆ ಇದನ್ನು ತಯಾರಿಸುವಾಗ, ಅದರೊಟ್ಟಿಗೆ ಚೀನಿಕಾಯಿ ಸಿಹಿ ಇಡ್ಲಿ ಸಹ ಮಾಡುತ್ತೇನೆ. ಈ ಎರಡು ಇಡ್ಲಿಗಳನ್ನು ಒಟ್ಟಿಗೆ ಮಾಡಿದರೆ ಚೆನ್ನಾಗಿ ಅನ್ನಿಸುತ್ತದೆ.
ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 15 ನಿಮಿಷ
ಪ್ರಮಾಣ : 2 ಜನರಿಗೆ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )
- 2 ಕಪ್ ತುರಿದ ಸೌತೆಕಾಯಿ
- 0.5 - 1 ಕಪ್ ತೆಂಗಿನ ತುರಿ
- 1 - 1.5 ಕಪ್ ಇಡ್ಲಿ ರವಾ (ಸೌತೆಕಾಯಿ ನೀರಿನಂಶ ಅವಲಂಬಿಸಿ)
- 1 - 2 ಹಸಿರು ಮೆಣಸಿನಕಾಯಿ
- 2 ಟೇಬಲ್ ಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು
- ಉಪ್ಪು ರುಚಿಗೆ ತಕ್ಕಷ್ಟು.
ಸೌತೆಕಾಯಿ ಇಡ್ಲಿ ಅಥವಾ ಕಡುಬು ಮಾಡುವ ವಿಧಾನ:
- ಒಂದು ಪಾತ್ರೆ ತೆಗೆದು ಕೊಂಡು ಅದರಲ್ಲಿ ತುರಿದ ಸೌತೆಕಾಯಿ ಹಾಕಿ.
- ಅದಕ್ಕೆ ಇಡ್ಲಿ ರವೆಯನ್ನು ಸೇರಿಸಿ.
- ತೆಂಗಿನ ತುರಿ ಮತ್ತು ಹಸಿರು ಮೆಣಸಿನಕಾಯಿಯನ್ನು ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ. ನೀರು ಹಾಕಬೇಡಿ.
- ಈಗ ಪುಡಿಮಾಡಿದ ತೆಂಗಿನ ತುರಿ ಮತ್ತು ಹಸಿಮೆಣಸಿನ ಕಾಯಿಯನ್ನು ಸೌತೆಕಾಯಿ ಮತ್ತು ರವೆ ಇರುವ ಪಾತ್ರೆಗೆ ಸೇರಿಸಿ.
- ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ.
- ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ.
- ಎಲ್ಲವನ್ನು ಚೆನ್ನಾಗಿ ಕಲಸಿ, 5 ನಿಮಿಷ ಹಾಗೆ ಬಿಡಿ. ಹಿಟ್ಟು ಸುಲಭವಾಗಿ ಬೀಳುವಷ್ಟು ನೀರಾಗಿರಬೇಕು ಆದರೆ ಕೈಗಳಿಂದ ತೆಗೆದು ಹಾಕುವಷ್ಟು ಗಟ್ಟಿಯಾಗಿರಬೇಕು.
- ಈಗ ಇಡ್ಲಿ ತಟ್ಟೆ ತೆಗೆದುಕೊಂಡು, ಸ್ವಲ್ಪ ಹಿಟ್ಟನ್ನು ಹಾಕಿ, ಕೈಯಲ್ಲಿ ಒತ್ತಿ, ಇಡ್ಲಿ ರೂಪಕ್ಕೆ ತನ್ನಿ.
- 15 ನಿಮಿಷ ಸೆಕೆ / ಆವಿಯಲ್ಲಿ ಬೇಯಿಸಿ. ಇಡ್ಲಿ ಬಿಸಿಯಾಗಿರುವಾಗಲೇ ಚಟ್ನಿಯೊಂದಿಗೆ ಬಡಿಸಿ.
ನನ್ನ ಅಜ್ಜಿ ಮಾಡುತ್ತಿದ್ದ ರುಚಿಯಾದ ತಿಂಡಿ.
ಪ್ರತ್ಯುತ್ತರಅಳಿಸಿತುಂಬಾ ಸಂತೋಷ ಜೊ ರವರೆ, ನಮ್ಮ ಮನೆಯಲ್ಲೂ ಎಲ್ಲರಿಗೆ ಪ್ರಿಯವಾದ ತಿಂಡಿ ಇದು.
ಅಳಿಸಿನನ್ನ ಅಜ್ಜಿ ಮಾಡುತ್ತಿದ್ದ ರುಚಿಯಾದ ತಿಂಡಿ.
ಪ್ರತ್ಯುತ್ತರಅಳಿಸಿಆರೋಗ್ಯಕರವಾದ ರುಚಿಯಾದ ಬೇಗ ಮಾಡಬಹುದಾದ ತಿಂಡಿ.... Presentation ತುಂಬಾ ಚೆನ್ನಾಗಿದೆ...
ಪ್ರತ್ಯುತ್ತರಅಳಿಸಿಬೂದುಗುಂಬಳ ಬಳಸಿಯೂ ಮಾಡಬಹುದು...
ಹೌದು ಸವಿತಾರವರೇ, ಆರೋಗ್ಯಕರ ಮತ್ತು ಜಟ್-ಪಟ್ ಅಡುಗೆ. ಇನ್ನೊಮ್ಮೆ ಮಾಡುವಾಗ ಬೂದುಗುಂಬಳ ಹಾಕಿ ಮಾಡುತ್ತೇನೆ. ನಿಮ್ಮೆಲ್ಲರ ಸಹಕಾರ ಹೀಗೆ ಇರಲಿ, ಕಾಮೆಂಟ್ ಮಾಡಿದ್ದಕ್ಕೆ ಖುಷಿಯಾಯಿತು.
ಅಳಿಸಿ